ನವದೆಹಲಿ: ಪ್ರಸ್ತುತ ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಕೇಂದ್ರ ಸರ್ಕಾರ ಶ್ವೇತಪತ್ರ ಮಂಡಿಸಲು ಉದ್ದೇಶಿಸಿದೆ. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಪಕ್ಷವು ‘ಕಪ್ಪು ಕಾಗದ'( ಬ್ಲ್ಯಾಕ್ ಪೇಪರ್) ಬಿಡುಗಡೆ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ೧೦ ವರ್ಷಗಳ ಆಡಳಿತದ ಮೇಲೆ ಕಾಂಗ್ರೆಸ್‌ನ ‘ಕಪ್ಪು ಪತ್ರ ‘ ಹೊರಡಿಸಿದೆ. ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಕಪ್ಪು ಪತ್ರವನ್ನು ಬಿಡುಗಡೆ ಮಾಡಲಾಗಿದೆ.
ಅವರು ಸಂಸತ್ತಿನಲ್ಲಿ ಮಾತನಾಡಿದಾಗಲೆಲ್ಲಾ ತಮ್ಮ ಸಾಧನೆಗಳ ಬಗ್ಗೆಯೇ ಹೇಳಿಕೊಳ್ಳುತ್ತಾರೆ ಆದರೆ ವೈಫಲ್ಯಗಳ ಬಗ್ಗೆ ಮಾತನಾಡುವುದಿಲ್ಲ. ನಮಗೂ ಆ ಬಗ್ಗೆ ಮಾತನಾಡಲು ಅವಕಾಶ ನೀಡುವುದಿಲ್ಲ. ಆರ್ಥಿಕತೆ ನಿಭಾಯಿಸಲು ಅವರು ವಿಫಲರಾಗಿದ್ಧಾರೆ. ದೇಶದಲ್ಲಿ ಇಂದು ನಿರುದ್ಯೋಗ ದೊಡ್ಡ ಸಮಸ್ಯೆಯಾಗಿದೆ, ಆದರೆ ಅವರು ಅದರ ಬಗ್ಗೆ ಮಾತನಾಡುವುದಿಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಾ ಹೇಳಿದರು.
ನೆಹರೂ ಅವರ ಅವಧಿಯಲ್ಲಿ ಸ್ಥಾಪಿತಗೊಂಡ ಹಾಗೂ ಉದ್ಯೋಗಗಳನ್ನು ಒದಗಿಸಿದ ಸಾರ್ವಜನಿಕ ರಂಗದ ಸಂಸ್ಥೆಗಳ ಬಗ್ಗೆ ಪ್ರಧಾನಿ ಮಾತನಾಡುವುದಿಲ್ಲ, ಅವರು ಇಂದಿರಾ ಜೀ, ರಾಜೀವ್ ಜೀ ಮತ್ತು ನೆಹರೂ ಜೀ ಅವರನ್ನು ನಿಂದಿಸುತ್ತಾರೆ, ಆದರೆ ಮನ್‌ರೇಗಾ ಕುರಿತು ಮಾತನಾಡುತ್ತಾರೆ, ಆದರೆ ಅದಕ್ಕಾಗಿ ಹಣ ಬಿಡುಗಡೆಗೊಳಿಸದೆ ಗ್ರಾಮೀಣ ಭಾಗದ ಜನರಿಗೆ ಕಷ್ಟವಾಗಿದೆ ಎಂದರು ಹೇಳಿದರು.