ಕೆ.ಆರ್.ಪೇಟೆ: ಈ ದೇಶಕ್ಕೆ 10 ವರ್ಷದಲ್ಲಿ ಮೋದಿ ಒಂದು ಡ್ಯಾಂ ಕಟ್ಟಿದ್ದಾರಾ? ಹೇಳಲಿ ನಾನು ಅವರಿಗೆ ಗುಲಾಮನಾಗ್ತೇನೆ. ಸುಳ್ಳು ಹೇಳುವವರು ಪಾಳೆಗಾರರಾಗಿದ್ದಾರೆ ಸತ್ಯವಂತರು ಮನೆ ಸೇರಿಕೊಂಡಿದ್ದಾರೆ ಎಂದು ಶಾಸಕ ನರೇಂದ್ರ ಸ್ವಾಮಿ ತಿಳಿಸಿದರು.
ಕೆ.ಆರ್.ಪೇಟೆಯ ಖಾಸಗಿ ಸಮುದಾಯ ಭವನದಲ್ಲಿ ಗ್ಯಾರಂಟಿ ಫಲಾನುಭವಿಗಳ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದರು.
ಇವತ್ತಿನ ಸರ್ಕಾರಗಳ ಬಗ್ಗೆ ಚರ್ಚೆ ಜವಾಬ್ದಾರಿ ನಿಮ್ಮ ಮೇಲಿದೆ. ನಾವೆಲ್ಲರೂ ಸ್ವಾತಂತ್ರ್ಯ ನಂತರ ಹುಟ್ಟಿರುವವರು. ಸ್ವತಂತ್ರ ಪೂರ್ವದಲ್ಲಿ ನಮ್ಮ ದೇಶ ಹೇಗಿತ್ತು? ಇವಾಗ ಅಭಿವೃದ್ಧಿ ಪತದತ್ತ ಸಾಗುತ್ತಿದೆ.ಸುಳ್ಳು ಹೇಳುವವರು ಪಾಳೆಗಾರರಾಗಿದ್ದಾರೆ ಸತ್ಯವಂತರು ಮನೆ ಸೇರಿಕೊಂಡಿದ್ದಾರೆ ಎಂದು ಹರಿಹಾಯ್ದರು.
ಈ ದೇಶ ಎಲ್ಲಾ ಜಾತಿ ಒಂದಾಗಿ ಮಕ್ಕಳಾಗಿ ಬಾಳುತ್ತಿದ್ದೇವೆ. ಧರ್ಮ, ಸಂಘರ್ಷದಿಂದ ನಡೆಯಲು ಸಾಧ್ಯನಾ? ನರೇಂದ್ರ ಮೋದಿ ಅವರಿಗೆ ಪ್ರಶ್ನೆ ಕೇಳ್ತೇನೆ. ನರೇಂದ್ರ ಮೋದಿ ರಾಜಕಾರಣಕ್ಕೆ ಬರುವ ಮುನ್ನ ನಿಜವಾದ ಬಿಜೆಪಿ ನಾಯಕ ವಾಜಪೇಯಿ ಅವರು ಇಂದಿರಾ ಗಾಂಧಿಯವರನ್ನ ದುರ್ಗೆಮಾತೆಗೆ ಹೋಲಿಸಿದ್ರು ಬ್ಯಾಂಕ್ ರಾಷ್ಟ್ರೀಕರಣ ಮಾಡಿದ್ದು ಇಂದಿರಾಗಾಂಧಿ ಅವರು ಎಂದು ಹೇಳಿದರು.
ಬಿಜೆಪಿದು ಮಾತನಾಡುವುದೇ ಸಾಧನೆಯಾಗಿದೆ. ಶಾಂತಿನಾಡು ಮಂಡ್ಯ ಜಿಲ್ಲೆಗೆ ಬೆಂಕಿ ಹಚ್ಚಲು ಬರ್ತಿದ್ದಾರೆ. ಜಿಲ್ಲೆ ಒಡೆದು ಲಾಭ ಮಾಡ್ಕೊಳ್ತಿದ್ದಾರೆ. ಗ್ಯಾರಂಟಿ ಯೋಜನೆಗೆ ವಿರೋಧ ಪಕ್ಷ ಟೀಕೆ ಮಾಡ್ತಾರೆ. ನರೇಂದ್ರ ಮೋದಿ ಯೋಜನೆ ಬಗ್ಗೆ ಮಾತನಾಡಿ ದಿವಾಳಿಯಾಗುತ್ತೆ ಅಂತಾರೆ ಎಂದರು.
ಮನೆಗೆ 2 ಸಾವಿರ ಕೊಡ್ತಿದ್ದೇವೆ. ಬಹಳ ಜನ ಕೂಗಾಡಿ ಸರ್ಕಾರದ ಹಣ. ರಾಜಕಾರಣ ಬರಿ ವೋಟಿಗಾಗಿ ಅಲ್ಲ. ಜನರ ಅಭಿವೃದ್ಧಿ ಮಾಡುವುದೇ ನಮ್ಮ ಯೋಜನೆ. ಜಾತಿ ಧರ್ಮದ ಹೆಸರಲ್ಲಿ ಮತ ಕೇಳ್ತಾರೆ ಬರ್ತಾರೆ. ಡ್ಯಾಂ , ಕಾರ್ಖಾನೆ ಕಟ್ಟಿದ್ದು ಕಾಂಗ್ರೆಸ್, ಏನು ಮೋದಿ ಬಂದು ಮಾಡಿದ್ರ? ಈ ದೇಶಕ್ಕೆ 10 ವರ್ಷದಲ್ಲಿ ಒಂದು ಡ್ಯಾಂ ಕಟ್ಟಿದ್ದಾರಾ? ಹೇಳಲಿ ನಾನು ಅವರಿಗೆ ಗುಲಾಮನಾಗ್ತೇನೆ ಗ್ಯಾರಂಟಿ ಕೊಟ್ಟಿರುವುದು ತಪ್ಪ? ಜವಾಬ್ದಾರಿ ಯೋಜನೆಯನ್ನು ಸಿದ್ದರಾಮಯ್ಯ, ಡಿಕೆ ಕೊಡ್ತಿದ್ದಾರೆ ಎಂದು ಹೇಳಿದರು.
ಹಾಸನ, ಕೆ.ಆರ್.ಪೇಟೆ ಒಂದೆ ತರ ಇದ್ಯಾ? ವೇದಿಕೆಯಲ್ಲಿ ಶಾಸಕ ಹೆಚ್.ಟಿ. ಮಂಜುಗೆ ನರೇಂದ್ರ ಸ್ವಾಮಿ ಪ್ರಶ್ನೆ ಮಾಡಿದರು.
ಕಳೆದ ಬಾರಿ 8ಕ್ಕೆ 8 ಸ್ಥಾನ ಕೊಟ್ಟಿದ್ರು ಏನಾಯಿತು. 8 ಸಾವಿರ ಕೋಟಿ ಕೊಡ್ತೇವೆ ಅಂದಿದ್ರು ಮಗ ಸೋತ ಮೇಲೆ ಎಲ್ಲಿ ಹೋಯಿತು. ಮಂಜುಗೆ ಬೇಜಾರಾಗುತ್ತೆ. ಅಂಕಿಅಂಶಗಳ ಮೇಲೆ ಮಾತನಾಡ್ತಿದ್ದೇನೆ. ನಮ್ಮ ಸರ್ಕಾರಕ್ಕೆ ಬೆಂಬಲ ನೀಡಿ ಎಂದು ಮನವಿ ಮಾಡಿದರು.
ಸಮಾವೇಶದಲ್ಲಿ ಸಚಿವ ಎನ್.ಚಲುವರಾಯಸ್ವಾಮಿ, ಶಾಸಕ ಹೆಚ್.ಟಿ.ಮಂಜು, ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್, ಡಿಸಿ ಡಾ.ಕುಮಾರ, ಸೇರಿ ಜಿಲ್ಲಾ ಮಟ್ಟದ ಅಧಿಕಾರಿಗಳು, ಫಲಾನುಭವಿಗಳು ಭಾಗಿಯಾಗಿದರು.