ಮಂಡ್ಯ: ಜೆಡಿಎಸ್ ಶಾಸಕ ಭಾಷಣ ಆರಂಭಿಸುತ್ತಿದ್ದಂತೆ ವೇದಿಕೆಯಿಂದ ಶಾಸಕ ನರೇಂದ್ರ ಸ್ವಾಮಿ ಹೊರಟು ಹೋಗಿದ್ದಾರೆ.
ಮಂಡ್ಯ ಜಿಲ್ಲೆ ಕೆ.ಆರ್.ಪೇಟೆಯಲ್ಲಿ ನಡೆದ ಗ್ಯಾರಂಟಿ ಯೋಜನೆಯ ಫಲಾನುಭವಿಗಳ ಸಮಾವೇಶದಲ್ಲಿ ಘಟನೆ ನಡೆದಿದೆ.
ತಮ್ಮ ಭಾಷಣದಲ್ಲಿ ಜೆಡಿಎಸ್ ವಿರುದ್ಧ ನರೇಂದ್ರ ಸ್ವಾಮಿ ವಾಗ್ದಾಳಿ ನಡೆಸಿದ್ದ, ಈ ವೇಳೆ ತಾಳ್ಮೆಯಿಂದ ಕುಳಿತು ಜೆಡಿಎಸ್ ಶಾಸಕ ಎಚ್.ಟಿ.ಮಂಜು ಭಾಷಣ ಕೇಳಿಸಿಕೊಂಡಿದ್ದರು.
ಎಚ್.ಟಿ.ಮಂಜು ಭಾಷಣ ಆರಂಭಿಸುತ್ತಿದ್ದಂತೆ ನರೇಂದ್ರ ಸ್ವಾಮಿ ಎದ್ದು ಹೊರಟಿದ್ದು, ಭಾಷಣ ಮುಗಿಯುವವರೆಗೂ ಕೂರುವಂತೆ ಮನವಿ ಮಾಡಿದ್ರೂ ವೇದಿಕೆಯಿಂದ ಕೆಳಗಿಳಿದು ಹೋಗಿದ್ದಾರೆ.
ಜೆಡಿಎಸ್ ಶಾಸಕ ಮಂಜು ಕೌಂಟರ್ ಕೊಡಬಹುದು ಎಂಬ ಭೀತಿಯಲ್ಲಿ ಕೈ ಬಿಡಿಸಿಕೊಂಡು ಆತುರಾತುರವಾಗಿ ಹೊರಟ ನರೇಂದ್ರ ಸ್ವಾಮಿ ಹೊರ ನಡೆದಿದ್ದಾರೆ.