ಬೆಂಗಳೂರು: ವಾಹನಗಳಿಗೆ ಹಳೆಯ ನಂಬರ್‌ಪ್ಲೇಟ್ ಬದಲು ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್ ಎಚ್‌ಎಸ್‌ಆರ್‌ಪಿ ಅಳವಡಿಕೆಗೆ ವಿಧಿಸಿದ್ದ ಗಡುವು ಅಂತ್ಯವಾಗುತ್ತಿದ್ದಂತೆ ಅವಧಿ ವಿಸ್ತರಿಸಲು ವಾಹನ ಮಾಲೀಕರ ಒತ್ತಾಯ ಹೆಚ್ಚಾಗುತ್ತಿದೆ.
ಕೇಂದ್ರ ಸಾರಿಗೆ ಇಲಾಖೆ ಆದೇಶದ ಅನುಸಾರ ೨೦೧೯ರ ಏಪ್ರಿಲ್ ೧ಕ್ಕೂ ಮುನ್ನ ಖರೀದಿಸಿದ/ನೊಂದಾಯಿಸಲ್ಪಟ್ಟ ವಾಹನಗಳು ಕಡ್ಡಾಯವಾಗಿ ಎಚ್‌ಎಸ್‌ಆರ್‌ಪಿ ನಂಬರ್‌ಪ್ಲೇಟ್ ಅಳವಡಿಸುವಂತೆ ಸೂಚಿಸಲಾಗಿದೆ. ರಾಜ್ಯದಲ್ಲೇ ೨೦೧೯ರ ಏಪ್ರಿಲ್ ೧ಕ್ಕೂ ಮುನ್ನ ನೋಂದಣಿಯಾಗಿರುವ ವಾಹನಗಳ ಸಂಖ್ಯೆ ಸುಮಾರು ೨ ಕೋಟಿಯಷ್ಟಿದ್ದು, ಹಳೆಯ ನಂಬರ್ ಪ್ಲೇಟ್ ಬದಲಾವಣೆಗೆ ಮೊದಲಿಗೆ ೨೦೨೩ರ ನವೆಂಬರ್ ೧೭ರವರೆಗೆ ಅವಕಾಶ ಕಲ್ಪಿಸಲಾಗಿತ್ತು. ಆದರೆ ಸಾಕಷ್ಟು ವಾಹನಗಳ ಮಾಲೀಕರಿಗೆ ಮಾಹಿತಿಯ ಕೊರತೆ ಹಾಗೂ ಗೊಂದಲದ ಕಾರಣದಿಂದ ಸರಿಯಾದ ಸ್ಪಂದನೆ ವ್ಯಕ್ತವಾಗಿರಲಿಲ್ಲ. ಆದ್ದರಿಂದ ೨೦೨೪ರ ಫೆಬ್ರವರಿ ೧೭ರವರೆಗೆ ಗಡುವು ವಿಸ್ತರಿಸಲಾಗಿತ್ತು.