ಮೈಸೂರು: ಸೂಟ್ ಜೇಬ್ ನಲ್ಲಿಟ್ಟಿದ್ದ ೨.೨೦ ಲಕ್ಷ ಮೌಲ್ಯದ ೭೦ ಗ್ರಾಂ ಚಿನ್ನದ ಮಾಂಗಲ್ಯ ಸರ ಕಳುವಾದ ಘಟನೆ ವಿಜಯನಗರ ಎರಡನೇ ಹಂತದಲ್ಲಿರುವ ಅರುಣ್ ಎಂಬುವರ ಮನೆಯಲ್ಲಿ ನಡೆದಿದೆ.ಮನೆ ಕೆಲಸ ಮಾಡುವ ರೇಖಾ ಎಂಬುವರ ಮೇಲೆ ಅನುಮಾನ ಮೂಡಿದ್ದು ಚಿನ್ನದ ಮಾಂಗಲ್ಯ ಸರ ವಾಪಸ್ ಕೊಡಿಸುವಂತೆ ವಿಜಯನಗರ ಪೊಲೀಸ್ ಠಾಣೆಯಲ್ಲಿ ಅರುಣ್ ರವರು ಪ್ರಕರಣ ದಾಖಲಿಸಿದ್ದಾರೆ.
ಪತ್ನಿ ಜ್ಯೋತಿ ಅರುಣ್ ರವರು ಬೆಂಗಳೂರಿಗೆ ತೆರಳುವ ವೇಳೆ ವಾರ್ಡ್ ರೋಬ್ ನಲ್ಲಿದ್ದ ಪತಿಯ ಸೂಟ್ ಜೇಬಿನಲ್ಲಿ ಮಾಂಗಲ್ಯ ಸರ ಇಟ್ಟಿದ್ದಾರೆ.ನಂತರ ಮರುದಿನ ಬೆಂಗಳೂರಿನಿಂದ ಹಿಂದಿರುಗಿ ಬಂದ ನೋಡಿದಾಗ ಮಾಂಗಲ್ಯ ಸರ ನಾಪತ್ತೆಯಾಗಿದೆ.ಅರುಣ್ ರವರು ಮನೆಯಿಂದ ಹೊರಗೆ ತೆರಳಿದ ವೇಳೆ ಕೆಲಸ ಮಾಡುತ್ತಿದ್ದ ರೇಖಾ ಚಿನ್ನದ ಸರ ಕಳ್ಳತನ ಮಾಡಿದ್ದಾರೆಂದು ಶಂಕಿಸಿ ಪ್ರಕರಣ ದಾಖಲಿಸಿದ್ದಾರೆ.ವಿಜಯನಗರ ಠಾಣೆ ಪೊಲೀಸರು ರೇಖಾಳನ್ನ ವಿಚಾರಣೆಗೆ ಒಳಪಡಿಸಿದ್ದಾರೆ.