Sunday, April 20, 2025
Google search engine

Homeರಾಜ್ಯಸುದ್ದಿಜಾಲಮೂಲ ಜಾನಪದ ಕಲೆಯನ್ನು ಉಳಿಸಿ : ಚಕ್ಕರೆ ಶಿವಶಂಕರ್

ಮೂಲ ಜಾನಪದ ಕಲೆಯನ್ನು ಉಳಿಸಿ : ಚಕ್ಕರೆ ಶಿವಶಂಕರ್

ರಾಮನಗರ : ಕಲಿತವರು ಕಲಿಯದವರಿಗೆ ಕಲಿಸಿ ಮೂಲ ಜಾನಪದ ಕಲೆಯನ್ನು ಉಳಿಸಿ ಎಂದು ಜಾನಪದ ವಿದ್ವಾಂಸರಾದ ಚಕ್ಕರೆ ಶಿವಶಂಕರ್ ಅವರು ತಿಳಿಸಿದರು. ಅವರು ಇಂದು ಜಾನಪದ ಲೋಕದಲ್ಲಿ ನಡೆದ ಸುವರ್ಣ ಕರ್ನಾಟಕ ಜಾನಪದ ಲೋಕೋತ್ಸವ -2024 ಕಾರ್ಯಕ್ರಮದಲ್ಲಿ “ಕನ್ನಡ ಜಾನಪದ: ಪುನರಾವಲೋಕನ” ವಿಚಾರಣಾ ಸಂಕಿರಣದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಾನಪದ ಕಲೆಯು ಒಂದು ಚಲನಶೀಲವಾದದ್ದು ಒಳ್ಳೆಯದನ್ನು ಸ್ವೀಕರಿಸಿ ಕೆಟ್ಟದನ್ನು ತಿರಸ್ಕರಿಸುವ ರೀತಿ ಆರೋಗ್ಯಕರವಾದ ಜಾನಪದವನ್ನು ಸ್ವೀಕರಿಸಬೇಕು.  ಕಲಾವಿದರು ವೇದಿಕೆಯನ್ನು ಬಳಿಸಿಕೊಳ್ಳುವ ರೀತಿ ಬದಲಾಗಬೇಕು, ಇತ್ತೀಚಿಗೆ ಜಾನಪದ ಕಲೆಯೊಂದಿಗೆ ಆಧುನಿಕ ಅಥವಾ ವಿದೇಶಿ ಕಲೆಯನ್ನು ಮಿಶ್ರಣಗೊಳಿಸಲಾಗುತ್ತಿದ್ದು ಕಂಡುಬಂದಿದೆ,  ಜಾನಪದ ಕಲೆಗೆ 150 ವರ್ಷಗಳ ಇತಿಹಾಸವಿರುವುದರಿಂದ  ಅದನ್ನು ಒಪ್ಪಲಾಗದು ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷರಾದ ಪ್ರೋ.ಹಿ.ಸಿ.ರಾಮಚಂದ್ರೇಗೌಡರವರು, ಜಾನಪದ ಕಲೆ ಶತಮಾನದಿಂದ ಶತಮಾನಕ್ಕೆ ಬದಲಾವಣೆ ಆಗುತ್ತಾ ಬಂದಿದೆ. ಇಲ್ಲಿ ಸಂಗ್ರಹ ಮತ್ತು ಸೃಷ್ಠಿ ಮುಖ್ಯ, ಜಾನಪದ ಕಲೆಯ ಮೂಲಕ ಅನೇಕರು ಲೇಖಕರಾದರು. ಜಾನಪದ ಸೃಷ್ಠಿ ಮಾಡುವುದು ಸಾಧ್ಯ ಅದನ್ನು ನಾಶಪಡಿಸಲು ಸಾಧ್ಯವಿಲ್ಲ. ಜಾನಪದ ಕಲೆಯಲ್ಲಿ 300 ದಾಟಿಗಳಿಗೆ ಒಂದು ಕಲೆಯನ್ನು ಐದು ದಾಟಿಯಲ್ಲಿ ಹಾಡಬಹುದು . ಜಾನಪದ ಗೀತೆ ಮತ್ತು ನೃತ್ಯಕ್ಕೆ ಎಂದಿಗೂ ಬೇಡಿಕೆ ಇದ್ದೇ ಇರುತ್ತದೆ ಎಂದರು.

ಕ್ಯೂರೆಟರ್ ಡಾ.ರವಿ ಯು ಎಂ ನಿರೂಪಿಸಿದರು,  ಅಗ್ರಹಾರ ಕೃಷ್ಣಮೂರ್ತಿ, ಸಿರಿಗಂದ ಶ್ರೀನಿವಾಸಮೂರ್ತಿ,  ಡಾ. ಬಾನಂದೂರು ಕೆಂಪಯ್ಯ ಕಾರ್ಯಾಧ್ಯಕ್ಷ ಬೋರಲಿಂಗಯ್ಯ ಆಡಳಿತಾಧಿಕಾರಿ ಡಾ.ನಂದಕುಮಾರ್ ಹೆಗಡೆ ಉಪಸ್ಥಿತರಿದ್ದರು .

RELATED ARTICLES
- Advertisment -
Google search engine

Most Popular