ಮಂಗಳೂರು(ದಕ್ಷಿಣ ಕನ್ನಡ): ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು (ಎನ್ ಇಪಿ) ಮುಂದುವರಿಸಬೇಕೆಂದು ಪೀಪಲ್ಸ್ ಫೋರಂ ಫಾರ್ ಕರ್ನಾಟಕ ಎಜುಕೇಷನ್ ಮಂಗಳೂರು ಘಟಕ ಆಗ್ರಹಿಸಿದೆ.
ಮಂಗಳೂರಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಫೋರಂ ಸಂಚಾಲಕ ರಮೇಶ.ಕೆ, ‘ದೇಶದಲ್ಲಿ ಯಾವ ರಾಜ್ಯಗಳು ಎನ್ ಇಪಿಯನ್ನು ತೆಗೆದು ಹಾಕಿದ ನಿದರ್ಶನಗಳಿಲ್ಲ. ಆದರೆ ಕರ್ನಾಟಕ ರಾಜ್ಯದಲ್ಲಿ ಮಾತ್ರ ಎನ್ ಇಪಿಯನ್ನು ತೆಗೆದು ಹಾಕಿ ರಾಜ್ಯ ಶಿಕ್ಷಣ ನೀತಿ ತರಲಾಗುತ್ತಿದೆ. ಫೋರಂ ಮೂಲಕ ಎನ್ ಇಪಿಯನ್ನು ಮುಂದುವರಿಸಬೇಕೆಂದು ರಾಜ್ಯದಾದ್ಯಂತ ಜಾಗೃತಿ ಹಾಗೂ ಸಹಿ ಸಂಗ್ರಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು’ ಎಂದು ತಿಳಿಸಿದರು.