Sunday, April 20, 2025
Google search engine

Homeರಾಜ್ಯಚಾಮರಾಜನಗರಕ್ಕೆ ರೇಡಿಯೋ ಕೇಂದ್ರ ಮಂಜೂರು ಮಾಡಿ: ಸುರೇಶ್ ಎನ್ ಋಗ್ವೇದಿ

ಚಾಮರಾಜನಗರಕ್ಕೆ ರೇಡಿಯೋ ಕೇಂದ್ರ ಮಂಜೂರು ಮಾಡಿ: ಸುರೇಶ್ ಎನ್ ಋಗ್ವೇದಿ

ಚಾಮರಾಜನಗರ: ಜೈ ಹಿಂದ್ ಪ್ರತಿಷ್ಠಾನ ಮತ್ತು ಋಗ್ವೇದಿ ಯೂತ್ ಕ್ಲಬ್ ವತಿಯಿಂದ ಜೈ ಹಿಂದ್ ಕಟ್ಟೆಯಲ್ಲಿ ವಿಶ್ವ ರೇಡಿಯೋ ದಿನವನ್ನು ಆಚರಿಸಲಾಯಿತು.

ಜೈ ಹಿಂದ್ ಪ್ರತಿಷ್ಠಾನದ ಅಧ್ಯಕ್ಷರಾದ ಸುರೇಶ್ ಎನ್ ಋಗ್ವೇದಿ ಮಾತನಾಡಿ, ಚಾಮರಾಜನಗರಕ್ಕೆ ರೇಡಿಯೋ ಕೇಂದ್ರ ಮಂಜೂರು ಮಾಡಿಕೊಡಬೇಕು. ಯುವಕರಿಗೆ ಮತ್ತು ವಿದ್ಯಾರ್ಥಿಗಳಿಗೆ ರೇಡಿಯೋದ ಮಹತ್ವವನ್ನು ಅರಿಯುವಂತಹ ಕಾರ್ಯವನ್ನು ಮಾಡೋಣ ಎಂದರು.

ಸಾಮಾಜಿಕ ,ಧಾರ್ಮಿಕ ಆರ್ಥಿಕ, ಸಾಂಸ್ಕೃತಿಕ ,ರಾಜಕೀಯ, ಕ್ರೀಡೆ ಪ್ರಕೃತಿಯ ವಿಕೋಪಗಳು ,ಸಂಗೀತ, ನೂರಾರು ಕ್ಷೇತ್ರಗಳ  ಚಿಂತನೆಗಳು, ಕೃಷಿ ಸಾಧಕ ಅಂಶಗಳನ್ನು ತಿಳಿಯಲು ರೇಡಿಯೋ ಮಹತ್ತರವಾದ ಕಾರ್ಯವನ್ನು  ತಿಳಿಯಲು ಸಹಕಾರಿ. ಶತಮಾನಗಳಿಂದಲೂ ಕೂಡ ಪ್ರಪಂಚದ ಜ್ಞಾನವನ್ನುನೀಡಿದೆ . ರೇಡಿಯೋ ಕೇಂದ್ರಗಳಿಂದ ಯಾವುದೇ ಆರೋಗ್ಯ ಸಮಸ್ಯೆಗಳು ಉಂಟಾಗುವುದಿಲ್ಲ.ಬಹಳ ಸರಳ ಖರ್ಚಿನಲ್ಲಿ ಎಲ್ಲಾ ಮಾಹಿತಿಗಳನ್ನು ತಿಳಿಯಬಹುದು ಎಂದು ತಿಳಿಸಿದರು.

ವಿಶ್ವಸಂಸ್ಥೆಯ ಯುನೆಸ್ಕೋ ವಿಶ್ವ ರೇಡಿಯೋ ದಿನವನ್ನು ಫೆಬ್ರವರಿ 13 ಎಂದು ಘೋಷಿಸಿದೆ ಅನುಭವ ಸಾಮರ್ಥ್ಯ ದ್ವನಿ ಸುದ್ದಿ ನಾಟಕ ಸಂಗೀತ ಕ್ರೀಡೆ ಸಿನಿಮಾ ಅಪಘಾತ ಯುದ್ಧ ಎಲ್ಲಾ ಕ್ಷೇತ್ರಗಳ ವಿಚಾರವನ್ನು ತಿಳಿಯುವ  ನಿರಂತರ ಸಾಮರ್ಥ್ಯ ಸ್ಮರಿಸಬೇಕಾಗಿದೆ ಮಾರ್ಕೊನಿ ಪ್ರಥಮ ರೇಡಿಯೋ ಪ್ರಸರಣವನ್ನು ಮಾಡಿದ ವಿಶ್ವನಾಥ ಮೊದಲ ವ್ಯಕ್ತಿ. ಆಕಾಶವಾಣಿ ಧ್ವನಿ ದೂರ ಸಂವೇದೀಯ ತರಂಗಗಳ ಮೂಲಕ ಪ್ರತಿಯೊಬ್ಬರ ಹೃದಯ ಮತ್ತು ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯುವ ಸಾಮರ್ಥ್ಯವಿರುವುದು ಆಕಾಶವಾಣಿಯ ರೇಡಿಯೋ ದ ಮೂಲಕ ಎಂದು ಅನೇಕ ಸುದ್ದಿ ವಾಚಕರು ವಿಶ್ವದಲ್ಲಿ ತಮ್ಮ ಧ್ವನಿ ಮತ್ತು ಹಾವಭಾವ ಹಾಗೂ ಶಬ್ದಗಳ ಏರಿಳಿತಗಳ ಮೂಲಕ ಮನೆ ಮಾತಾಗಿರುವುದನ್ನು ಕಾಣಬಹುದು. ಯುವಕರು ಮತ್ತು ವಿದ್ಯಾರ್ಥಿಗಳು ಹಿರಿಯರು ವಿಶೇಷವಾಗಿ ರೇಡಿಯೋ ಕೇಳುವ ಅಭಿರುಚಿಯನ್ನು ಬೆಳೆಸಿಕೊಳ್ಳಬೇಕು. ಹವ್ಯಾಸವನ್ನಾಗಿ ಮಾಡಿಕೊಳ್ಳಬೇಕಾಗಿ  ಮನವಿ ಮಾಡಿದರು .

ಹಿರಿಯ ನಾಗರೀಕರು, ಜೈ ಹಿಂದ್ ಪ್ರತಿಷ್ಠಾನದ ಮಾರ್ಗದರ್ಶಕರಾದ,ಶ್ರೀಮತಿ ಸರೋಜಮ್ಮನವರು ರೇಡಿಯೋ ಬ್ಯಾಂಡ್ ತಿರುಗಿಸುವ ಮೂಲಕ ಉದ್ಘಾಟಿಸಿದರು.

ಸಮಾಜ ಸೇವಕ ಸುರೇಶ್ ಗೌಡ,  ಯುವಕರಾದ ಶಶಾಂಕ್, ಗಿರೀಶ್ ಮಹೇಶ್, ರವಿ ಇದ್ದರು.

RELATED ARTICLES
- Advertisment -
Google search engine

Most Popular