ಮೈಸೂರು : ಚಾಲಾಕಿ ಬೈಕ್ ಕಳ್ಳನೊಬ್ಬನನ್ನು ಬಂಧಿಸಿರುವ ನಜರ್‌ಬಾದ್ ಠಾಣೆಯ ಪೊಲೀಸರು ಆತನಿಂದ ೯ ಲಕ್ಷ ರೂ, ಮೌಲ್ಯದ ೨೦ ಬೈಕ್‌ಗಳನ್ನು ವಶಕ್ಕೆ ಪಡೆದಿದ್ದಾರೆ.
ಫೆ,೧೨ ರಂದು ನಜರ್‌ಬಾದ್ ಪೊಲೀಸ್ ಠಾಣೆಯಲ್ಲಿ ವರದಿಯಾಗಿದ್ದ ದ್ವಿಚಕ್ರ ವಾಹನಗಳ ಕಳುವು ಪ್ರಕರಣದಲ್ಲಿ ಆರೋಪಿ ಮತ್ತು ಮಾಲು ಪತ್ತೆಗಾಗಿ ನಜರ್‌ಬಾದ್ ಪೊಲೀಸರು ಠಾಣಾ ಗಸ್ತಿನಲ್ಲಿದ್ದಾಗ ಪೋರಂ ಮಾಲ್ ಬಳಿ ಹೊಂಡಾ ಡಿಯೋ ವಾಹನದಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಒಬ್ಬಾತನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗಿ, ಆತನು ಮೈಸೂರು ನಗರ, ಮಂಡ್ಯ, ಬೆಂಗಳೂರಿನ ವಿವಿಧ ಸ್ಥಳಗಳಲ್ಲಿ ದ್ವಿ ಚಕ್ರ ವಾಹನಗಳನ್ನು ಕಳ್ಳತನ ಮಾಡಿರುವುದಾಗಿ ತಿಳಿಸಿದರ ಮೇರೆಗೆ ಆತನಿಂದ ಒಟ್ಟು ರೂ. ೯ ಲಕ್ಷ ಮೌಲ್ಯದ ೨೦ ದ್ವಿಚಕ್ರ ವಾಹನಗಳನ್ನು
ಅಮಾನತ್ತುಪಡಿಸಿಕೊಳ್ಳಲಾಗಿದೆ.