Sunday, April 20, 2025
Google search engine

HomeUncategorizedಚಿಂಚೋಳಿ: ನೇಣಿಗೆ ಶರಣಾದ ತಾಯಿ- ಮಗಳು

ಚಿಂಚೋಳಿ: ನೇಣಿಗೆ ಶರಣಾದ ತಾಯಿ- ಮಗಳು

ಚಿಂಚೋಳಿ: ತಾಯಿ ಹಾಗೂ ಮಗಳು ನೇಣು‌ ಹಾಕಿಕೊಂಡು ಸಾವನಪ್ಪಿದ‌ ಘಟನೆ ತಾಲೂಕಿನ ಮರಪಳ್ಳಿ ಗ್ರಾಮದಲ್ಲಿ ಫೆ. 13ರ ಮಂಗಳವಾರ ಸಂಜೆ ಸುಮಾರು 5 ಗಂಟೆಗೆ ನಡೆದಿದೆ.

ತಾಯಿ ಶಿವಲೀಲಾ ಆನಂದ(24) ಹಾಗೂ ಮಗಳು ವರ್ಷಿತಾ(2) ಮೃತಪಟ್ಟವರು.

ಮನೆಯಲ್ಲಿ ಯಾರು ಇಲ್ಲದ ಸಮಯ ತಾಯಿ ಮೊದಲು ಮಗಳಿಗೆ‌ ನೇಣು ಹಾಕಿ ಬಳಿಕ ತಾನು‌ ನೇಣು ಹಾಕಿಕೊಂಡು ‌ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೃತಪಟ್ಟ ತಾಯಿ ಮತ್ತು ಮಗಳ ಶವ ಚಿಂಚೋಳಿ ಪಟ್ಟಣದ ಸರಕಾರಿ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಲಾಗಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

ಚಿಂಚೋಳಿ ಪೊಲೀಸ್‌ ಠಾಣಾ ಪೊಲೀಸರು ಸ್ಥಲಕ್ಕೆ ಭೇಟಿ ‌ನೀಡಿ ಗಂಡ ಆನಂದನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

RELATED ARTICLES
- Advertisment -
Google search engine

Most Popular