Monday, April 21, 2025
Google search engine

HomeUncategorizedರಾಷ್ಟ್ರೀಯಫೆ.16ರಂದು ಗ್ರಾಮೀಣ ಭಾರತ ಬಂದ್ ಗೆ ಕರೆ ನೀಡಿದ ಸಂಯುಕ್ತ ಕಿಸಾನ್ ಮೋರ್ಚಾ

ಫೆ.16ರಂದು ಗ್ರಾಮೀಣ ಭಾರತ ಬಂದ್ ಗೆ ಕರೆ ನೀಡಿದ ಸಂಯುಕ್ತ ಕಿಸಾನ್ ಮೋರ್ಚಾ

ದೆಹಲಿ: ಹಲವು ಬೇಡಿಕೆಗಳ ಈಡೇರಿಕೆಗಾಗಿ ದೆಹಲಿ ಚಲೋ ಚಳವಳಿಯನ್ನು ಹಮ್ಮಿಕೊಂಡಿದ್ದ ಸಂಯುಕ್ತ ಕಿಸಾನ್ ಮೋರ್ಚಾ ಇದೀಗ ಫೆಬ್ರವರಿ 16ರಂದು ಗ್ರಾಮೀಣ ಭಾರತ ಬಂದ್ ಗೆ ಕರೆ ನೀಡಿದೆ.

ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ಬ್ಯಾನರ್‌ ನಡಿಯಲ್ಲಿ ಕೇಂದ್ರ ಕಾರ್ಮಿಕ ಸಂಘಟನೆಗಳೊಂದಿಗೆ ರೈತ ಸಂಘಗಳು ತಮ್ಮ ಇತರ ಬೇಡಿಕೆಗಳನ್ನು ಕೇಂದ್ರ ಸರ್ಕಾರದ ಮುಂದಿರಿಸಲು ಫೆಬ್ರವರಿ 16 ರಂದು ಬೆಳಗ್ಗೆ 6 ರಿಂದ ಸಂಜೆ 4 ರವರೆಗೆ ದೇಶಾದ್ಯಂತ  ಗ್ರಾಮೀಣ ಭಾರತ್ ಬಂದ್ ಗೆ ಕರೆ ನೀಡಿವೆ.

ರೈತರ ಬೇಡಿಕೆಗಳೇನು ?

 ರೈತರಿಗೆ ಪಿಂಚಣಿ, ಬೆಳೆಗಳಿಗೆ ಎಂಎಸ್‌ಪಿ, ಹಳೆಯ ಪಿಂಚಣಿ ಯೋಜನೆ ಅನುಷ್ಠಾನ ಮತ್ತು ಕಾರ್ಮಿಕ ಕಾನೂನುಗಳ ತಿದ್ದುಪಡಿಯನ್ನು ಹಿಂಪಡೆಯುವುದು. ಉದ್ಯೋಗಿಗಳ ಗುತ್ತಿಗೆ, ಖಾತರಿಯ ಉದ್ಯೋಗ ಇತ್ಯಾದಿಗಳು ಸೇರಿವೆ. ಇನ್ನೂ, ಇತರ ಬೇಡಿಕೆಗಳಲ್ಲಿ ಉದ್ಯೋಗಿಗಳಿಗೆ ಸಂಬಂಧಿಸಿದ ಸಮಸ್ಯೆಗಳಾದ ಆಪರೇಷನಲ್ ಪರ್ಫಾರ್ಮೆನ್ಸ್-ಲಿಂಕ್ಡ್ ಸಂಬಳ  ಅನುಷ್ಠಾನವನ್ನು ಹಿಂತೆಗೆದುಕೊಳ್ಳುವುದು, ತಿದ್ದುಪಡಿಗಳು ಕಾರ್ಮಿಕ ಕಾನೂನುಗಳು ಮತ್ತು ಇತರ ಹಲವಾರು ಬೇಡಿಕೆಗಳು ಸರ್ಕಾರದ ಮುಂದಿವೆ.

ಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ಬಲಪಡಿಸಲು, ಹಳೆಯ ಪಿಂಚಣಿ ಯೋಜನೆಯನ್ನು ಮರುಸ್ಥಾಪಿಸಲು ಮತ್ತು ಔಪಚಾರಿಕ ಮತ್ತು ಅನೌಪಚಾರಿಕ ವಲಯಗಳಲ್ಲಿ ಎಲ್ಲರಿಗೂ ಪಿಂಚಣಿ ಮತ್ತು ಸಾಮಾಜಿಕ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ರೈತರು ಪ್ರಯತ್ನಿಸುತ್ತಿದ್ದಾರೆ.

ಫೆ.16 ರಂದು ಯಾವೆಲ್ಲಾ ಸೇವೆಗಳ ಮೇಲೆ ಪರಿಣಾಮ ಫೆಬ್ರವರಿ 16 ರಂದು ದಿನವಿಡೀ ಭಾರತ್ ಬಂದ್‌ ನಲ್ಲಿ, ಸಾರಿಗೆ, ಕೃಷಿ ಚಟುವಟಿಕೆಗಳು, MNREGA ಗ್ರಾಮೀಣ ಕೆಲಸಗಳು, ಖಾಸಗಿ ಕಚೇರಿಗಳು, ಹಳ್ಳಿ ಅಂಗಡಿಗಳು ಮತ್ತು ಗ್ರಾಮೀಣ ಕೈಗಾರಿಕಾ ಮತ್ತು ಸೇವಾ ವಲಯದ ಸಂಸ್ಥೆಗಳು ಮುಚ್ಚಲ್ಪಡುತ್ತವೆ. ಇದಲ್ಲದೆ, ಮುಷ್ಕರದ ಸಮಯದಲ್ಲಿ ಆಂಬ್ಯುಲೆನ್ಸ್‌ಗಳ ಕಾರ್ಯಾಚರಣೆ, ಪತ್ರಿಕೆ ವಿತರಣೆ, ಮದುವೆ, ಮೆಡಿಕಲ್ ಶಾಪ್‌ಗಳು, ಬೋರ್ಡ್ ಪರೀಕ್ಷೆಗೆ ಹೋಗುವ ವಿದ್ಯಾರ್ಥಿಗಳು ಇತ್ಯಾದಿ ತುರ್ತು ಸೇವೆಗಳನ್ನು ನಿಲ್ಲಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

RELATED ARTICLES
- Advertisment -
Google search engine

Most Popular