ಯಳಂದೂರು: ತಾಲ್ಲೂಕಿನ ವೈ ಕೆ ಮೋಳೆ ಗ್ರಾಮದ ಪ್ರೇಮ.ಪಿ ರವರ ನಡೆಸಿದ ಸಂಶೋಧನೆಯಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಪಿ ಎಚ್.ಡಿ ಪದವಿ ಪಡೆದುಕೊಂಡಿದ್ದಾರೆ.
ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದಲ್ಲಿ ಡಾ. ಜಿ.ಬಿ. ಪಾಂಡುರಂಗ ನಾಯಕ ಇವರ ಮಾರ್ಗದರ್ಶನದಲ್ಲಿ “ಕನ್ನಡ ಮಹಿಳಾ ಚಿಂತನ ಸಾಹಿತ್ಯ ಸ್ತ್ರೀ ಸಂವೇದನೆಯ ನೆಲೆಗಳು “(ಆಯ್ದ ಲೇಖಕಿಯರನ್ನು ಅನುಲಕ್ಷಿಸಿ) ಎಂಬ ವಿಷಯದ ಕುರಿತು ಮಂಡಿಸಿರುವ ಸಂಶೋಧನಾ ಮಹಾ ಪ್ರಬಂಧಕ್ಕೆ ಹಂಪಿ ಕನ್ನಡ ವಿಶ್ವ ವಿದ್ಯಾಲಯದ ಮಾನ್ಯ ಕುಲಪತಿಗಳಾದ ಪರಮಶಿವಮೂರ್ತಿ, ಮಾನ್ಯ ಉನ್ನತ ಶಿಕ್ಷಣ ಸಚಿವರೂ ಹಾಗೂ ಸಮ ಕುಲಪತಿಗಳಾದ ಡಾ. ಎಂ. ಸಿ ಸುಧಾಕರ್ ಅವರಿಂದ ಪಿ ಎಚ್ ಡಿ (ಡಾಕ್ಟರೆಟ್) ಘೋಷಣಾ ಪ್ರಮಾಣ ಪತ್ರವನ್ನು ಪಡೆದುಕೊಂಡಿದ್ದಾರೆ.