ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಸಹಕಾರ ಸಂಘದಲ್ಲಿ ಅವ್ಯವಹಾರ, ಅವೈಜ್ಞಾನಿಕ ರಸ್ತೆ ಕಾಮಗಾರಿ, ಗಬ್ಬು ನಾರುತ್ತಿರುವ ಆಸ್ಪತ್ರೆ, ಜಮೀನು ಅಳತೆ ವ್ಯತ್ಯಾಸ, ಸೇರಿದಂತೆ ದೂರುಗಳ ಬಗ್ಗೆ ಸಾಲಿಗ್ರಾಮ ಪ್ರವಾಸಿ ಮಂದಿರದಲ್ಲಿ ಲೋಕಾಯುಕ್ತ ಅಧಿಕಾರಿಗಳಿಗೆ ಸಾರ್ವಜನಿಕರು ಸಲ್ಲಿಸಿದರು.
ಪಟ್ಟಣದಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 2012 ರಿಂದಲೂ ಲಕ್ಷಾಂತರ ರೂಗಳ ಬಾರಿ ಅವ್ಯವಹಾರ ನಡೆದಿದೆ, ಇದರ ಬಗ್ಗೆ ಸಂಬಂಧ ಪಟ್ಟವರಿಗೆ ತನಿಖೆ ನಡೆಸಲು ನಮೂನೆಯಲ್ಲಿ ದೂರು ನೀಡಿದ್ದೇವೆ, ಅದಕ್ಕೆ ಉತ್ತರವೇ ನೀಡಿಲ್ಲ, ಎಂದು ಗ್ರಾಮದ ಯುವ ಮುಖಂಡ ಸಾರಾ ಸತೀಶ್ ರವರು ದೂರು ನೀಡಿದರು.
ಮಾಗಡಿ – ಸೋಮುವಾರ ಪೇಟೆ ಮುಖ್ಯ ರಸ್ತೆಯ ಕಾಮಗಾರಿಯನ್ನು ಕೆ – ಶಿಪ್ ರವರು (ಕೆ ಎನ್ ಆರ್ ಕಂಪನಿ ) ಅವೈಜ್ಞಾನಿಕವಾಗಿ ಮಾಡಿದ್ದಾರೆ.ರಸ್ತೆ ಬಿರುಕು ಬಿಟ್ಟಿದೆ, ಮುಖ್ಯ ರಸ್ತೆಯಲ್ಲಿ ಹಾದು ಹೋಗಿರುವ ಹಾರಂಗಿ ಎಡದಂಡೆ ನಾಲೆಯ ಕಿರು ಗಾಲುವೆ ಮುಚ್ಚಿ, ಧನ, ಕರು, ಜಾನುವಾರುಗಳಿಗೆ ಕುಡಿಯಲು ನೀರಿಲ್ಲದೆ ತೊಂದರೆ ಉಂಟಾಗಿದೆ. ಲೋಕೋಪಯೋಗಿ ಇಲಾಖೆಯ ಪೈಪ್ ಲೈನ್ ಮುಚ್ಚಿದ್ದಾರೆ. ರಸ್ತೆಯಲ್ಲಿಯೇ ವಿದ್ಯುತ್ ಕಂಬ ಇದೆ, ಚರಂಡಿ ಹಾಗೂ ರಸ್ತೆ ಕಾಮಗಾರಿ ಅರ್ಧ ಭಾಗ ಮಾಡಿ ನಿಲ್ಲಿಸಿದ್ದಾರೆ. ಅಪಘಾತ ಗಳು ನಡೆದು ಸಾವು ಸಂಭವಿಸಿದೆ. ಸಮರ್ಪಕವಾಗಿ ಕಾಮಗಾರಿ ಮಾಡಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ದೂರು ಸಲ್ಲಿಸಿ ಮನವಿ ಮಾಡಿದರು.
ಸಾಲಿಗ್ರಾಮದ ಸರ್ಕಾರಿ ಆಸ್ಪತ್ರೆ ಒಳಗಡೆ ಹೋದರೆ ಮೂಗು ಮುಚ್ಚಿ ಕೊಂಡು ಹೋಗಬೇಕಾದ ಪರಿಸ್ಥಿತಿ ಬಂದಿದೆ, ಸ್ವಚ್ಛತೆ ಇಲ್ಲಾ, ಗಬ್ಬು ನಾರುತ್ತಿದೆ, ಎಂದು ರೈತ ಸಂಘದ ಅಧ್ಯಕ್ಷ ಎಸ್ ಬಿ ಶೇಖರ್ ದೂರಿದರು.
ಸರ್ವೆ ಇಲಾಖೆಯಲ್ಲಿ ಸರಿಯಾದ ದಾಖಲಾತಿ ಗಳನ್ನು ನೀಡದೆ ಬಾರಿ ಗೊಂದಲಗಳು ಉಂಟಾಗಿವೆ, ನೊಂದಣಿ ಕಚೇರಿ, ಗ್ರಾಮ ಪಂಚಾಯತಿಯ ಕೆಲವು ಪಿ ಡಿ ಒ ಗಳಿಂದ ಕಡತ ಗಳು ಸರಿಯಾಗಿ ವಿಲೇವಾರಿಯಾಗದೆ ಇರುವುದು, ಇವುಗಳ ಬಗ್ಗೆ ಜನತೆ ದೂರು ಸಲ್ಲಿಸಿದರು.
ಅತೀ ಹೆಚ್ಚಿನ ರೀತಿಯಲ್ಲಿ ರಸ್ತೆ ಕಾಮಗಾರಿಯ ಬಗ್ಗೆ ದೂರು ನೀಡಿದರು.
ಲೋಕಾಯುಕ್ತ ಎಸ್ ಪಿ ಸಜಿತ್ ದೂರು ಸ್ವೀಕರಿಸಿ ಮಾತನಾಡಿ ದೂರು ನೀಡಿರುವ ಬಗ್ಗೆ ಪರಿಶೀಲನೆ ಮಾಡಿ ಸಂಬಂಧ ಪಟ್ಟ ಇಲಾಖೆಗೆ ತಿಳಿಸಿ ಮುಂದಿನ ಕ್ರಮ ಕೈ ಗೊಳ್ಳಲಾಗುವುದು, ಅಧಿಕಾರಿಗಳು ಕಚೇರಿಗಳಲ್ಲಿ ನಿಗದಿತ ಸಮಯಕ್ಕೆ ಬಂದು ಹಾಜರಾಗಬೇಕು, ಎಲ್ಲಾ ಕಚೇರಿಗಳಲ್ಲಿ ಲೋಕಾಯುಕ್ತರ ನಾಮ ಫಲಕವನ್ನು ಕಡ್ಡಾಯವಾಗಿ ಹಾಕಬೇಕು,ಅರ್ಜಿ ಸಲ್ಲಿಸಿದ ಅವಧಿ ಹಾಗೂ ಕಾಲಮಿತಿ ಫಲಕ ಹಾಕಬೇಕು, ಜನತೆಗೆ ತೊದರೆ ಕೊಡದ ರೀತಿಯಲ್ಲಿ ಕಾನೂನು ಪರಿಮಿತಿ ಒಳಗಡೆ ಕೆಲಸ ಮಾಡಿ ಎಂದು ತಿಳಿಸಿದರು.
ಲೋಕಾಯುಕ್ತ ಡಿ ವೈ ಎಸ್ ಪಿ ಮಾಲತೇಶ್, ಕೃಷ್ಣಯ್ಯ ವೃತ್ತ ನಿರೀಕ್ಷಕ ಉಮೇಶ್, ಸಬ್ ಇನ್ಸ್ಪೆಕ್ಟರ್ ರವಿಕುಮಾರ್, ತಹಸೀಲ್ದಾರ್ ನರಗುಂದ, ಇ.ಒ.ಸತೀಶ್ ಸಾಲಿಗ್ರಾಮ ಠಾಣೆ ವೃತ್ತ ನಿರೀಕ್ಷಕ ಕೃಷ್ಣ ರಾಜು, ಉಪ ತಹಸೀಲ್ದಾರ್ ಮಹೇಶ್, ಶರತ್ ಕುಮಾರ್, ಶಿರಸ್ಡೆದಾರ್ ಶಿವಕುಮಾರ್, ಮಹೇಶ್, ಎ ಡಿ ಎಲ್ ಆರ್ ಶರ್ಮಾ, ಚೆಸ್ಕಾಂ ಮಧುಸೂದನ್,ಕಾರ್ಮಿಕ ಇಲಾಖೆ ಧನುಷ, ಬಿ ಸಿ ಎಂ ಅಶೋಕ್, ಅರಣ್ಯ ಇಲಾಖೆ ರಶ್ಮಿ,, pwd ಭಾರತಿ, ಪಶು ವೈದ್ಯ ಸುರೇಂದ್ರ, ವಕೀಲ ಮಂಜುನಾಥ್, ರಾಜೇಗೌಡ, ಶೇಖರ್, ಚಂದ್ರು, ಸತೀಶ್, ಸುನಿಲ್, ಗ್ರಾಮ ಪಂಚಾಯಿತಿ ಪಿ ಡಿ ಒ ಗಳು ಸೇರಿದಂತೆ ಇನ್ನಿತರರು ಇದ್ದಾರೆ.