ದೆಹಲಿ: ದೆಹಲಿ ಹೈಕೋರ್ಟ್ ಗೆ ಬಾಂಬ್ ಬೆದರಿಕೆ ಬಂದಿದ್ದು, ಹೆಚ್ಚಿನ ಭದ್ರತೆಯನ್ನು ನೀಡಲಾಗಿದೆ.
ಇದು ದೆಹಲಿಗೆ ಬಂದ ಎರಡನೇ ಬೆದರಿಕೆಯಾಗಿದೆ. ರಿಜಿಸ್ಟ್ರಾರ್ ಜನರಲ್ ಗೆ ಬುಧವಾರ ತಡರಾತ್ರಿ ಇ ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದ್ದು, ಹೈಕೋರ್ಟ್ ಮುಂದೆ ಬಾಂಬ್ ಹಾಕಲಾಗುವುದು ಎಂದು ಇದರಲ್ಲಿ ತಿಳಿಸಲಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ತನಿಖೆಯನ್ನು ನಡೆಸುತ್ತಿದ್ದಾರೆ.
ಇನ್ನು ದೆಹಲಿಯಲ್ಲಿ ಒಂದು ಕಡೆ ರೈತರ ಪ್ರಭಟನೆ ನಡೆಸುತ್ತಿದ್ದಾರೆ. ಹೆಚ್ಚಿನ ಭದ್ರತಾ ವ್ಯವಸ್ಥೆಯನ್ನು ಅಲ್ಲಿಯು ಒದಗಿಸಲಾಗಿದೆ. ದೆಹಲಿಯ ನಗರದ ಒಳಗೆ ಬರುವ ಪ್ರತಿಜ್ಞೆ ಮಾಡಿರುವ ರೈತರನ್ನು ಪೊಲೀಸರು ತಡೆದಿದ್ದು, ದೊಡ್ಡ ಭದ್ರತೆಯನ್ನು ನೀಡಲಾಗಿದೆ.
ಬಾಂಬ್ ಬೆದರಿಕೆಗೆ ಸಂಬಂಧಿಸಿದಂತೆ ತನಿಖೆ ಆರಂಭಿಸಲಾಗಿದ್ದು, ಹೈಕೋರ್ಟ್ ಆವರಣವನ್ನು ಕೂಲಂಕುಷವಾಗಿ ಶೋಧಿಸಲಾಗುತ್ತಿದೆ. ನ್ಯಾಯಾಲಯಗಳಲ್ಲಿ ಭದ್ರತೆಯನ್ನು ಹೆಚ್ಚಿಸಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.