Tuesday, April 22, 2025
Google search engine

Homeಸ್ಥಳೀಯಮೈಸೂರು: ಚಿಕ್ಕನಹಳ್ಳಿ ಮೀಸಲು ಅರಣ್ಯದಲ್ಲಿ ಗಂಡು ಹುಲಿ ಸೆರೆ

ಮೈಸೂರು: ಚಿಕ್ಕನಹಳ್ಳಿ ಮೀಸಲು ಅರಣ್ಯದಲ್ಲಿ ಗಂಡು ಹುಲಿ ಸೆರೆ

ಮೈಸೂರು: ಚಿಕ್ಕನಹಳ್ಳಿ ಮೀಸಲು ಅರಣ್ಯದಲ್ಲಿ ನೂತನವಾಗಿ ವಿನ್ಯಾಸಗೊಳಿಸಿ ಅಳವಡಿಸಲಾಗಿದ್ದ WALKTHROUGH ಬೋನಿನೊಳಗೆ ಸುಮಾರು 5 ವರ್ಷದ ಗಂಡು ಹುಲಿ ಗುರುವಾರ(ಫೆ. 15)  ಬೆಳಗಿನ ಜಾವ ಸೆರೆಯಾಗಿರುತ್ತದೆ.

ಮೈಸೂರು ವಲಯದ ಚಿಕ್ಕನಹಳ್ಳಿ ಮೀಸಲು ಅರಣ್ಯ ಹಾಗೂ ಅದರ ಸುತ್ತಮುತ್ತಲ ಗ್ರಾಮಗಳ ಜಮೀನಿನಲ್ಲಿ ಕಾಣಿಸಿಕೊಂಡು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ್ದ ಹುಲಿಯನ್ನು ಸೆರೆಹಿಡಿಯಲಾಗಿದ್ದು, ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.

ಹುಲಿ ಸೆರೆ ಹಿಡಿಯಲು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಂತೆ ಅರಣ್ಯ ಸಂರಕ್ಷಣಾಧಿಕಾರಿ  ಡಾ. ಮಾಲತಿ ಪ್ರಿಯಾ, ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಬಸವರಾಜ.ಕೆ.ಎನ್., ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಲಕ್ಷ್ಮಿಕಾಂತ.ಎನ್., ವಲಯ ಅರಣ್ಯಾಧಿಕಾರಿ ಸುರೇಂದ್ರ ಕೆ, ಸಿಬ್ಬಂದಿಗಳು, ಅರವಳಿಕೆ ವೈದ್ಯರ ತಂಡ, ಇ.ಟಿ.ಎಫ್ ತಂಡ, ಎಸ್.ಟಿ.ಪಿ.ಎಫ್ ತಂಡ ಹಾಗೂ ಚಿರತೆ ಕಾರ್ಯಪಡೆಯೊಂದಿಗೆ ಟ್ರಾಪ್ ಕ್ಯಾಮರಾಗಳು, ನೆಟ್ವರ್ಕ್ ಕ್ಯಾಮರಾಗಳು, ಐ.ಆರ್. ಕ್ಯಾಮರಾಗಳು, ರಕ್ಷಣಾ ಸಲಕರಣೆಗಳು, ಬೋನುಗಳು, ಇತ್ಯಾದಿಗಳನ್ನು ಬಳಸಿಕೊಂಡು 2023ರ ನವೆಂಬರ್ 29 ರಿಂದ ರಿಂದ ಕಾರ್ಯಾಚರಣೆ ನಡೆಸಲಾಗಿತ್ತು.

ಹುಲಿ ಇರುವಿಕೆ ಖಚಿತಗೊಂಡಿರುವ ಸ್ಥಳಗಳ ಸುತ್ತಮುತ್ತಲಿನ ಗ್ರಾಮಗಳಲ್ಲಿ ಜನರು ಮುನ್ನೆಚ್ಚರಿಕೆ ವಹಿಸುವ ಬಗ್ಗೆ ಸಾರ್ವಜನಿಕ ಪ್ರಚಾರದ ಮೂಲಕ ತಿಳಿಸಲಾಗಿತ್ತು. ಭಿತ್ತಿ ಪತ್ರಗಳ ಮೂಲಕ ತುರ್ತು ಸಂದೇಶಗಳನ್ನು ಕಳುಹಿಸುವ ಮೂಲಕ ಜನರನ್ನು ಎಚ್ಚರಿಸಲಾಗುತ್ತಿತ್ತು.

ಇಂದು ಬೆಳಗಿನ ಜಾವ ಚಿಕ್ಕನಹಳ್ಳಿ ಮೀಸಲು ಅರಣ್ಯದಲ್ಲಿ ನೂತನವಾಗಿ ವಿನ್ಯಾಸಗೊಳಿಸಿ ಅಳವಡಿಸಲಾಗಿದ್ದ WALKTHROUGH ಬೋನಿನೊಳಗೆ ಸುಮಾರು 5 ವರ್ಷದ ಗಂಡು ಹುಲಿ  ಸೆರೆಯಾಗಿರುತ್ತದೆ.

ಸದರಿ ಹುಲಿಯ ದೈಹಿಕ ಮತ್ತು ವೈದ್ಯಕೀಯ ಪರೀಕ್ಷೆಯನ್ನು ಪಶು ವೈದ್ಯಾಧಿಕಾರಿಗಳು ನಡೆಸಿದ್ದು, ಹುಲಿಯು ಸದೃಢವಾಗಿರುವುದಾಗಿ ದೃಢೀಕರಿಸಿರುತ್ತಾರೆ. ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಮಾರ್ಗಸೂಚಿಗಳಂತೆ ಸದರಿ ಹುಲಿಯನ್ನು ಸೂಕ್ತ ಹುಲಿ ಸಂರಕ್ಷಿತ ಪ್ರದೇಶಕ್ಕೆ ಬಿಡುಗಡೆಗೊಳಿಸಲು ಕ್ರಮ ವಹಿಸಲಾಗಿರುತ್ತದೆ.

RELATED ARTICLES
- Advertisment -
Google search engine

Most Popular