Wednesday, April 23, 2025
Google search engine

Homeರಾಜ್ಯಗುಮ್ಮನಹಳ್ಳಿ ಗ್ರಾಮದಲ್ಲಿ ಅಬಕಾರಿ ಇಲಾಖೆಯಿಂದ ಮದ್ಯದಂಗಡಿ ಪ್ರಾರಂಭಿಸಲು ಚಿಂತನೆ: ಗ್ರಾಮಸ್ಥರ ವಿರೋಧ

ಗುಮ್ಮನಹಳ್ಳಿ ಗ್ರಾಮದಲ್ಲಿ ಅಬಕಾರಿ ಇಲಾಖೆಯಿಂದ ಮದ್ಯದಂಗಡಿ ಪ್ರಾರಂಭಿಸಲು ಚಿಂತನೆ: ಗ್ರಾಮಸ್ಥರ ವಿರೋಧ

ವರದಿ: ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ : ಸಾಲಿಗ್ರಾಮ ತಾಲ್ಲೂಕಿನ  ಹೊನ್ನೆನಹಳ್ಳಿ ಪಂಚಾಯಿತಿ ವ್ಯಾಪ್ತಿಗೆ ಸೇರುವ ಗುಮ್ಮನಹಳ್ಳಿ ಗ್ರಾಮದಲ್ಲಿ ಅಬಕಾರಿ ಇಲಾಖೆಯವರು ಮದ್ಯದಂಗಡಿ ( ಎಂಐಎಸ್ ಎಲ್ ) ಪ್ರಾರಂಭಕ್ಕೆ ಮುಂದಾಗಿದ್ದಾರೆ.  ಇದಕ್ಕೆ  ಗ್ರಾಮಸ್ಥರು ವಿರೋಧದ ಜೊತೆಗೆ ಆಕ್ರೋಶ ವ್ಯಕ್ತ ಪಡಿಸಿದ್ದು, ತಕ್ಷಣದಿಂದಲೇ ಕೈ ಬಿಡಬೇಕು ಎಂದು  ಗ್ರಾಮದ ಹಾಲು ಉದ್ಪಾದಕರ ಸಂಘದ ಮಾಜಿ ಅಧ್ಯಕ್ಷ ಜಿ.ಆರ್.ಸುರೇಶ್ ಅವರು ಜಿಲ್ಲಾಧಿಕಾರಿಗಳು ಮತ್ತು ಸಂಬಂದಪಟ್ಟ ಅಧಿಕಾರಿಗಳನ್ನು  ಒತ್ತಾಯಿಸಿದರು.

ಪಟ್ಟಣದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಗುಮ್ಮನಹಳ್ಳಿ ಗ್ರಾಮ ಕುಗ್ರಾಮವಾಗಿದ್ದು, ಇಲ್ಲಿಯ ಜನರ ಜೀವನ ದಿನ ನಿತ್ಯ ಕೂಲಿನಾಲಿ ಮಾಡಿ ಜೀವನ ರೂಪಿಸಿಕೊಳ್ಳುತ್ತಿದ್ದು ಇಂತಹ ಸನ್ನಿವೇಷದಲ್ಲಿ ಮಧ್ಯದಂಗಡಿ ತೆರೆಯುವುತ್ತಿರುವುದು ಸರಿಯಲ್ಲ ಎಂದು ಅಬಕಾರಿ ಇಲಾಖೆಯ ಅಧಿಕಾರಿಗಳ ವಿರುದ್ದ ಗುಡುಗಿದರು.

 ಗ್ರಾಮದಲ್ಲಿ ಎಲ್ಲಾ ಸಮುದಾಯದ ಜನರು ಸಾಮರಸ್ಯದ ಬದುಕು ನಡೆಸುತ್ತಿದ್ದಾರೆ ಇದಕ್ಕೆ ಹುಳಿ ಹಿಂಡುವ ಕಾರ್ಯಕ್ಕೆ ಮುಂದಾಗಬೇಡಿ ಎಂದು ಆಕ್ರೋಶ ಹೊರಹಾಕಿದರು.

ಇಲ್ಲಿಯ ಸುತ್ತಮುತ್ತಲಿನ ಗ್ರಾಮಗಳು ಅತ್ಯಂತ ಶಾಂತಿ ಸಹಬಾಳ್ವೆ ನಡೆಸುತಿದ್ದು ಗ್ರಾಮದಲ್ಲಿ  ದಲಿತರು,, ಅಲ್ಪಸಂಖ್ಯಾತರು, ಹಿಂದುಳಿದವರು ಇತರೆ ಸಮಾಜದವರು ವಾಸಿಸುತ್ತಿದ್ದು ಆದರೆ ಇತ್ತಿಚ್ಚಿಗೆ ಗುಮ್ಮನಹಳ್ಳಿ ಗ್ರಾಮದಲ್ಲಿ ಎಮ್‌ಎಸ್‌ಐಎಲ್ ಮದ್ಯದಂಗಡಿ ತೆರೆಯಲು ಸಿದ್ಧತೆ ನಡೆಸುತ್ತಿದ್ದು ಇದನ್ನು  ಕೊಡಲೇ ಬಿಟ್ಟು ಇದಕ್ಕೆ ಪೂರಕವಾಗಿ ಸರ್ಕಾರಿ ಶಾಲೆ ಹಾಗೂ ಅಂಗನವಾಡಿ ಕೇಂದ್ರ ಹಾಗೂ ಹಾಲು ಉತ್ಪಾದಕರ ಸಂಘ ಇಂತಹ ಅಭಿವೃದ್ದಿ ಆಗುವಂತಹ ಇತ್ಯಾದಿಗಳಿಗೆ ಒತ್ತು ನೀಡಿ ಎಂದು ಸಲಹೆ‌ ನೀಡಿದರು.

ಗುಮ್ಮನಹಳ್ಳಿ ಗ್ರಾಮದಲ್ಲಿ ಸುಮಾರು ೨೫೦ ಜನಸಂಖ್ಯೆ ಹೊಂದಿರುವ ಚಿಕ್ಕ ಗ್ರಾಮವಾಗಿದ್ದು ಮಹಿಳಾ ಸಂಘಗಳು ಮತ್ತು ಗ್ರಾಮದ ಜನರು ಅಭಿವೃದ್ದಿಯತ್ತ ಸಾಗುತ್ತಿದ್ದಾರೆ ಮದ್ಯದಂಗಡಿ ಮಾಡುವುದರಿಂದ ಶೋಷಿತರ ಮತ್ತು ಬಡ ಕುಟುಂಬದ ಮೇಲೆ ದೊಡ್ಡ ಪರಿಣಾಮ ಬಿರುತ್ತದೆ ಈಗಾಗಲೇ ಗ್ರಾಮಸ್ಥಾರು ಗ್ರಾಮ ಪಂಚಾಯಿತಿ, ತಾಲ್ಲೂಕು ಕಛೇರಿ, ತಾಲ್ಲೂಕು ಅಬಕಾರಿ ಇಲಾಖೆ ಮತ್ತು ಮೈಸೂರು ಜಿಲ್ಲಾಧಿಕಾರಿಗಳಿಗೆ ನಮ್ಮ ಗ್ರಾಮದಲ್ಲಿ ಮದ್ಯದಂಗಡಿ ತೆರೆಯದಂತೆ ದೂರು ನೀಡಿದ್ದೇವೆ ಆದರು ಹಣ ಬಲ ಹಾಗೂ ರಾಜಕೀಯ ಬಲದಿಂದ ಮದ್ಯದಂಗಡಿ ತೆರೆದರೆ ಮುಂದಾಗುವ ಪರಣಾಮಗಳನ್ನ ಸಂಬಂದಪಟ್ಟವರು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಷಣ್ಮಖ, ಮುಖಂಡರಾದ ಸ್ವಾಮೀಗೌಡ,  ಪುಟ್ಟಪ್ಪಾಜಿ ಸೇರಿದಂತೆ ಹಾಜರಿದ್ದರು.

RELATED ARTICLES
- Advertisment -
Google search engine

Most Popular