ನಟ ದರ್ಶನ್ ಅವರಿಗೆ ಇಂದು (ಫೆಬ್ರವರಿ 16) ಜನ್ಮದಿನದ ಸಂಭ್ರಮ. ಅವರಿಗೆ ಎಲ್ಲ ಕಡೆಗಳಿಂದ ಶುಭಾಶಯ ಬರುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಅವರ ಕಾಮನ್ ಡಿಪಿ ಹಂಚಿಕೊಂಡು ಫ್ಯಾನ್ಸ್ ಸಂಭ್ರಮಿಸುತ್ತಿದ್ದಾರೆ. ಅವರು ಚಿತ್ರರಂಗದಲ್ಲಿ ಮತ್ತಷ್ಟು ಗೆಲುವು ಕಾಣಲಿ ಎಂದು ಫ್ಯಾನ್ಸ್ ಹಾರೈಸುತ್ತಿದ್ದಾರೆ.
ಬರ್ತ್ಡೇ ದಿನ ಹೂವು-ಹಣ್ಣು ತರದಂತೆ ದರ್ಶನ್ ಅವರು ಈ ಮೊದಲೇ ಅಭಿಮಾನಿಗಳ ಬಳಿ ಕೋರಿಕೊಂಡಿದ್ದಾರೆ. ಇದನ್ನು ಅವರು ಫಾಲೋ ಮಾಡುತ್ತಿದ್ದಾರೆ. ದರ್ಶನ್ ಹೆಸರಲ್ಲಿ ಸಾಕಷ್ಟು ಸಾಮಾಜಿಕ ಕಾರ್ಯಗಳು ಕೂಡ ನಡೆಯುತ್ತಿವೆ. ಮಧ್ಯರಾತ್ರಿಯೇ ಫ್ಯಾನ್ಸ್ ಮನೆಯ ಸಮೀಪ ಜಮಾಯಿಸಿ ಸಂಭ್ರಮಿಸಿದ್ದಾರೆ.
ದರ್ಶನ್ ಅವರು ಚಿತ್ರರಂಗಕ್ಕೆ ಕಾಲಿಟ್ಟಿದ್ದು 1997ರಲ್ಲಿ. ‘ಮಹಾಭಾರತ’ ಅವರು ನಟಿಸಿದ ಮೊದಲ ಸಿನಿಮಾ. 200ನೇ ಇಸವಿಯಲ್ಲಿ ರಿಲೀಸ್ಆದ ಶಿವರಾಜ್ಕುಮಾರ್, ಅಂಬರೀಷ್ ನಟನೆಯ ‘ದೇವರ ಮಗ’ ಚಿತ್ರದಲ್ಲಿ ದರ್ಶನ್ ನಟಿಸಿದರು. ಈ ಚಿತ್ರದಲ್ಲಿ ಅವರು ದರ್ಶನ್ ಹೆಸರಿನ ಪಾತ್ರದಲ್ಲೇ ಕಾಣಿಸಿಕೊಂಡರು. ನಂತರ ತಮಿಳು ಚಿತ್ರವೊಂದರಲ್ಲಿ ಅವರು ಬಣ್ಣ ಹಚ್ಚಿದ್ದರು. ‘ಮೆಜೆಸ್ಟಿಕ್’ ಚಿತ್ರದ ಮೂಲಕ ಹೀರೋ ಆದರು. ಮೊದಲ ಸಿನಿಮಾದಲ್ಲೇ ದೊಡ್ಡ ಗೆಲುವು ಕಂಡರು.
‘ಕರಿಯ’, ‘ನಮ್ಮ ಪ್ರೀತಿಯ ರಾಮು’, ‘ಕಲಾಸಿಪಾಳ್ಯ’, ‘ಗಜ’, ಸೇರಿ ಅನೇಕ ಚಿತ್ರಗಳಲ್ಲಿ ದರ್ಶನ್ ನಟಿಸಿದ್ದಾರೆ. ಅವರು ಕನ್ನಡ ಚಿತ್ರರಂಗಕ್ಕೆ ನೀಡಿದ ಕೊಡುಗೆ ತುಂಬಾನೇ ದೊಡ್ಡದು. 2023ರ ಕೊನೆಯಲ್ಲಿ ರಿಲೀಸ್ ಆದ ‘ಕಾಟೇರ’ ಚಿತ್ರ 200 ಕೋಟಿ ರೂಪಾಯಿ ಕ್ಲಬ್ ಸೇರಿದೆ. ಇದರಿಂದ ದರ್ಶನ್ ಅವರ ಖ್ಯಾತಿ ಹೆಚ್ಚಾಗಿದೆ. ಈ ಚಿತ್ರಕ್ಕೆ ತರುಣ್ ಸುಧೀರ್ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ಗೆಲುವು ದರ್ಶನ್ ಬರ್ತ್ಡೇ ಖುಷಿಯನ್ನು ಹೆಚ್ಚಿಸಿದೆ.
ದರ್ಶನ್ ಬರ್ತ್ಡೇ ದಿನ ಅವರ ಮುಂದಿನ ಸಿನಿಮಾ ‘ಡೆವಿಲ್’ ಚಿತ್ರದ ಫಸ್ಟ್ ಲುಕ್ ಟೀಸರ್ ಕೂಡ ಅನಾವರಣ ಆಗಿದೆ. ಇದು ಅಭಿಮಾನಿಗಳ ಖುಷಿಯನ್ನು ದುಪಟ್ಟು ಮಾಡಿದೆ.