ಮೈಸೂರು: ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಮೈಸೂರು ತಾಲ್ಲೂಕು ಘಟಕದ ಆಶ್ರಯದಲ್ಲಿ ಫೆಬ್ರವರಿ 21 ಮತ್ತು 22ರಂದು ರೈತ ತರಬೇತಿ ಶಿಬಿರ ಆಯೋಜಿಸಲಾಗಿದೆ.
ಬರ ಪರಿಸ್ಥಿತಿಯಲ್ಲಿ ಜಾನುವಾರುಗಳ ನಿರ್ವಹಣೆ ಕುರಿತು ಡಾ.ಸಂತೋಷ್ ಒಡೆಯರ್, ಹೈನುರಾಸುಗಳ ಆಯ್ಕೆ ಮತ್ತು ನಿರ್ವಹಣೆ ಕುರಿತು ಡಾ.ಮಧುಚಂದ್ರೇಗೌಡ, ಜಾನುವಾರುಗಳಿಗೆ ರೋಗ ನಿರೋಧಕ ಲಸಿಕೆಗಳ ವಿವರ ಮತ್ತು ವಿಧಾನ ಕುರಿತು ಡಾ.ಗೋಪಿನಾಥ, ಕರುಗಳ ವೈಜ್ಞಾನಿಕ ಸಾಕಾಣಿಕೆ ಕುರಿತು ಡಾ. ಯಶೋಧ, ಹೈನುರಾಸುಗಳಲ್ಲಿ ಕೆಚ್ಚಲುಬಾವು ಮತ್ತು ನಿರ್ವಹಣೆ ಕುರಿತು ಡಾ.ಮಧುಕರ್, ಗೊಡ್ಡು ರಾಸುಗಳ ಗುರುತಿಸುವಿಕೆ ಮತ್ತು ನಿರ್ವಹಣೆ ಕುರಿತು ಡಾ:ವಿಶಾಲಾಕ್ಷಿ ಕೋಲಿ, ಕುರಿ ಮತ್ತು ಮೇಕೆಗಳ ವೈಜ್ಞಾನಿಕ ಸಾಕಾಣಿಕೆ ಕುರಿತು ಡಾ:ಅಪೂರ್ವ,NLM-EDP ಯೋಜನೆ ಕುರಿತು ಡಾ.ಶಶಿಧರ, ಒಣಮೇವು ಪೌಷ್ಟಿಕರಣ ಪ್ರಾತ್ಯಕ್ಷಿಕೆ ಕುರಿತು ಡಾ.ಸಂತೋಷ ಒಡೆಯರ್ ವಿಷಯ ಮಂಡನೆ ಮಾಡಲಿದ್ದಾರೆ.
ಮಾತ್ರವಲ್ಲದೆ, ಮೇವು ಬೆಳೆಗಳ ತಾಟಿಗೆ ಭೇಟಿ ಮತ್ತು ಪ್ರಾತ್ಯಕ್ಷಿಕೆ, ಮೆಗಾ ಡೈರಿಗೆ ಭೇಟಿ ಮತ್ತು ಪ್ರಾತ್ಯಕ್ಷಿಕೆ, ಪ್ರಗತಿಪರ ರೈತ ಮೇಗಳಾಪುರದ ಜಗದೀಶ ಅವರ ಸಮಗ್ರ ಕೃಷಿ ಆಧಾರಿತ ತೋಟಕ್ಕೆ ಭೇಟಿ ಆಯೋಜಿಸಲಾಗಿದೆ.
ಎರಡು ದಿನಗಳ ಕಾಲ ನಡೆಯಲಿರುವ ಶಿಬಿರದಲ್ಲಿ ಭಾಗವಹಿಸುವವರಿಗೆ ಮಧ್ಯಾಹ್ನದ ಊಟ ಮತ್ತು ಬೆಳಿಗ್ಗೆ, ಸಂಜೆ ಟೀ/ಕಾಫಿ ಬಿಸ್ಕತ್ ವ್ಯವಸ್ಥೆ ಮಾಡಲಾಗುವುದು. ತರಬೇತಿ ಶಿಬಿರದಲ್ಲಿ ಅಧ್ಯಯನ ಕಿರುಹೊತ್ತಿಗೆಗಳು ಮತ್ತು ತರಬೇತಿ ಪ್ರಮಾಣ ಪತ್ರ ನೀಡಲಾಗುವುದು.
ಮೊದಲು ಬರುವ 50 ರೈತರಿಗೆ ಮಾತ್ರ ಅವಕಾಶ ಇದೆ. ಆದಕಾರಣ ಮೈಸೂರು ತಾಲ್ಲೂಕಿನ ವ್ಯಾಪ್ತಿಗೆ ಒಳಪಡುವ ರೈತ ಬಾಂಧವರು ನಿಮ್ಮ ಗ್ರಾಮದ ಹತ್ತಿರದಲ್ಲಿರುವ ಪಶುವೈದ್ಯಕೀಯ ಸಂಸ್ಥೆಗಳಲ್ಲಿ ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ.
ಹೆಚ್ಚಿನ ವಿವರಗಳಿಗೆ ಡಾ.ಮ.ಪು.ಪೂರ್ಣಾನಂದ, ಮುಖ್ಯ ಪಶುವ್ಯೆದ್ಯಾಧಿಕಾರಿ (ಆಡಳಿತ) 9448754996. ಡಾ. ಶಶಿಧರ, 9448783189. ಡಾ.ಹರೀಶ, ಸಿದ್ಧರಾಮನಹುಂಡಿ 9449920497. ಡಾ:ರಾಜಶೇಖರ ಮುಡುಬಾಗಿಲು, ಬೀರಿಹುಂಡಿ 9980360200. ಡಾ.ಮಧುಚಂದ್ರೇಗೌಡ, ಇಲವಾಲ & ಡಿ.ಎಂ.ಜಿ.ಹಳ್ಳಿ 9780702704. ಡಾ.ಪನಿಲಾ,ವರುಣ 9481320271. ಡಾ.ಮಧುಕರ್, ಕಡಕೋಳ 7019861248. ಡಾ.ಅಪೂರ್ವ, ದೇವಲಾಪುರ 9631377150. ಡಾ.ದೀಪಕ್ ಜಯಪುರ, 9480702704. ಡಾ.ಮುಸಾದಿಕ್ ಖಾನ್, ಹಾರೊಹಳ್ಳಿ, 9008900333. ಡಾ.ಯಶೋಧ, ಕುಪ್ಪೆಗಾಲ, 7026572925. ಡಾ.ತಾರಿಣಿ, ಗುಂಗ್ರಾಲ್ ಛತ್ರ, 7892535360. ಡಾ.ವಿಶಾಲಾಕ್ಷಿ ಕೋಲಿ, ದೂರ & ಉದ್ಭೂರು, 9110472151. ಡಾ.ಪಾವನಶ್ರೀ, ಕಲ್ಲೂರು ನಾಗನಹಳ್ಳಿ, 9686252261. ಡಾ.ಪ್ರಕೃತಿ, ಕೆ.ಹೆಮ್ಮನಹಳ್ಳಿ 8746905369. ಡಾ.ಸಂತೋಷ ಒಡೆಯರ್, ಬೋಗಾಧಿ 8867037689. ಡಾ.ಅಶೋಕ ಕುಮಾರ, ಸಿದ್ಧಲಿಂಗಪುರ 9481329086. ಡಾ.ವಿದ್ಯಾಶ್ರೀ, ಕೀಳನಪುರ, 9036920412. ಡಾ.ರಮೇಶ, ಹಂಚ್ಯಾ 9945373362. ಡಾ.ನಂದಿನಿ, ಸರ್ಕಾರಿ ಉತ್ತನಹಳ್ಳಿ, 9844916969. ಡಾ.ವರಲಕ್ಷ್ಮಿ, ಹಿನಕಲ್, 8310786448. ಡಾ.ವಾಸುದೇವ, ಗೋಪಾಲಪುರ, 9448754695 ಸಂಪರ್ಕಿಸಬಹುದು.