Tuesday, April 22, 2025
Google search engine

Homeಅಪರಾಧಕಾನೂನುಕರಾಮುವಿ ಪ್ರೊಫೆಸರ್, ಅಸೋಸಿಯೇಟ್ ಪ್ರೊಫೆಸರ್ ಹುದ್ದೆಗಳ ನೇರ ನೇಮಕಾತಿಗೆ ತಡೆಯಾಜ್ಞೆ

ಕರಾಮುವಿ ಪ್ರೊಫೆಸರ್, ಅಸೋಸಿಯೇಟ್ ಪ್ರೊಫೆಸರ್ ಹುದ್ದೆಗಳ ನೇರ ನೇಮಕಾತಿಗೆ ತಡೆಯಾಜ್ಞೆ

ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಪ್ರೊಫೆಸರ್ ಹಾಗೂ ಅಸೋಸಿಯೇಟ್ ಪ್ರೊಫೆಸರ್ ಹುದ್ದೆಗಳ ನೇರ ನೇಮಕಾತಿಗೆ ಉಚ್ಛ ನ್ಯಾಯಾಲಯ ತಡೆಯಾಜ್ಞೆ ನೀಡಿದೆ.

ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯವು  ತನ್ನ 7 ಪ್ರೊಫೆಸರ್ ಹಾಗೂ 25 ಅಸೋಸಿಯೇಟ್ ಪ್ರೊಫೆಸರ್ ಹುದ್ದೆಗಳನ್ನು ನೇರನೇಮಕಾತಿಗೆ  ಹಿಂದಿನ ಕುಲಪತಿ ಡಾ.ವಿದ್ಯಾಶಂಕರ್ ಅವದಿಯ 18.10.2021ರಲ್ಲಿ ಅಧಿಸೂಚನೆ ಹೊರಡಿಸಿತ್ತು. ಸದರಿ‌ ಅಧಿಸೂಚನೆಯು UGC ನಿಯಮಾನುಸಾರ ಇರುವುದಿಲ್ಲ ಹಾಗೂ ಅರ್ಜಿ ಸಲ್ಲಿಸಲು ನಿಯಮಾನುಸಾರ ಸಾಕಷ್ಟು ಸಮಯಾವಕಾಶ ಕಲ್ಪಿಸಿರುವುದಿಲ್ಲವೆಂದು ಕೆಲವು ಅಭ್ಯರ್ಥಿಗಳು ಹಿಂದೆ ರಿಟ್ ಅರ್ಜಿ W.P 6147/2022 ಸಲ್ಲಿಸಿದ್ದು ಮಾನ್ಯ ಉಚ್ಚ ನ್ಯಾಯಾಲಯ 29.03.2022ರ ಮಧ್ಯಂತರ ಸದರಿ ನೇಮಕಾತಿಗೆ ತಡೆಯಾಜ್ಞೆ ನೀಡಿತ್ತು. ನಂತರದಲ್ಲಿ ಮುಕ್ತ ವಿವಿ ಸದರಿ 18.10.2021ರ ಅಧಿಸೂಚನೆಯನ್ನು ಹಿಂಪಡೆದಿತ್ತು.

ಕರಾಮುವಿ  ಮತ್ತೊಮ್ಮೆ 16.08.2023ರ ಅಧಿಸೂಚನೆ ಹೊರಡಿಸಿ  7 ಪ್ರೊಫೆಸರ್ ಹಾಗೂ 25 ಅಸೋಸಿಯೇಟ್ ಪ್ರೊಫೆಸರ್ ಹುದ್ದೆಗಳ ನೇಮಕಾತಿ ಕರೆದಿತ್ತು, 18.10.2021 ಅಧಿಸೂಚನೆಯಂತೆ ಅರ್ಜಿ ಸಲ್ಲಿದ್ದವರು, ಮತ್ತೊಮ್ಮೆ ಅಜಿ೯ ಸಲ್ಲಿಸುವ ಅವಶ್ಯಕತೆ ಇಲ್ಲ ಆದರೆ ಹೆಚ್ಚುವರಿ ಅರ್ಜಿ:ಶುಲ್ಕ ಮಾತ್ರ ಪಾವತಿಸುವುದು ಸೂಚಿಸಲಾಗಿತ್ತು.

16.08.2021ರ ಮರುಅಧಿಸೂಚನೆಯಲ್ಲಿ ಮೀಸಲಾತಿ ಸಂಬಂಧದ ಸರ್ಕಾರಿ ಆದೇಶ 22.2.1994ಕ್ಕೆ ವಿರುದ್ಧವಾಗಿ ಶಿಕ್ಷಣ ಶಾಸ್ತ್ರ, ಗಣಿತ ಶಾಸ್ತ್ರ,  ಹಾಗೂ ಭೌತಶಾಸ್ತ್ರ ವಿಭಾಗಗಳಿಗೆ ತಲಾ ಒಂದು ಅಸೋಸಿಯೇಟ್ ಪ್ರೊಫೆಸರ್ ಹುದ್ದೆಯನ್ನು, ಇತಿಹಾಸ ವಿಭಾಗಕ್ಕೆ ಒಂದು ಪ್ರೊಫೆಸರ್ ಹುದ್ದೆಯನ್ನು  ಕಲ್ಯಾಣ ಕರ್ನಾಟಕ ಭಾಗಕ್ಕೆ ಮೀಸಲಿರಿಸಿರುವುದು ಸೇರಿದಂತೆ UGC  ನಿಯಮಾವಳಿಗಳನ್ವಯ ಸಲ್ಲಿಸಲಾದ ಅರ್ಜಿಗಳನ್ನು ಪರಿಶೀಲಿಸಿ ಮೌಖಿಕ‌ ಸಂದರ್ಶಶನಕ್ಕೆ ಅರ್ಹರಿರುವ ಅಭ್ಯರ್ಥಿಗಳ ವಿವರಗಳನ್ನು ಕರಾಮುವಿ ಅಧಿಕೃತ ವೆಬ್‌ ಸೈಟ್‌ ನಲ್ಲಿ ಪ್ರಕಟಿಸದೇ ತರಾತುರಿಯಲ್ಲಿ 17.02.2024ಕ್ಕೆ ಸಂದರ್ಶನ ನಿಗದಿಪಡಿಸುದ್ದುದನ್ನು ರಿಟ್ ಅರ್ಜಿಯಲ್ಲಿ ಪ್ರಶ್ನಿಸಲಾಗಿತ್ತು.

ಅರ್ಜಿದಾರರ ವಾದವನ್ನು‌ ಮತ್ತು ದಾಖಲೆಗಳನ್ನು ಪರಿಶೀಲಿಸಿ ಇದೇ ತಿಂಗಳ 16 ರ ಆದೇಶದಂತೆ ಉಚ್ಛ ನ್ಯಾಯಾಲಯವು ಕರಾಮುವಿಯ 16.08.2021ರ ಶಿಕ್ಷಕ ಹುದ್ದೆಗಳ ನೇರನೇಮಕಾತಿ  ಅಧಿಸೂಚನೆಗೆ ತಡೆಯಾಜ್ಞೆ  ನೀಡಿದ್ದು, ರಾಜ್ಯ ಸರ್ಕಾರ, ಉನ್ನತ ಶಿಕ್ಷಣ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಮುಕ್ತ ವಿವಿಗೆ ನೋಟೀಸ್ ಜಾರಿಗೊಳಿಸಿ ಪ್ರಕರಣವನ್ನು ಮುಂದೂಡಿದೆ.

ಅಲ್ಲಿಗೆ  ಪ್ರೊಫೆಸರ್ ಹಾಗೂ  ಅಸೋಸಿಯೇಟ್ ಪ್ರೊಫೆಸರ್ ಹುದ್ದೆಗಳ ನೇಮಕಾತಿ ಮತ್ತೊಮ್ಮೆ ಉಚ್ಛ ನ್ಯಾಯಾಲಯದ ಮೆಟ್ಟಿಲೇರಿದಂತಾಗಿದೆ.

 ಕಳೆದ 31.07.2023ರಲ್ಲಿ ಕರಾಮುವಿಯು ಗುತ್ತಿಗೆ ಅಧಾರದ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಸಂಬಂಧ ಹೊರಡಿಸಿದ್ದ ಅಧಿಸೂಚನೆಯೂ UGC ನಿಯಮಾವಳಿ ಹಾಗೂ ಮೀಸಲಾತಿ ಉಲ್ಲಂಘನೆ ಕಾರಣಕ್ಕೆ ಉಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದು, ನಂತರದಲ್ಲಿ ಕರಾಮುವಿ ಆಡಳಿತ ಮಂಡಳಿ ಈ ಗುತ್ತಿಗೆ ಆಧಾರಿತ ಶಿಕ್ಷಕ ಹುದ್ದೆಗಳನ್ನು ಹಿಂಪಡೆದಿದ್ದನ್ನು ಇಲ್ಲ ಸ್ಮರಿಸಬಹುದಾಗಿದೆ.

RELATED ARTICLES
- Advertisment -
Google search engine

Most Popular