Saturday, April 19, 2025
Google search engine

Homeರಾಜ್ಯಸುದ್ದಿಜಾಲಕೆ.ಆರ್. ನಗರ: ಮಿನಿವಿಧಾನಸೌಧದ ಸಭಾಂಗಣದಲ್ಲಿ ಬಸವಣ್ಣನವರ ಭಾವಚಿತ್ರ ಅನಾವರಣ

ಕೆ.ಆರ್. ನಗರ: ಮಿನಿವಿಧಾನಸೌಧದ ಸಭಾಂಗಣದಲ್ಲಿ ಬಸವಣ್ಣನವರ ಭಾವಚಿತ್ರ ಅನಾವರಣ

ವರದಿ: ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ : ಶತಮಾನದಲ್ಲಿ ಅನುಭವ ಮಂಟಪ ನಿರ್ಮಾಣ ಮಾಡುವ ಮೂಲಕ ಸಮಸಮಾಜ ನಿರ್ಮಾಣ ಮಾಡಲು ಬಸವಣ್ಣನವರು ನೀಡಿದ ತತ್ವ, ಆದರ್ಶ, ಕೊಡುಗೆ, ಸಂದೇಶಗಳು ಎಂದೆoದಿಗೂ ಪ್ರಸ್ತುತವಾಗಿದೆ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.

ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ತಾಲೂಕು ಆಡಳಿತದ ವತಿಯಿಂದ ಏರ್ಪಡಿಸಲಾಗಿದ್ದ ಕಾರ್ಯಕ್ರದಲ್ಲಿ ರಾಜ್ಯದ ಸಾಂಸ್ಕೃತಿಕಮನಾಯಕ ಬಸವಣ್ಣನವರ ಭಾವಚಿತ್ರ ಅನಾವರಣಗೊಳಿಸಿ ಮಾತನಾಡಿದರು.
ಸಮಾನ ಬದುಕನ್ನು ಕಟ್ಟಿಕೊಡಲು ಜಾತೀಯತೆ ವಿರುದ್ದ ಹೋರಾಟ ಮಾಡಿದ ಮಹಾನ್‌ಚೇತನ ಎಂದರು.
ದೇಶದ ಸಂವಿಧಾನ ಬಸವಣ್ಣನವರ ತತ್ವಗಳ ಆಧಾರದ ಮೇಲೆಯೆ ರಚಿಸಲಾಗಿದ್ದು ಅದರಿಂದಲೆ ಇಂದು ಎಲ್ಲಾ ಕಟ್ಟಕಡೆಯ ಸಮಾಜದವರಿಗೂ ನ್ಯಾಯ ದೊರಕಲು ಅವಕಾಶವಾಗಿದೆ ಎಂದರು.

ಬಸವಣ್ಣನವರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಒಂದಷ್ಟು ಮಾತುಕೇಳಿ ಹೋದರೆ ಸಾಲದು ಪ್ರತಿಯೊಬ್ಬರೂ ಅವರ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಮಡು ನಡೆದಲ್ಲಿ ಸಮಸಮಾಜದೊಂದಿಗೆ ಜಾತ್ಯಾತೀತಿ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದರು.

ಎಲ್ಲ ಸರಕಾರಿ ಕಛೇರಿಗಳಲ್ಲಿ ಬಸವಣ್ಣನವರ ಆಭವಚಿತ್ರ ಇಡಬೇಕೆಂಬ ಸರಕಾರದ ಆದೇಶದ ಮೇರೆಗೆ ಇಂದು ಭಾವಚಿತ್ರವನ್ನು ಅನಾವರಣಗೊಳಿಸಲಾಗುತ್ತಿದ್ದು ತಾಲೂಕಿನ ಸಮಾಜದವರ ಬೇಡಿಕೆಯಂತೆ ಎಲ್ಲರೊಂದಿಗೆ ಚರ್ಚಿಸಿ ಸರಕಾರಕ್ಕೆ ಮನವಿ ಸಲ್ಲಿಸಿ ಪಟ್ಟಣದ ಯಾವುದಾದರೂ ಪ್ರತಿಷ್ಠಿತ ವೃತ್ತಕ್ಕೆ ವಿಶ್ವಗುರು ಬಸವಣ್ಣನವರ ಹೆಸರನ್ನು ನಾಮಕರಣ ಮಾಡಲು ಕ್ರಮ ಕೈಗೊಳ್ಳಲಾಗುವುದಾಗಿ ಹೇಳಿದರು.

ಜಿ.ಪಂ.ಮಾಜಿ ಉಪಾಧ್ಯಕ್ಷ ಎ.ಎಸ್.ಚನ್ನಬಸಪ್ಪ, ಅಖಿಲ ಭಾರತ ವೀರಶೈವ ಮಹಾಸಭಾದ ತಾಲೂಕು ಅಧ್ಯಕ್ಷ ಲಾಳನಹಳ್ಳಿಕೆಂಪರಾಜು, ಕಲ್ಯಾಣಪುರಮಠದ ಶರಣೆ ಚಿನ್ಮಯಿತಾಯಿ, ನಿವೃತ್ತನೌಕರರ ಸಂಘದ ತಾಲೂಕು ಅಧ್ಯಕ್ಷ ಸಣ್ಣಲಿಂಗಪ್ಪ, ಲಾಳನಹಳ್ಳಿರವಿಕುಮಾರ್ ಗ್ರೇಡ್೨ ತಹಸೀಲ್ದಾರ್ ಬಾಲಸುಬ್ರಹ್ಮಣ್ಯಂ ಮತ್ತಿತರರು ಮಾತನಾಡಿದರು.

ಎಪಿಎಂಸಿ ನಿರ್ದೇಶಕ ಹೆಚ್.ಪಿ.ಪ್ರಶಾಂತ್, ಟಿಎಪಿಸಿಂಎಸ್ ನಿರ್ದೆಶಕ ರಾಮಕೃಷ್ಣೇಗೌಡ, ತಾಲೂಕು ಶಿಕ್ಷಕರಸಂಘದ ಅಧ್ಯಕ್ಷ ರಾಜಶೇಖರ್, ಬಿಜೆಪಿ ಮಹಿಳಾಮೋರ್ಚಾ ಅಧ್ಯಕ್ಷೆ ದಾಕ್ಷಾಯಿಣಿ, ತಾಲೂಕು ಕಾಯಕ ಸಮಾಜಗಳ ಒಕ್ಕೂಟದ ಅಧ್ಯಕ್ಷ ತಿಮ್ಮಶೆಟ್ಟಿ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಎಂ.ಎಸ್.ಮಹದೇವ್, ನಗರಾಧ್ಯಕ್ಷ ಎಂ.ಜೆ.ರಮೇಶ್, ವೀರಶೈವ ಸಮಾಜದ ಮುಖಂಡರಾದ ಗಡ್ಡಮಹೇಶ್, ರಾ.ಜ.ಶ್ರೀಕಾಂತ್, ದಿಲೀಪ್, ಚೌಕಹಳ್ಳಿಶೇಖರ್, ಪುಟ್ಟರಾಜು, ಜಗದೀಶ್, ನವೀನ್, ಪುನೀತ್ ಮತ್ತಿತರ ಮುಖಂಡರು ಹಾಗೂ ತಾಲೂಕಿನ ವಿವಿಧ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.


RELATED ARTICLES
- Advertisment -
Google search engine

Most Popular