Tuesday, April 22, 2025
Google search engine

HomeUncategorizedಎಸ್‌ಡಿಎಂ ಕಾಲೇಜಿನಲ್ಲಿ ಉದ್ಯೋಗ ಕೌಶಲ್ಯ ತರಬೇತಿ ಕಾರ್ಯಕ್ರಮ

ಎಸ್‌ಡಿಎಂ ಕಾಲೇಜಿನಲ್ಲಿ ಉದ್ಯೋಗ ಕೌಶಲ್ಯ ತರಬೇತಿ ಕಾರ್ಯಕ್ರಮ

ಮೈಸೂರು: ಎಂಎಂಕೆ ಮತ್ತು ಎಸ್‌ಡಿಎಂ ಮಹಿಳಾ ಕಾಲೇಜಿನಲ್ಲಿ, ಮಹಿಂದ್ರಾ ಪ್ರೈಡ್ ಕ್ಲಾಸ್ರೂಮ್ ಮತ್ತು ನಾಂದಿ ಫೌಂಡೇಶನ್ ಸಹಯೋಗದಲ್ಲಿ ಅಂತಿಮ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ, ಆರು ದಿನಗಳ ಉದ್ಯೋಗ ಕೌಶಲ್ಯ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು, ಕಾರ್ಯಕ್ರಮವನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊಫೆಸರ್ ಸಾಯಿನಾಥ್ ಮಲ್ಲಿಗೆಮಾಡು ರವರು ಉದ್ಘಾಟಿಸಿ ಉದ್ಯೋಗ ಕೌಶಲ್ಯ ತರಬೇತಿ ಕಾರ್ಯಕ್ರಮಗಳ ಬಗ್ಗೆ ಮತ್ತು ಸ್ಪರ್ಧಾತ್ಮಕ ಯುಗದಲ್ಲಿ ಕೌಶಲ್ಯಗಳ ಅಗತ್ಯತೆಗಳ ಕುರಿತು ವಿದ್ಯಾರ್ಥಿನಿಯರಿಗೆ ತಿಳಿಸಿಕೊಟ್ಟರು.

ಆರು ದಿನಗಳ ಕಾರ್ಯಕ್ರಮದಲ್ಲಿ ಉದ್ಯೋಗ ಕೌಶಲ್ಯಗಳಾದ ಪ್ರಾಬ್ಲಮ್ ಸಾಲ್ವ್ಯಿಂಗ್, ಟೈಮ್ ಮ್ಯಾನೇಜ್ಮೆಂಟ್, ಎಫೆಕ್ಟಿವ್ ಸ್ಪೀಕಿಂಗ್, ಪಬ್ಲಿಕ್ ಸ್ಪೀಕಿಂಗ್, ಬಾಡಿ ಲ್ಯಾಂಗ್ವೇಜ್, ಪ್ರೆಸೆಂಟೇಷನ್ ಸ್ಕಿಲ್ಸ್, ಗ್ರೂಪ್ ಡಿಸ್ಕಶನ್, ಪರ್ಸನಲ್ ಇಂಟರ್ವ್ಯೂ ಮತ್ತು ಇತರ ಕೌಶಲ್ಯಗಳ ಬಗ್ಗೆ ಸುಮಾರು ೩೧೬ ವಿದ್ಯಾರ್ಥಿನಿಯರಿಗೆ ತರಬೇತಿ ನೀಡಲಾಯಿತು. ಕಾರ್ಯಕ್ರಮದಲ್ಲಿ ಉಪ ಪ್ರಾಂಶುಪಾಲ ಪ್ರೊಫೆಸರ್ ಎನ್. ಭಾರತೀ, ನಾಂದಿ ಫೌಂಡೇಶನ್ ಸಂಸ್ಥೆಯ ತರಬೇತು, ಆದಿತ್ಯ, ದಾಮೋದರನ್, ಸಾಧಿಕಾ ಬಾನು,ಕೀರ್ತಿ ಶೆಟ್ಟಿ, ಲೀನಾ ರಾವ್, ಲಕ್ಷ್ಮಿ, ಕಾಲೇಜಿನ ಐಕ್ಯೂಎಸಿ ಸಂಚಾಲಕಿಯಾದ ಶ್ರೀಮತಿ ಕೆ. ಎಸ್. ಸುಕೃತ, ಪ್ಲೇಸ್ಮೆಂಟ್ ಅಧಿಕಾರಿಯಾದ ಮಹದೇವಸ್ವಾಮಿ ಎಸ್, ಪ್ಲೇಸ್ಮೆಂಟ್ ಸಮಿತಿಯ ಸದಸ್ಯರುಗಳಾದ, ಶ್ರೀಮತಿ ರಾಜರಾಜೇಶ್ವರಿ, ವಿದ್ಯಾ ಎಂ. ಆರ್., ಡಾ. ಸುಧಾಮಣಿ, ಡಾ. ಎನ್ ದಿಲೀಪ್, ಕಾವ್ಯಶ್ರೀ ಮತ್ತು ವಿದ್ಯಾರ್ಥಿನಿಯರು ಹಾಜರಿದ್ದರು.

RELATED ARTICLES
- Advertisment -
Google search engine

Most Popular