ವರದಿ : ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಸಾಲಿಗ್ರಾಮ ತಾಲೂಕಿನ ಹಳಿಯೂರು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಎಚ್.ಎಸ್.ಹರೀಶ್ ಅವಿರೋಧವಾಗಿ ಸೋಮವಾರ ಆಯ್ಕೆಯಾದರು
ಸಂಘದ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಎಚ್.ಎಸ್.ಹರೀಶ್ ಅವರನ್ನು ಹೊರತು ಪಡಿಸಿ ಬೇರೆಯಾರು ನಾಮಪತ್ರ ಸಲ್ಲಿಸದ ಕಾರಣ ಅವಿರೋಧವಾಗಿ ಆಯ್ಕೆಗೊಂಡರು.
ಹಾಲಿ ಅಧ್ಯಕ್ಷರಾಗಿದ್ದ ಎಚ್.ಬಿ.ನವೀನ್ ಅವರ ಅವರ ರಾಜೀನಾಮೆ ಯಿಂದ ಈ ನಡೆಯಿತು.ಚುನಾವಣಾಧಿಕಾರಿಯಾಗಿ ಸಂಘದ ಕಾರ್ಯದರ್ಶಿ ಸುದರ್ಶನ್ ಕಾರ್ಯನಿರ್ವಹಿಸಿದರು.
ನಂತರ ಮಾತನಾಡಿದ ನೂತನ ಅಧ್ಯಕ್ಷ ಹರೀಶ್, ಸಂಘದ ಆಡಳಿತ ಮಂಡಳಿ ಮತ್ತು ಷೇರುದಾರ ರೈತರ ಸಹಕಾರ ದೊಂದಿಗೆ ಸಂಘದ ನೂತನ ಕಟ್ಟಡ ನಿರ್ಮಾಣ ಮಾಡಲು ಶ್ರಮಿಸುತ್ತೇನೆ ಜತಗೆ ಜಿಲ್ಲಾ ಸಂಘದಿಂದ ರೈತರಿಗೆ ಸಿಗುವ ಸವಲತ್ತುಗಳನ್ನು ಒದಗಿಸಿ ಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷ ಎಚ್.ಎಂ. ಕುಳ್ಳೇಗೌಡ, ಉಪಾಧ್ಯಕ್ಷ ಎಚ್.ಸಿ.ಶ್ರೀನಿವಾಸ್, ನಿರ್ದೇಶಕರಾದ ಎಚ್.ಎಸ್.ಜಗದೀಶ್, ನವೀನ್, ಯೋಗಾನಂದ್,ರಾಜಕುಮಾರ್, ಸ್ವಾಮಿ,ಮಮತಾ,ಜಯಮ್ಮ,ಗೋವಿಂದೇಗೌಡ ಹಾಜರಿದ್ದರು.
ನಂತರ ನೂತನ ಅಧ್ಯಕ್ಷ ಎಚ್.ಎಸ್.ಹರೀಶ್ ಅವರನ್ನು ಹಳಿಯೂರು ಗ್ರಾ.ಪಂ.ಸದಸ್ಯ ಮಲ್ಲೇಶಚಾರಿ, ಮುಖಂಡರಾದ ರವೀಶ್,ಎಚ್.ಎಸ್.ಕುಮಾರ್,ಚಂದ್ರಣ್ಣ, ಅಂಗಡಿ ಆಶೋಕ್ ಸೇರಿದಂತೆ ಮತ್ತಿತರರು ಅಭಿನಂಧಿಸಿದರು.