Monday, April 21, 2025
Google search engine

Homeರಾಜಕೀಯಕುಮಾರಸ್ವಾಮಿ ಯಾರಿಗೆ ಧಮ್ಕಿ ಹಾಕುತ್ತಿದ್ದಾರೆ ಗೊತ್ತಿದೆ: ಡಿಸಿಎಂ ಡಿ.ಕೆ.ಶಿವಕುಮಾರ್ ಗಂಭೀರ ಆರೋಪ

ಕುಮಾರಸ್ವಾಮಿ ಯಾರಿಗೆ ಧಮ್ಕಿ ಹಾಕುತ್ತಿದ್ದಾರೆ ಗೊತ್ತಿದೆ: ಡಿಸಿಎಂ ಡಿ.ಕೆ.ಶಿವಕುಮಾರ್ ಗಂಭೀರ ಆರೋಪ

ಬೆಂಗಳೂರು: ಕುಮಾರಸ್ವಾಮಿ ಏನೇನೋ ಹೇಳಿದ್ದಾರೆ. ಕುಮಾರಸ್ವಾಮಿ ಯಾರಿಗೆ ಕಾಲ್ ಮಾಡುತ್ತಿದ್ದಾರೆ, ಯಾರಿಗೆ ಧಮ್ಕಿ ಹಾಕುತ್ತಿದ್ದಾರೆ ಎಂದು ನನಗೆ ಎಲ್ಲರೂ ಹೇಳುತ್ತಿದ್ದಾರೆ. ಬಿಜೆಪಿ ಸ್ಟ್ರಾಟಜಿ ಏನು ಎಂದು ಎಲ್ಲವೂ ಗೊತ್ತಾಗಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.

ಬೆಂಗಳೂರಿನಲ್ಲಿ ಅಡ್ಡ ಮತದಾನಕ್ಕೆ ಪ್ರಯತ್ನ ಮಾಡುತ್ತಿದ್ದಾರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸುಮ್ಮನೆ ಅರ್ಜಿ ಹಾಕ್ತಾರಾ ಎಂದು ಹೇಳುವ ಮೂಲಕ ಅಡ್ಡ ಮತದಾನಕ್ಕೇ ರಾಜ್ಯಸಭೆಯಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಹಾಕಿದೆ ಎಂದರು. ಅಲ್ಲದೆ, ಏನೇನು ನಡೆಯುತ್ತಿದೆ ಅನ್ನೋದು ನಮಗೆಲ್ಲವೂ ಗೊತ್ತಿದೆ ಎಂದರು.

ಫೆಬ್ರವರಿ 27 ಕ್ಕೆ ನೋಡೋಣ ಎಂದ ಡಿಕೆ ಶಿವಕುಮಾರ್, ಕುಮಾರಸ್ವಾಮಿ ಮಾತಾಡಿದ್ದಾರೆ, ಕಾಲ್ ಮಾಡಿದ್ದಾರೆ, ಧಮ್ಕಿ ಹಾಕಿದ್ದಾರೆ. ಏನೇನು ನಡೆಯುತ್ತಿದೆ ಅನ್ನೋದು ನಮಗೆ ಗೊತ್ತು. ನಮಗೆ ಯಾರ ಅಗತ್ಯ ಇಲ್ಲ. ನಾವು 136 ಸೀಟು ಗೆದ್ದಿದ್ದೇವೆ. ಇಬ್ಬರು ಪಕ್ಷೇತರರು ನಮ್ಮ ಜೊತೆಗೆ ಇದ್ದಾರೆ. ಇದು ಅಲ್ಲದೇ ಇನ್ನೂ ಯಾರ್ಯಾರೋ‌ ಇದ್ದಾರೆ. ಎಲ್ಲವನ್ನೂ ತೋರಿಸಿ ಆಮೇಲೆ ಮಾತಾಡುತ್ತೇನೆ ಎಂದರು.

ತಮ್ಮ ಜೊತೆ ಬಿಜೆಪಿ ನಾಯಕ ಎಸ್.ಟಿ ಸೋಮಶೇಖರ್ ಹೆಚ್ಚು ಓಡಾಡುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿಕೆ ಶಿವಕುಮಾರ್, ಅವರು ಮೂರು ವರ್ಷ ಆ ಕಡೆ ಹೋಗಿದ್ದರು ಅಷ್ಟೇ. 35 ವರ್ಷ ಜೊತೆಯಲ್ಲೇ ಸಂಸಾರ ಮಾಡಿದ್ದೀವಿ ನಡೀರಿ ಎಂದರು.

ಶಾಲೆಗಳಲ್ಲಿ ಘೋಷವಾಕ್ಯ ಬದಲಾವಣೆ ವಿಚಾರವಾಗಿ ಮಾತನಾಡಿದ ಡಿಕೆ ಶಿವಕುಮಾರ್, ನನಗೆ ಇದರ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ನಾವು ಕುವೆಂಪು ಅವರ ಆಚಾರ ವಿಚಾರ ಪ್ರಚಾರ ಮಾಡುತ್ತಿದ್ದೇವೆ. ಭಾರತೀಯ ಜನನಿಯ ತನುಜಾತೆ, ಜಯಹೇ ಕರ್ನಾಟ ಮಾತೇ ಅಂತ ಹೇಳಿ, ಸರ್ವಜನಾಂಗದ ಶಾಂತಿಯ ತೋಟ ಅಂತೇಳಿ ನಾವೇ ಪ್ರತಿದಿನ ಕುವೆಂಪು ಅವರನ್ನ ಬದುಕಿನಲ್ಲಿ ಅಳವಡಿಸಿಕೊಳ್ಳುತ್ತಿರುವುದು ಎಂದರು.

ಬಿಜೆಪಿಯವರಿಗೆ ಮಾಡಲು ‌‌ಕೆಲಸ ಇಲ್ಲ. ಬರಿ ತಪ್ಪು ಕಂಡುಹಿಡಿಯುದನ್ನೇ ಯೋಚನೆ ಮಾಡುತ್ತಿರುತ್ತಾರೆ. ಬದುಕಿನ ಬಗ್ಗೆ ಯೋಚನೆ ಇಲ್ಲ, ಬರೀ ಭಾವನೆ ಬಗ್ಗೆ ಯೋಚನೆ ಮಾಡುತ್ತಾರೆ. ನಾವು ಬದುಕಿನ ಬಗ್ಗೆ ಯೋಚನೆ ಮಾಡುತ್ತೇವೆ, ಅವರ ಸಮಾಜವನ್ನ ಕೆಡಿಸುವ ಕೆಲಸ ಮಾಡುತ್ತಾರೆ. ಕೈಮುಗಿದು ಬರುವುದಲ್ಲಿ‌ ತಪ್ಪೇನು ಇಲ್ಲ ಎಂದರು.

RELATED ARTICLES
- Advertisment -
Google search engine

Most Popular