ಮೈಸೂರು: ರೋಟರಿ ಇನ್ನರ್ ವೀಲ್ ಕ್ಲಬ್ – ಮೈಸೂರು ಮತ್ತು ರೋಟರಿ ಇನ್ನರ್ ವೀಲ್ ಕ್ಲಬ್ – ಮೈಸೂರು ಗೋಲ್ಡ್ ರವರ ಸಹಯೋಗದಲ್ಲಿ ವಿವಿಧ ರೀತಿಯ ಕ್ಯಾನ್ಸರ್ ಆರಂಭಿಕ ಲಕ್ಷಣಗಳು ಮತ್ತು ಔಷಧಿ ವಿಷಯದಡಿಯಲ್ಲಿ ವಿಜಯ ವಿಠಲ ವಿದ್ಯಾ ಶಾಲೆಯಲ್ಲಿ ಶಿಕ್ಷಕರಿಗೆ ಜಾಗೃತಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಸಂಪನ್ಮೂಲ ವ್ಯಕ್ತಿಗಳಾದ ಡಾ.ಜಯಕಾರ್ತಿಕ್.ವೈ.ಆಂಕೊಲಾಜಿಸ್ಟ್ ತಜ್ಞ,ಎಂ.ಬಿ.ಬಿ.ಎಸ್,ಎಂ.ಎಸ್.(ಜನರಲ್ ಸರ್ಜರಿ),ಡಿ.ಎನ್.ಬಿ(ಸರ್ಜಿಕಲ್ ಅಂಕೊಲಾಜಿ), ಮಣಿಪಾಲ್ ಆಸ್ಪತ್ರೆ, ಮೈಸೂರು ಇವರು ಮಾತನಾಡುತ್ತಾ, ಕ್ಯಾನ್ಸರ್ ಎಂದರೇನು?, ಮನುಷ್ಯನ ದೇಹದಲ್ಲಿ ಕ್ಯಾನ್ಸರ್ ಹೇಗೆ ಉದ್ಭವವಾಗುತ್ತದೆ ಎಂಬುದನ್ನು ಉದಾಹರಣೆಗಳ ಮೂಲಕ ತಿಳಿಸಿದರು. ಕ್ಯಾನ್ಸರ್ ಕಂಡು ಹಿಡಿಯುವ ಹಲವು ಬಗೆಯ ವಿಧಾನಗಳ ಬಗ್ಗೆ ಕೆಲವು ಉದಾಹರಣೆಗಳನ್ನು ಕೊಡುವ ಮೂಲಕ ತಿಳಿಸಿದರು. ಕ್ಯಾನ್ಸರ್ ನ ವಿವಿಧ ಹಂತಗಳ ಬಗ್ಗೆ, ಕ್ಯಾನ್ಸರ್ ಅನ್ನು ಕಿಮೋ ಥೆರಪಿ, ವ್ಯಾಕ್ಸಿನ್,ಸರ್ಜರಿಗಳ ಮೂಲಕ ತಡೆಗಟ್ಟಬಹುದು ಎಂಬುದನ್ನು ತಿಳಿಸಿದರು.
ಈ ಸಂದರ್ಭದಲ್ಲಿ ವಿಜಯ ವಿಠಲ ವಿದ್ಯಾ ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ವೀಣಾ ಎಸ್.ಎ,ರೋಟರಿ ಇನ್ನರ್ ವೀಲ್ ಕ್ಲಬ್ ನ ಸದಸ್ಯರು,ರೋಟರಿ ಇನ್ನರ್ ವೀಲ್ ಕ್ಲಬ್ ಮೈಸೂರು ಗೋಲ್ಡ್ ನ ಸದಸ್ಯರು, ವಿವಿಧ ವಿಭಾಗದ ಮುಖ್ಯಸ್ಥರು, ಶಿಕ್ಷಕರು ಉಪಸ್ಥಿತರಿದ್ದರು.
