ಸುಲ್ತಾನ್‌ಪುರ್: ಆ. ೨೦೧೮ರ ಮಾನಹಾನಿ ಪ್ರಕರಣದಲ್ಲಿ ಇಂದು ಮಂಗಳವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಜಾಮೀನು ಮಂಜೂರಾಗಿದೆ. ಆಗಸ್ಟ್ ೨೦೧೮ರಲ್ಲಿ ಬಿಜೆಪಿ ನಾಯಕರೊಬ್ಬರು ರಾಹುಲ್ ಗಾಂಧಿ ವಿರುದ್ಧ ದಾಖಲಿಸಿದ್ದ ಮಾನಹಾನಿ ಪ್ರಕರಣದಲ್ಲಿ ತನ್ನೆದುರು ಹಾಜರಾಗುವಂತೆ ಸುಲ್ತಾನ್‌ಪುರ್‌ನಲ್ಲಿನ ಜಿಲ್ಲಾ ಸಿವಿಲ್ ನ್ಯಾಯಾಲಯವು ೩೬ ಗಂಟೆಗಳಿಗೂ ಮುಂಚೆ ರಾಹುಲ್ ಗಾಂಧಿ ಅವರಿಗೆ ಸಮನ್ಸ್ ಜಾರಿಗೊಳಿಸಿತ್ತು.
ಭಾರತ್ ಜೋಡೊ ನ್ಯಾಯ ಯಾತ್ರೆಯು ಮಂಗಳವಾರ ೩೮ನೇ ದಿನವನ್ನು ಪ್ರವೇಶಿಸಿದೆ. ಇಂದು ಅಮೇಥಿ ಜಿಲ್ಲೆಯ ಫುರ್ಸಂತ್ ಗಂಜ್ ನಿಂದ ಪ್ರಾರಂಭವಾಗಲಿರುವ ಯಾತ್ರೆಯು, ರಾಯ್ ಬರೇಲಿ ಹಾಗೂ ಲಕ್ನೊದತ್ತ ತೆರಳಲಿದೆ.