Sunday, April 20, 2025
Google search engine

Homeಅಪರಾಧಅಕ್ಕಿ ಸಾಲ ಪಡೆದಿದ್ದ ಅಧಿಕಾರಿ ಅಮಾನತು

ಅಕ್ಕಿ ಸಾಲ ಪಡೆದಿದ್ದ ಅಧಿಕಾರಿ ಅಮಾನತು

ತುಮಕೂರು: ತಾಲ್ಲೂಕಿನ ಹಿಂದುಳಿದ ವರ್ಗಗಳ (ಬಿಸಿಎಂ) ವಿದ್ಯಾರ್ಥಿ ನಿಲಯಗಳಿಗೆ ಸಿದ್ಧಗಂಗಾ ಮಠದಿಂದ ಅಕ್ಕಿ ಸಾಲ ಪಡೆದ ಪ್ರಕರಣದಲ್ಲಿ ತುಮಕೂರು ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಗೀತಮ್ಮ ಅವರನ್ನು ಅಮಾನತು ಮಾಡಲಾಗಿದೆ.

ಕರ್ತವ್ಯ ಲೋಪದ ಆರೋಪದ ಮೇಲೆ ಕಲ್ಯಾಣಾಧಿಕಾರಿ ಗೀತಮ್ಮ ಅವರನ್ನು ಅಮಾನತು ಮಾಡಿ ಹಿಂದುಳಿದ ವರ್ಗಗಳ ಇಲಾಖೆ ಆಯುಕ್ತ ಕೆ.ಎ.ದಯಾನಂದ ಆದೇಶ ಹೊರಡಿಸಿದ್ದಾರೆ.
೨೦೧೩ ಅಕ್ಟೋಬರ್‌ನಿಂದ ೨೦೨೪ ಮಾರ್ಚ್ ವರೆಗೆ ಹಂಚಿಕೆಯಾಗಿದ್ದ ಅಕ್ಕಿ ಮತ್ತು ಗೋಧಿಯನ್ನು ಎತ್ತುವಳಿ ಮಾಡಿ ಹಾಸ್ಟೆಲ್‌ಗಳಿಗೆ ಸರಬರಾಜು ಮಾಡುವಲ್ಲಿ ಅಧಿಕಾರಿ ಲೋಪವೆಸಗಿದ್ದಾರೆ. ಸಿದ್ಧಗಂಗಾ ಮಠದಿಂದ ನಿಯಮ ಬಾಹಿರವಾಗಿ ಅಕ್ಕಿ ಸಾಲ ತಂದಿರುವುದು ಖಚಿತಪಟ್ಟಿದೆ ಎಂದು ಅಮಾನತು ಆದೇಶದಲ್ಲಿ ಹೇಳಲಾಗಿದೆ.

RELATED ARTICLES
- Advertisment -
Google search engine

Most Popular