Sunday, April 6, 2025
Google search engine

Homeದೇಶಈ ಬಾರಿ 14 ವಿದೇಶಿ ನಗರಗಳಲ್ಲೂ NEET-UG ಪರೀಕ್ಷಾ ಕೇಂದ್ರ ಸ್ಥಾಪನೆ

ಈ ಬಾರಿ 14 ವಿದೇಶಿ ನಗರಗಳಲ್ಲೂ NEET-UG ಪರೀಕ್ಷಾ ಕೇಂದ್ರ ಸ್ಥಾಪನೆ

ನವದೆಹಲಿ: ವೈದ್ಯಕೀಯ ಪ್ರವೇಶ ಪರೀಕ್ಷೆ NEET-UG ಅನ್ನು ಈ ಬಾರಿ 14 ವಿದೇಶಿ ನಗರಗಳಲ್ಲಿ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಮೇ 5 ರಂದು ಪರೀಕ್ಷೆ ನಡೆಸಲಾಗುವುದು ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಬುಧವಾರ ಪ್ರಕಟಿಸಿದೆ.

ನೀಟ್-ಯುಜಿ ಕುರಿತು ಈ ತಿಂಗಳ ಆರಂಭದಲ್ಲಿ ನೀಡಲಾದ ಬುಲೆಟಿನ್‌ನಲ್ಲಿ ಅಭ್ಯರ್ಥಿಗಳು ಭಾರತದ ಹೊರಗಿನ ಕೇಂದ್ರಗಳಲ್ಲೂ ಪರೀಕ್ಷೆ ಬರೆಯುವ ಬಗ್ಗೆ ಯಾವುದೇ ಉಲ್ಲೇಖ ಇರಲಿಲ್ಲ. ಈ ಸಂಬಂಧ ಅಭ್ಯರ್ಥಿಗಳಿಂದ ಮನವಿ ಸ್ವೀಕರಿಸಿದ ನಂತರ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಈ ಕ್ರಮ ಕೈಗೊಂಡಿದೆ.

“12 ದೇಶಗಳ 14 ವಿದೇಶಿ ನಗರಗಳಲ್ಲಿ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ” ಎಂದು ಎನ್‌ಟಿಎ ಹಿರಿಯ ನಿರ್ದೇಶಕಿ(ಪರೀಕ್ಷೆಗಳು) ಸಾಧನಾ ಪರಾಶರ್ ಅವರು ತಿಳಿಸಿದ್ದಾರೆ.

ಪರೀಕ್ಷೆ ನಡೆಸುವ 14 ವಿದೇಶಿ ನಗರಗಳೆಂದರೆ ದುಬೈ, ಅಬುಧಾಬಿ ಮತ್ತು ಶಾರ್ಜಾ(ಯುಎಇ); ಕುವೈತ್‌ನಲ್ಲಿ ಕುವೈತ್ ನಗರ; ಥೈಲ್ಯಾಂಡ್ನಲ್ಲಿ ಬ್ಯಾಂಕಾಕ್; ಶ್ರೀಲಂಕಾದಲ್ಲಿ ಕೊಲಂಬೊ; ಕತಾರ್‌ನಲ್ಲಿ ದೋಹಾ; ನೇಪಾಳದ ಕಠ್ಮಂಡು; ಮಲೇಷಿಯಾದ ಕೌಲಾಲಂಪುರ್; ನೈಜೀರಿಯಾದಲ್ಲಿ ಲಾಗೋಸ್; ಬಹ್ರೇನ್‌ನಲ್ಲಿ ಮನಮಾ; ಓಮನ್‌ನಲ್ಲಿ ಮಸ್ಕತ್; ಸೌದಿ ಅರೇಬಿಯಾದಲ್ಲಿ ರಿಯಾದ್; ಮತ್ತು ಸಿಂಗಾಪುರ.

ಭಾರತದಾದ್ಯಂತ 554 ಕೇಂದ್ರಗಳಲ್ಲಿ ನೀಟ್-ಯುಜಿ ಪರೀಕ್ಷೆ ನಡೆಯಲಿದೆ.

RELATED ARTICLES
- Advertisment -
Google search engine

Most Popular