Sunday, April 20, 2025
Google search engine

Homeಅಪರಾಧತೀರ್ಥಹಳ್ಳಿಯ ಟ್ರೇಡರ್ಸ್’ನಲ್ಲಿ ಕಳ್ಳತನ ಮಾಡಿ ಪರಾರಿಯಾಗುತ್ತಿದ್ದ ಆರೋಪಿಗಳ ಬಂಧನ

ತೀರ್ಥಹಳ್ಳಿಯ ಟ್ರೇಡರ್ಸ್’ನಲ್ಲಿ ಕಳ್ಳತನ ಮಾಡಿ ಪರಾರಿಯಾಗುತ್ತಿದ್ದ ಆರೋಪಿಗಳ ಬಂಧನ

ತೀರ್ಥಹಳ್ಳಿ: ಪಟ್ಟಣದ ಕುರುವಳ್ಳಿಯ ಟ್ರೇಡರ್ಸ್ ವೊಂದರಲ್ಲಿ 2.50 ಲಕ್ಷ ರೂ. ಹಣ ಕಳ್ಳತನ ಮಾಡಿ ಪರಾರಿಯಾಗಿದ್ದ ಆರೋಪಿಗಳನ್ನು ಕಾರು ಸಮೇತ ಶೃಂಗೇರಿಯಲ್ಲಿ ಬಂಧಿಸಲಾಗಿದೆ.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಮೂಲದ ಮಹಮ್ಮದ್ ಶಾದು(24), ಜೆಶಾನ್ (17), ಜಮ್ಮಿದ್ (23) ಬಂಧಿತ ಆರೋಪಿಗಳು.

ತೀರ್ಥಹಳ್ಳಿಯ ಕುರುವಳ್ಳಿಯಲ್ಲಿ ಟೇಬಲ್ ರಾಡ್ ಬಳಸಿ 2.5 ಸಾವಿರ ರೂ. ಕ್ಷಣ ಮಾತ್ರದಲ್ಲಿ ಕದ್ದು ಪರಾರಿಯಾದ ಕಳ್ಳರನ್ನು ಪೊಲೀಸರ ಮಿಂಚಿನ ಕಾರ್ಯಾಚರಣೆ ಮೂಲಕ ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸಲಾಯಿತು.

ಆರೋಪಿಗಳನ್ನು ತೀರ್ಥಹಳ್ಳಿಯ ಡಿವೈಎಸ್ ಪಿ ಗಜಾನನ ವಾಮನ ಸುತಾರ ಅವರ ಮಾರ್ಗದರ್ಶನದಲ್ಲಿ ಪೊಲೀಸ್ ದಫೆದಾರ್ ಪುನೀತ್, ದೀಪಕ್ ಗೌಡ ಮತ್ತು ತಂಡದವರು ಕೆಲವೇ ಗಂಟೆಗಳಲ್ಲಿ ಶೃಂಗೇರಿಯ ಬಳಿ ಬಂಧಿಸಿದ್ದು, ತೀರ್ಥಹಳ್ಳಿ ಪೊಲೀಸ್ ಇಲಾಖೆಯ ಮಿಂಚಿನ ಕಾರ್ಯಾಚರಣೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

RELATED ARTICLES
- Advertisment -
Google search engine

Most Popular