Monday, April 21, 2025
Google search engine

Homeರಾಜ್ಯನಿವೇಶನದ ಮಾರ್ಗಸೂಚಿ ದರ ಆಧಾರಿತ ಆಸ್ತಿ ತೆರಿಗೆ: ಬಿಬಿಎಂಪಿಯಿಂದ ಕರಡು ಅಧಿಸೂಚನೆ- ಆಕ್ಷೇಪಣೆಗೆ 15 ದಿನಗಳ...

ನಿವೇಶನದ ಮಾರ್ಗಸೂಚಿ ದರ ಆಧಾರಿತ ಆಸ್ತಿ ತೆರಿಗೆ: ಬಿಬಿಎಂಪಿಯಿಂದ ಕರಡು ಅಧಿಸೂಚನೆ- ಆಕ್ಷೇಪಣೆಗೆ 15 ದಿನಗಳ ಕಾಲಾವಕಾಶ

ಬೆಂಗಳೂರು: ನಿವೇಶನದ ಮಾರ್ಗಸೂಚಿ ದರ ಆಧಾರಿತ ಆಸ್ತಿ ತೆರಿಗೆ ನಿಗದಿ ಮಾಡಲು ಬಿಬಿಎಂಪಿ ನಿರ್ಧರಿಸಿದೆ. ನಿವೇಶನ, ಕಟ್ಟಡ, ವಾಣಿಜ್ಯ ಹಾಗೂ ಇತರೆ ಬಳಕೆಗೆ ಆಸ್ತಿ ತೆರಿಗೆ ಪ್ರಮಾಣವನ್ನು ನಿಗದಿ ಮಾಡಿ, ಹೊಸ ಕರಡು ಅಧಿಸೂಚನೆ ಹೊರಡಿಸಿದೆ. ಸಾರ್ವಜನಿಕರು ಆಕ್ಷೇಪಣೆ ಸಲ್ಲಿಸಲು 15 ದಿನಗಳ ಕಾಲಾವಕಾಶ ನೀಡಲಾಗಿದೆ.

ವಸತಿ ನಿವೇಶನ, ಭೂಮಿ ಮತ್ತು ವಸತಿ ಖಾಲಿ ಪ್ರದೇಶಗಳನ್ನು ಎರಡು ವರ್ಗಗಳಾಗಿ ವಿಂಗಡಿಸಲಾಗಿದೆ. ಅಪಾರ್ಟ್ ಮೆಂಟ್, ಫ್ಲ್ಯಾಂಟ್ ಸೇರಿದಂತೆ ಭೂಮಿ, ನಿವೇಶನಗಳನ್ನು ಬಾಡಿಗೆಗೆ ನೀಡಿದ್ದರೆ, ವರ್ಷಕ್ಕೆ ಪ್ರತಿ ಅಡಿಗೆ ಕರ್ನಾಟಕ ಸ್ಟ್ಯಾಂಪ್ ಕಾಯ್ದೆಯಲ್ಲಿ ನಮೂದಾಗಿರುವ ಮಾರ್ಗಸೂಚಿ ದರ ಶೇ. 0.2 ರಷ್ಟು ಆಸ್ತಿ ತೆರಿಗೆ ಪಾವತಿಸಬೇಕಿದೆ. ಸ್ವತ್ತು ಮಾಲೀಕರೇ ಉಪಯೋಗಿಸುತ್ತಿದ್ದರೆ ಮಾರ್ಗಸೂಚಿ ದರದ ಶೇ0.1 ರಷ್ಟು ತೆರಿಗೆ ಅನ್ವಯವಾಗಲಿದೆ. ಆಸ್ತಿ ಸಂಪೂರ್ಣ ಖಾಲಿ ಪ್ರದೇಶವಾಗಿದ್ದರೆ ಶೇ.0.25 ರಷ್ಟು ತೆರಿಗೆ ವಿಧಿಸಲಾಗುತ್ತಿದೆ.

ವಸತಿಯೇತರ ಭೂಮಿ, ನಿವೇಶನ ಮತ್ತು ಖಾಲಿ ನಿವೇಶನಗಳಿಗೆ ಕೂಡಾ ಎರಡು ವರ್ಗವಾಗಿಸಲಾಗಿದೆ. ನಿವೇಶನ ಬಾಡಿಗೆ ನೀಡಿದರೆ, ಪ್ರತಿ ಚದರ ಅಡಿಗೆ ಮಾರ್ಗಸೂಚಿ ದರದಲ್ಲಿ ಶೇ. 0.5 ರಷ್ಟು, ಸ್ವಂತ ಬಳಕೆಯಲ್ಲಿದ್ದರೆ ಶೇ. 0.25 ರಷ್ಟು, ಕಟ್ಟಡಕ್ಕೆ ಶೇ. 0.5 ರಷ್ಟು ತೆರಿಗೆ ನಿಗದಿ ಮಾಡಲಾಗಿದೆ. ನಾಗರಿಕರು ಆಕ್ಷೇಪಣೆ ಗಳಿದ್ದರೆ 15ದಿನಗಳೊಳಗೆ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಸಲ್ಲಿಸಬೇಕಿದೆ. spcommrev@bbmp.gov.in ಇ-ಮೇಲ್ ಕೂಡ ಮಾಡಬಹುದಾಗಿದೆ ಎಂದು ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಕರಡು ಅಧಿಸೂಚನೆಯಲ್ಲಿ ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular