ಮಂಡ್ಯ: SCP/TSP ಯೋಜನೆ ಹಣ ದುರ್ಬಳಕೆ ಖಂಡಿಸಿ ಕಾಂಗ್ರೆಸ್ ವಿರುದ್ಧ ಮಂಡ್ಯ ಜಿಲ್ಲಾ ಬಿಜೆಪಿ ಹಾಗೂ ಎಸ್ಸಿ ಮೋರ್ಚಾದ ವತಿಯಿಂದ ಪ್ರತಿಭಟನೆ ನಡೆಸಲಾಗಿದೆ.
ಮಂಡ್ಯ ಡಿಸಿ ಕಚೇರಿ ಬಳಿ ಜಮಾವಣೆಗೊಂಡ ಪ್ರತಿಭಟನಾಕಕಾರರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಇಂದ್ರೇಶ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗಿದ್ದು, ದಲಿತ ಯೋಜನೆಗಳ ಸುಮಾರು 11.114 ಕೋಟಿ ಹಣ ದುರ್ಬಳಕೆ ಆರೋಪ ಮಾಡಿದರು.
ಗ್ಯಾರಂಟಿ ಗಾಗಿ ದಲಿತರ ಹಣ ದುರ್ಬಳಕೆ ಮಾಡಿ ಅನ್ಯಾಯ ಮಾಡ್ತಿದೆ. ದಲಿತರ ಹಣ ನುಂಗಿ ನೀರು ಕುಡಿದು ಗ್ಯಾರಂಟಿ ಕೊಡ್ತಿದೆ. ತಕ್ಷಣವೇ ಕ್ಷಮೆಯಾಚನೆ ಕೇಳಬೇಕು. ತಮ್ಮ ರಾಜಕೀಯ ದುರುದ್ದುದೇಶಕ್ಕಾಗಿ ದಲಿತರಿಗೆ ಅನ್ಯಾಯ ಮಾಡೋದು ಸರಿಯಲ್ಲ. ತಕ್ಷಣವೇ SCP/TSP ಯೋಜನೆ ಹಣ ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡ ಮುನಿರಾಜು, ಲಕ್ಷ್ಮಿಅಶ್ವೀನ್ ಗೌಡ, ಅಶೋಕ್ ಜಯರಾಂ, ಸಿದ್ದರಾಮಯ್ಯ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಭಾಗಿಯಾಗಿದ್ದರು.