Sunday, April 20, 2025
Google search engine

Homeಸ್ಥಳೀಯಮೈಸೂರಿನ ನಲಪಾಡ್ ಹೋಟೆಲ್ ಮೆಟ್ಟಿಲುಗಳಿಗೆ ಕನ್ನಡ ಬಾವುಟದ ಬಣ್ಣ; ಕನ್ನಡ ಸಂಘಟನೆಗಳ ಎಚ್ಚರಿಕೆ ಬಳಿಕ ಬಣ್ಣ...

ಮೈಸೂರಿನ ನಲಪಾಡ್ ಹೋಟೆಲ್ ಮೆಟ್ಟಿಲುಗಳಿಗೆ ಕನ್ನಡ ಬಾವುಟದ ಬಣ್ಣ; ಕನ್ನಡ ಸಂಘಟನೆಗಳ ಎಚ್ಚರಿಕೆ ಬಳಿಕ ಬಣ್ಣ ಬದಲಾವಣೆ

ಮೈಸೂರು: ಮೈಸೂರಿನ ಹೈವೇ ಸರ್ಕಲ್‌ ನಲ್ಲಿರುವ ನಲಪಾಡ್ ಹೋಟೆಲ್’ನ ಮೆಟ್ಟಿಲುಗಳಿಗೆ ಕನ್ನಡ ಬಾವುಟದ ಬಣ್ಣ ಹಚ್ಚಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಕನ್ನಡ ಸಂಘಟನೆಗಳು ಹೋಟೆಲ್ ಮಾಲೀಕರ ನಡೆಗೆ ಖಂಡನೆ ವ್ಯಕ್ತಪಡಿಸಿದ್ದಾರೆ.

ಮೈಸೂರಿನ ಹೈವೇ ವೃತ್ತದಲ್ಲಿರುವ ನಲಪಾಡ್ ಹೋಟೆಲ್ ಮೆಟ್ಟಿಲುಗಳಿಗೆ ಕನ್ನಡ ಬಾವುಟದ ಬಣ್ಣ ಹಚ್ಚಲಾಗಿದೆ. ಹೀಗಾಗಿ ಕನ್ನಡ ಪರ ಸಂಘಟನೆಗಳು ಹೋಟೆಲ್ ಮುಂದೆ ಜಮಾಯಿಸಿ ಆಕ್ರೋಶ ಹೊರ ಹಾಕಿವೆ. ಹಾಗೂ ಕೂಡಲೇ ಬೇರೆ ಬಣ್ಣ ಹಚ್ಚುವಂತೆ ತಾಕೀತು ಮಾಡಿವೆ. ಇಲ್ಲವಾದರೆ ಹೋರಾಟದ ಎಚ್ಚರಿಕೆ ನೀಡಿದ್ದಾರೆ.

ನಲಪಾಡ್ ಹೋಟೆಲ್ ಮಾಲೀಕನಿಗೆ ಕ್ಲಾಸ್ ತೆಗೆದುಕೊಂಡು ಸ್ಥಳದಲ್ಲಿಯೇ ಹೊಡೆದಿದ್ದ ಬಣ್ಣವನ್ನು ಬದಲಾಯಿಸಲಾಯಿತು. ನಂತರ ಹೋಟೆಲ್ ಮಾಲೀಕ ರಿಯಾಜ್ ಕ್ಷಮಾಪಣೆ ಕೋರಿ ಹೋರಾಟಗಾರರ ಸಮಕ್ಷಮದಲ್ಲಿಯೇ ಬೇರೆ ಬಣ್ಣ ಬದಲಾಯಿಸಲಾಯಿತು.

RELATED ARTICLES
- Advertisment -
Google search engine

Most Popular