Monday, April 21, 2025
Google search engine

Homeರಾಜ್ಯಮತ್ತೆ ಹಳ್ಳಿಕಾರ್ ಒಡೆಯ ವಿವಾದ ತಾರಕ್ಕಕ್ಕೇ: ವರ್ತೂರು ಸಂತೋಷ್ ವಿರುದ್ಧ ಕಾನೂನು ಸಮರಕ್ಕೆ ನಿರ್ಧರಿಸಿದ ಹಳ್ಳಿಕಾರ್...

ಮತ್ತೆ ಹಳ್ಳಿಕಾರ್ ಒಡೆಯ ವಿವಾದ ತಾರಕ್ಕಕ್ಕೇ: ವರ್ತೂರು ಸಂತೋಷ್ ವಿರುದ್ಧ ಕಾನೂನು ಸಮರಕ್ಕೆ ನಿರ್ಧರಿಸಿದ ಹಳ್ಳಿಕಾರ್ ಸಂರಕ್ಷಕರು

ಮಂಡ್ಯ: ಮತ್ತೆ ಹಳ್ಳಿಕಾರ್ ಒಡೆಯ ವಿವಾದ ತಾರಕಕ್ಕೇರಿದೆ. ವರ್ತೂರು ಸಂತೋಷ್ ವಿರುದ್ಧ ಹಳ್ಳಿಕಾರ್ ಸಂರಕ್ಷಕರು ಸಿಡಿದೆದ್ದಿದ್ದು, ಸಂತೋಷ್ ವಿರುದ್ಧ ಕಾನೂನು ಸಮರಕ್ಕೆ ನಿರ್ಧಾರ ಮಾಡಲಾಗಿದೆ.

ವರ್ತೂರು ಸಂತೋಷ್ ಬಿಗ್ ಬಾಸ್ ಮನೆಯಲ್ಲಿದ್ದಾಗ ಹಳ್ಳಿಕಾರ್ ಒಡೆಯ‌ ಬಿರುದು ವಿವಾದ ಸೃಷ್ಟಿಯಾಗಿದ್ದು, ಹಿಂದೆ ವರ್ತೂರು ಬೆಂಬಲಿಗರಿಗೆ ತಿಳುವಳಿಕೆ ಹೇಳಲು ಹಳ್ಳಿಕಾರ್ ತಳಿ ಸಂರಕ್ಷಕರು ಚರ್ಚಾಗೋಷ್ಠಿ ಏರ್ಪಡಿಸಿದ್ದರು.

ಅಂದು ವರ್ತೂರು ಸಂತೋಷ್ ಬೆಂಬಲಿಗರು ಹಾಗೂ ತಲಾತಲಾಂತರಿಂದ ಹಳ್ಳಿಕಾರ್ ತಳಿ ಸಂರಕ್ಷಕರ ನಡುವೆ ಜಟಾಪಟಿ ನಡೆದಿತ್ತು.

ವಾಗ್ವಾದದಿಂದ ಕಾರ್ಯಕ್ರಮದ ಅರ್ಧದಲ್ಲೆ ಸಂತೋಷ್ ಬೆಂಬಲಿಗರನ್ನ ಪೊಲೀಸರು ಕಳುಹಿಸಿದ್ದರು.

ಇದೀಗ ಬಿಗ್ ಬಾಸ್ ಮನೆಯಿಂದ ಹೊರ ಬರ್ತಿದ್ದಂತೆ ವಿರೋಧಿಗಳಿಗೆ ಸಂತೋಷ್ ಟಾಂಗ್ ನೀಡಿದ್ದು, ಏಕವಚನದಲ್ಲಿ ಹಿರಿಯ ಹಳ್ಳಿಕಾರ್ ಸಂರಕ್ಷಕರ ವಿರುದ್ಧ ಹರಿಹಾಯ್ದಿದ್ದರು.

ವರ್ತೂರ್ ಮಾತಿಗೆ ಹಳ್ಳಿಕಾರ್ ಸಂರಕ್ಷಕರು ಮತ್ತೆ ಸಿಡಿದೆದ್ದಿದ್ದು, ಹಳ್ಳಿಕಾರ್ ಒಡೆಯ ಎಂದು ಕರೆಸಿಕೊಳ್ತಿರೋದು, ಬಿಂಬಿಸಿಕೊಳ್ತಿರುವುದು ಸರಿಯಲ್ಲ. ಇದು ಹಳ್ಳಿಕಾರ್ ಜನಾಂಗಕ್ಕೆ ಅಪಮಾನವಾಗಿದೆ. ತಲಾತಲಾಂತರಿಂದ ಹಳ್ಳಿಕಾರ್ ಸಂರಕ್ಷಣೆ ಮಾಡ್ತಿರುವ ರೈತರಿಗೂ ಭಾವನೆಗೂ ಧಕ್ಕೆ, ಅವಮಾನವಾಗಿದೆ. ಗೂಗಲ್ ನಲ್ಲಿಯೂ ಛೇರ್ ಮೇನ್ ಆಫ್ ಆಲ್ ಇಂಡಿಯಾ ಹಳ್ಳಿಕಾರ್ ಕನ್ಜರ್ವೇಷನ್ ಎಂದು ರಾಂಗ್ ಮೆಸೇಜ್ ನೀಡಿದ್ದಾರೆ. ಇದರಿಂದ ಮುಂದಿನ ಪೀಳಿಗೆಗೆ ತಪ್ಪು ಸಂದೇಶ ಹೋಗುತ್ತೆ. ವರ್ತೂರ್ ಸಂತೋಷನಿಂದಲೇ ಹಳ್ಳಿಕಾರ್ ತಳಿ ಹುಟ್ಟಿತು ಎಂದು ಬಿಂಬಿತವಾಗಬಹುದು. ಆದ್ದರಿಂದ ಕಾನೂನಾತ್ಮಕವಾಗಿ ಹೋರಾಟ ಮಾಡ್ತೇನೆ. ಎಲ್ಲಾ ದಾಖಲಾತಿಗಳನ್ನ ಸಂಗ್ರಹಿಸುತ್ತಿದ್ದು ಶೀಘ್ರ ಕಾನೂನು ಸಮರ ಸಾರುತ್ತೇವೆ. ಗೂಗಲ್ ವಿರುದ್ಧ ಕಾನೂನು ಹೋರಾಡ ಮಾಡ್ತೇವೆ ಎಂದು ಹಳ್ಳಿಕಾರ್ ಸಂರಕ್ಷಕ ರವಿಪಟೇಲ್ ಸವಾಲು ಹಾಕಿದ್ದಾರೆ.

RELATED ARTICLES
- Advertisment -
Google search engine

Most Popular