ಮಂಗಳೂರು (ದಕ್ಷಿಣ ಕನ್ನಡ): ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿರುವ ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರ ನಿವಾಸಕ್ಕೆ ಹಾಲಿ ಸ್ಪೀಕರ್ ಯು.ಟಿ. ಖಾದರ್ ಅವರು ಸೌಹಾರ್ದ ಭೇಟಿ ನೀಡಿದರು.
ಕಾರ್ಯ ನಿಮಿತ್ತ ಸಾಗರಕ್ಕೆ ತೆರಳಿದ್ದ ಯು.ಟಿ.ಖಾದರ್ ಅವರು ಕಾಗೋಡು ತಿಮ್ಮಪ್ಪ ಅವರ ಮನೆಗೆ ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಿದರು. ಕೆಲಕಾಲ ಪ್ರಸಕ್ತ ಸನ್ನಿವೇಶದ ಬಗ್ಗೆ ಚರ್ಚೆ ನಡೆಸಿದರು.
ಹಿರಿಯ ಕಾಂಗ್ರೆಸ್ ನಾಯಕರೂ ಆಗಿರುವ ಕಾಗೋಡು ತಿಮ್ಮಪ್ಪ ಅವರು ಖಾದರ್ ಅವರನ್ನು ಅಶೀರ್ವದಿಸಿ ಬೀಳ್ಕೊಟ್ಟರು.
