Saturday, April 19, 2025
Google search engine

Homeಕ್ರೀಡೆಅಂತರಾಷ್ಟ್ರೀಯ ಮಾಸ್ಟರ್ ಅಥ್ಲೆಟಿಕ್ ಚಾಂಪಿಯನ್ಶಿಪ್: ಶಿವನಂಜಶೆಟ್ಟಿ ಲಾಂಗ್ ಜಂಪ್ ನಲ್ಲಿ ಪ್ರಥಮ ಸ್ಥಾನ...

ಅಂತರಾಷ್ಟ್ರೀಯ ಮಾಸ್ಟರ್ ಅಥ್ಲೆಟಿಕ್ ಚಾಂಪಿಯನ್ಶಿಪ್: ಶಿವನಂಜಶೆಟ್ಟಿ ಲಾಂಗ್ ಜಂಪ್ ನಲ್ಲಿ ಪ್ರಥಮ ಸ್ಥಾನ , ಜಾವೆಲಿನ್ ತ್ರೋ ನಲ್ಲಿ ಮೂರನೇ ಸ್ಥಾನ

ವರದಿ : ವಿನಯ್ ದೊಡ್ಡಕೊಪ್ಪಲು

ದಿನಾಂಕ 22:02:2024 ರಿಂದ 25:02:25 ರವರೆಗೆ ಥೈಲ್ಯಾಂಡ್ ರಾಷ್ಟ್ರದಲ್ಲಿ ನಡೆದ ಅಂತರಾಷ್ಟ್ರೀಯ ಮಾಸ್ಟರ್ ಅಥ್ಲೆಟಿಕ್ ಚಾಂಪಿಯನ್ಶಿಪ್ ನಲ್ಲಿ ಶ್ರೀ ಶಿವನಂಜಶೆಟ್ಟಿ ಸರ್ಕಲ್ ಇನ್ಸ್ಪೆಕ್ಟರ್ ರವರು ಲಾಂಗ್ ಜಂಪ್ ನಲ್ಲಿ ಪ್ರಥಮ ಸ್ಥಾನ ಗಳಿಸಿ ಚಿನ್ನದ ಪದಕ ಗೆದ್ದು ಹಾಗೂ ಜಾವೆಲಿನ್ ತ್ರೋ ನಲ್ಲಿ ಮೂರನೇ ಸ್ಥಾನ ಪಡೆದು ಕಂಚಿನ ಪದಕ ಕೊರಳಿಗೆರಿಸಿಕೊಂಡು ಭಾರತ ದೇಶಕ್ಕೆ ಹಾಗೂ ಕರ್ನಾಟಕ ರಾಜ್ಯಕ್ಕೆ ಅದರಲ್ಲೂ ಹಾಸನ , ಮೈಸೂರು ಹಾಗೂ ತವರೂರಾದ ಚಾಮರಾಜನಗರ ಜಿಲ್ಲೆಗೆ ಗೌರವ ತಂದುಕೊಟ್ಟಿದ್ದಾರೆ .

ಹಾಗೆಯೇ ಕಳೆದ ವರ್ಷ 2023 ನೇ ಸಾಲಿನ ತುಂಬಾ ಕ್ಲಿಷ್ಟಕರವಾಗಿದ್ದ ಇಲಾಖೆಗೆ ಹಾಗೂ ಸರ್ಕಾರಕ್ಕೆ ತಲೆ ನೋವಾಗಿದ್ದ ಸೆನ್ಸಿಟಿವ್ ಮರ್ಡರ್ ಕೇಸ್ ಪತ್ತೆ ಮಾಡಿ ಪೋಲಿಸ್ ಇಲಾಖೆಯಲ್ಲಿನ ಪೇದೆಯನ್ನು ಒಳಗೊಂಡಂತೆ ಆರೋಪಿಗಳನ್ನು ಎಡೆಮುರಿ ಕಟ್ಟಿ ಜೈಲಿಗೆ ಕಳಿಸುವಲ್ಲಿ ಸಫಲರಾಗಿದ್ದು, ಈ ಕರ್ತವ್ಯ ನಿಷ್ಠೆ ಗುರುತಿಸಿ ಟಿವಿ 9 ವತಿಯಿಂದ ಕೊಡುವ ಟಿವಿ 9 ಸೆಲ್ಯೂಟ್ ಪ್ರಶಸ್ತಿ ಗೆ ಬಾಜನರಾಗಿದ್ದು ಪೋಲಿಸ್ ಇಲಾಖೆಗೆ ಹೆಮ್ಮೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಹಾಗೂ ನಂಜನಗೂಡು ಗ್ರಾಮಾಂತರದ ಠಾಣೆಯಲ್ಲಿದ್ದಾಗ ಮೂರು ದೊಡ್ಡ ಡಕಾಯಿತಿ ಪ್ರಕರಣಗಳನ್ನು ಭೇದಿಸುವಲ್ಲಿ ಸಫಲರಾಗಿ ಅಂತರ್ ರಾಜ್ಯ ಅಂದರೆ ಕೇರಳ ಮತ್ತು ತಮಿಳುನಾಡು ಡಕಾಯಿತರುಗಳನ್ನು ಬಂಧಿಸಿ ಇಬ್ಬರು ಫ್ಯಾಕ್ಟರಿ ಮಾಲೀಕರ ಪ್ರಾಣವನ್ನು ಉಳಿಸಿ 21 ಲಕ್ಷ ಹಣವನ್ನ ವಶಪಡಿಸಿಕೊಂಡು ಮಾಲಿಕರಿಗೆ ಹಿಂದಿರುಗಿಸುವಲ್ಲಿ ಯಶಸ್ವಿಯಾಗಿದ್ದರು.

ಈ ವರ್ಷ ಕೆಲಸದ ಒತ್ತಡದ ನಡುವೆಯೂ ಬಿಡುವಿನ ವೇಳೆಯಲ್ಲಿ ಪ್ರಾಕ್ಟೀಸ್ ಮಾಡಿ ಲಾಂಗ್ ಜಂಪ್ ನಲ್ಲಿ ದೇಶಕ್ಕೆ ಚಿನ್ನ ಗೆದ್ದು ಕೊಡುವಲ್ಲಿ ಅಮೋಘ ಸಾಧನ ಮಾಡಿದ್ದಾರೆ. ಅಂತರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ಪೊಲೀಸ್ ಕರ್ತವ್ಯದ ಒತ್ತಡದಲ್ಲು ಈ ರೀತಿಯ ಸಾಧನೆಗಯುತ್ತಿರುವ ಶ್ರೀ ಶಿವನಂಜ ಶೆಟ್ಟಿ ರವರಿಗೆ ಹೃತ್ಪೂರ್ವಕ ಧನ್ಯವಾದಗಳು ಹಾಗೂ ಶುಭಾಶಯಗಳು.

RELATED ARTICLES
- Advertisment -
Google search engine

Most Popular