ವರದಿ: ಎಡತೊರೆ ಮಹೇಶ್
ಹೆಚ್.ಡಿ ಕೋಟೆ: ಹೆಚ್.ಡಿ .ಕೋಟೆಯ ಶ್ರೀ ಆದಿಚುಂಚನಗಿರಿ ಶಾಲೆಯ ಆವರಣದಲ್ಲಿ ಮಾನ್ಯ ತಾಲ್ಲೂಕು ಆರೋಗ್ಯಾಧಿಕಾರಿಗಳಾದ ಡಾ. ಟಿ.ರವಿಕುಮಾರ್ ಅಧ್ಯಕ್ಷತೆಯಲ್ಲಿ ರಾಷ್ಟ್ರೀಯ ಜಂತು ಹುಳು ನಿವಾರಣಾ ಕಾರ್ಯ ಕ್ರಮವನ್ನು ನಡೆಸಲಾಯಿತು.
ಈ ಕಾರ್ಯ ಕ್ರಮ ಉದ್ಘಾಟಿಸಿ ಮಾತನಾಡಿದ ತಾಲ್ಲೂಕು ಆರೋಗ್ಯಾಧಿಕಾರಿಗಳು, ರಾಷ್ಟ್ರೀಯ ಜಂತುಹುಳು ನಿವಾರಣಾ ದಿನದಲ್ಲಿ ಮೊದಲ ಹಂತವಾಗಿ ಫೆಬ್ರವರಿ 2024( ಪದವಿಪೂರ್ವ ಕಾಲೇಜುಗಳಿಗೆ), ಎರಡನೇ ಹಂತ, 27 ಫೆಬ್ರವರಿ 2024 ( 6-19 ವರ್ಷದ ಮಕ್ಕಳಿಗೆ ಶಾಲೆ ಮತ್ತು ಕಾಲೇಜುಗಳಲ್ಲಿ), ಮೂರನೇ ಹಂತ 8:ಮಾರ್ಚ್ 2024 (1ರಿಂದ 5 ವರ್ಷದ ಮಕ್ಕಳು ಮತ್ತು ಶಾಲೆಯಿಂದ ಹೊರಗುಳಿದ ಮಕ್ಕಳಿಗೆ ಅಂಗನವಾಡಿ ಕೇಂದ್ರಗಳಲ್ಲಿ) ಹಾಗೂ 28 ಫೆಬ್ರವರಿ 2024 ಮತ್ತು 08 ಮಾರ್ಚ್ 2024 ಮ್ಯಾಪ್ ಆಫ್ ಡೇ ಆಗಿ ಕಾರ್ಯ ಕ್ರಮವನ್ನು ಮಾಡುತ್ತಿವೆ ಎಂದರು.

ಹೆಚ್.ಡಿ ಕೋಟೆ ತಾಲ್ಲೂಕಿನಲ್ಲಿ ಒಟ್ಟು 16 ಪದವಿ ಪೂರ್ವ ಕಾಲೇಜುಗಳಲ್ಲಿ, ಒಟ್ಟು 3487ಮಕ್ಕಳುಗಳಿದ್ದು, ಒಟ್ಟು 257 ಸರ್ಕಾರಿ ಶಾಲೆಗಳ ಲ್ಲಿ 23088 ಮಕ್ಕಳು, ಒಟ್ಟು 57 ಖಾಸಗಿ ಶಾಲೆಗಳಲ್ಲಿ 8415 ಮಕ್ಕಳುಗಳಿದ್ದು , ಒಟ್ಟು ನಮ್ಮ ತಾಲೂಕಿನಲ್ಲಿ 314 ಶಾಲೆಗಳಲ್ಲಿ 31,503 ಮಕ್ಕಳ ಇರುತ್ತವೆ. ಒಟ್ಟು 374 ಅಂಗನವಾಡಿಗಳಲ್ಲಿ 10.637 ಮಕ್ಕಳುಗಳಿದ್ದು ,ಕಾಲೇಜ್ , ಶಾಲೆ ಮತ್ತು ಅಂಗನವಾಡಿಯ 1ರಿಂದ 19ವರ್ಷದ ಎಲ್ಲಾ ಮಕ್ಕಳಿಗೂ ವರ್ಷಕ್ಕೆ 2ಬಾರಿ ಅಲ್ಬೆಂಡಜೋಲ್ 400mg ಮಾತ್ರೆಯನ್ನು ನೀಡುತ್ತಿದ್ದೇವೆ ಎಂದು ಮಾಹಿತಿ ನೀಡಿದರು.
ಈ ಮಾತ್ರೆಯನ್ನು ಮಕ್ಕಳು ಚೆನ್ನಾಗಿ ಅಗಿದು ಜಿಗಿದು ನುಂಗಬೇಕು. ಮಾತ್ರೆ ನುಂಗುವುದರಿಂದ ಜಂತುಗಳನ್ನು ನಿವಾರಣೆ ಮಾಡಬಹುದು , ಜಂತುಹುಳು ವಿನಲ್ಲಿ ರೌಂಡ್ ವರ್ಮ್,ಟೈಪ್ ವರ್ಮ್, ಉಕ್ಕು ವರ್ಮ, ಈ ರೀತಿ ಜಂತು ಹುಳುಗಳು ಇವೆ.ಇವು ಮಣಿನಲ್ಲಿ ಇರುತ್ತವೆ,ಯಾರು ಬಯಲು ಮಲವಿಸರ್ಜನೆ ಮಾಡಬಾರದು, ಹಾಗೂ ಬರಿಗಾಲಿನಲ್ಲಿ ನಡೆಯಬಾರದು , ಹೊರಗಡೆಯಿಂದ ಬಂದ ನಂತರ ಚೆನ್ನಾಗಿ ಸೋಪಿನಿಂದ ಕೈ ಕಾಲುಗಳ ನ್ನೂ ತೊಳೆಯಬೇಕು. ಹಾಗೂ ಹಣ್ಣು ಮತ್ತು ತರಕಾರಿಗಳನ್ನು ತಿನ್ನುವಾಗ ಚನ್ನಾಗಿ ತೊಳೆದು ತಿನ್ನಬೇಕು ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳು ಮಾತನಾಡಿ, ಹೆಚ್ .ಡಿ. ಕೋಟೆ ತಾಲೂಕಿನಲ್ಲಿ ಪ್ರತಿಸಲ ಎಲ್ಲಾ ಮಕ್ಕಳಿಗೂ ಉಚಿತವಾಗಿ ಜಂತುಹುಳು ನಿವಾರಣಾ ಮಾತ್ರೆಯನ್ನು ನೀಡುತ್ತಿದ್ದೇವೆ ಆದುದರಿಂದ ಎಲ್ಲ ಮಕ್ಕಳು ತಪ್ಪದೇ ತೆಗೆದುಕೊಳ್ಳಬೇಕು ಎಂದು ತಿಳಿಸಿದರು.
ಈ ಕಾರ್ಯ ಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಬೈರೇಗೌಡರು, ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ನಂದಿನಿ, ಆರೋಗ್ಯ ಇಲಾಖೆ ಸಿಬ್ಬಂದಿ ವರ್ಗದವರಾದ ನಾಗೇಂದ್ರ, ಸರಳ, ರವಿರಾಜ್, ಅಶೋಕ್ ಅರಲಪ್ಪ, ಮಹೇಶ್, ಬ್ರಿಜೆಟ್, ಕಾಲೇಜಿನ ಉಪನ್ಯಾಸಕರಾದ ಶ್ರೀನಿವಾಸ್, ಸತೀಶ್, ಸೋಮಶೇಖರ್ ,ರಾಜು ,ಅನಿಲ್ ,ಲೋಕೇಶ್, ಕಾಲೇಜಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಸೇರಿದಂತೆ ಇನ್ನಿತರರು ಹಾಜರಿದ್ದರು.