ಧಾರವಾಡ : ಮತದಾನ ನಮ್ಮ ಸಾಂವಿಧಾನಿಕ ಹಕ್ಕು. ಪ್ರತಿಯೊಬ್ಬರೂ ತಪ್ಪದೇ ಮತದಾನ ಮಾಡುವ ಮೂಲಕ ತಮ್ಮ ಹಕ್ಕನ್ನು ಚಲಾಯಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಬಸವರಾಜ ಹೆಗ್ಗಾನಾಯಕ್ ಹೇಳಿದರು. ಜಿಲ್ಲಾ ಸ್ವೀಪ್ ಸಮಿತಿ, ಅಂಜುಮನ್ ಪದವಿ ಕಾಲೇಜು ಚುನಾವಣಾ ಸಾಕ್ಷರತಾ ಕ್ಲಬ್, ಸನ್ನಿಧಿ ಮಹಿಳಾ ಮಂಡಳಿ, ರೈನ್ಸ್ ಕ್ಲಬ್ ಧಾರವಾಡ, ಗ್ಯಾಲಕ್ಸಿ ಮತ್ತು ಎಂ. ಎಂ.ಜೋಶಿ ನೇತ್ರ ಸಂಸ್ಥೆ ಜಂಟಿ ಭವನದಲ್ಲಿ ಉಚಿತ ನೇತ್ರ ತಪಾಸಣೆ ಕಾರ್ಯಕ್ರಮದಲ್ಲಿ ಮತದಾರರ ಜಾಗೃತಿ ಹಾಗೂ ಮತದಾನದ ಮಹತ್ವದ ಕುರಿತು ಜಾಗೃತಿ ಮೂಡಿಸಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಗರಿಕರು ಪ್ರಭುಗಳಾಗಿದ್ದು, ಸರಿಯಾದ ವ್ಯಕ್ತಿಗೆ ಸಕ್ರಿಯವಾಗಿ ಮತ ಚಲಾಯಿಸುವ ಮೂಲಕ ದೇಶದ ಅಭಿವೃದ್ಧಿಯ ಭಾಗವಾಗಬೇಕೆಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ನಂದಾ ಗುಳೇದಗುಡ್ಡ, ಡಾ.ಎಸ್.ವೈ.ಸರಗಿರೋ, ಕೈರುದ್ದೀನ್ ಶೇಖ್, ಅಬ್ದುಲ್ ಅಜಿತ್ ಬಡಬಡೆ, ಡಾ.ಮುಕಾಂತರ್, ಡಾ.ನಾಗರಾಜ ಗುದಗಿನ, ಡಾ.ಎಸ್.ವೈ.ಶೇಖ್, ಗಿರೀಶ್ ಸಾಳುಂಕೆ, ಸನ್ನಿಧಿ ಮಹಿಳಾ ಮಂಡಳಿ ಸದಸ್ಯರು, ಲಯನ್ಸ್ ಕ್ಲಬ್ ಧಾರವಾಡ ಗ್ಯಾಲಕ್ಸಿ ಸದಸ್ಯರು, ಲಯನ್ಸ್ ಕ್ಲಬ್ ಧಾರವಾಡ ಗ್ಯಾಲಕ್ಸಿ ಸದಸ್ಯರು, ಅಂಜುಮಾನ್ ಡಿಗ್ರೆ. ಮತ್ತಿತರರು ಭಾಗವಹಿಸಿದ್ದರು.