ಅಬುದಾಬಿ : ಡಬ್ಲ್ಯೂಟಿಒ ವ್ಯಾಪಾರ ಹಾಗೂ ಮಾರುಕಟ್ಟೆ ಉಸ್ತುವಾರಿ ಯುರೋಪಿಯನ್ ಪಾರ್ಲಿಮೆಂಟ್ರಿನ್ ಮುಖ್ಯಸ್ಥ ಹೆಲ್ಮೆಟ್ ಕಾಲ್ಸ್ ಅವರ ಜೊತೆ ಭಾರತದ ನಿಯೋಗ ಸಭೆ ನಡೆಸಿ ಭಾರತದ ಕೃಷಿ ಸಮಸ್ಯೆಗಳು, ರೈತರ ಆತ್ಮಹತ್ಯೆಗಳು, ಕೃಷಿ ಉತ್ಪನ್ನಗಳ ಆಮದು ನೀತಿಯಿಂದ ಉದ್ಭವಿಸಿರುವ ಸಮಸ್ಯೆಗಳ ಬಗ್ಗೆ ವಿವರಿಸಿ ಡಬ್ಲ್ಯೂಟಿ ಓ ಒಡಂಬಡಿಕೆ ರದ್ದುಗೊಳಿಸುವಂತೆ, ಕೃಷಿ ಬಿಕ್ಕಟ್ಟಿನ ಬಗ್ಗೆ ಹೆಚ್ಚು ಅಧ್ಯಯನ ನಡೆಸಿ ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ ಒತ್ತಾಯ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಸಂಘಟನೆಯ ಕುರುಬೂರು ಶಾಂತಕುಮಾರ್, ಕೆ. ವಿ. ಬಿಜು, ರಂಜು ಸೇನಾಗುಪ್ತ, ಗೋವಾದ ಆಲ್ ಫ್ರೆಂಡ್ಸ್, ಇಂಡೋನೇಷಿಯಾ, ಬಾಂಗ್ಲಾ, ಸ್ಪೇನ್ ಪ್ರತಿನಿಧಿಗಳು ಭಾರತದ ನಿಯೋಗದ ಜತೆ ಇದ್ದರು.