ಬೆಂಗಳೂರು : ಮೈಸೂರಿನಲ್ಲಿರುವ ಚಾಮರಾಜೇಂದ್ರ ಮೃಗಾಲಯವನ್ನು ಹೊರವಲಯಕ್ಕೆ ಸ್ಥಳಾಂತರಿಸಿ ಪ್ರವಾಸೋದ್ಯಮಕ್ಕೆ ಹೆಚ್ಚು ಪ್ರೋತ್ಸಾಹ ನೀಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ ವಿಧಾನ ಪರಿಷತ್ ಕಲಾಪದಲ್ಲಿ ಸರ್ಕಾರವನ್ನು ಒತ್ತಾಯಿಸಿದರು.
ಸಾಂಸ್ಕೃತಿಕ ನಗರಿ ಮೈಸೂರಿಗೆ ದೇಶವಿದೇಶಗಳಿಂದ ಪ್ರವಾಸಿಗರು ಹೆಚ್ಚಾಗಿ ಬರುವುದರಿಂದ ಮೈಸೂರಿನ ಹೊರವಲಯಕ್ಕೆ ಮೃಗಾಲಯವನ್ನು ಸ್ಥಳಾಂತರಿಸಿ ಪ್ರವಾಸಿಗರಿಗೆ ಅನುಕೂಲಮಾಡಿಕೊಡಬೇಕು. ಮೈಸೂರಿನಲ್ಲಿ ಒಂದೇ ಒಂದು ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿಲ್ಲದಿರುವುದರಿಂದ ಬಡವರ ಮಕ್ಕಳಿಗೆ ಅನಾನುಕೂಲವಾಗಿದೆ ಕಾಲೇಜನ್ನು ಮಂಜೂರುಮಾಡಬೇಕು. ವಿಮಾನ ನಿಲ್ದಾಣದ ಬಳಿ ಇರುವ ಮಂಡಕಳ್ಳಿ ಕೆರೆಗೆ ವಿದೇಶಗಳಿಂದ ಪಕ್ಷಿಗಳು ಬರುತ್ತಿದ್ದು, ಈ ಕೆರೆಯನ್ನು ಅಭಿವೃದ್ಧಿಪಡಿಸಬೇಕು. ಮೈಸೂರಿನ ಅಭಿವೃದ್ಧಿಗೆ ಮುಂದಿನ ಬಜೆಟ್‌ನಲ್ಲಿ ಹೆಚ್ಚಿನ ಅನುದಾನವನ್ನು ಸರ್ಕಾರ ನೀಡಬೇಕು ಎಂದ ಅವರು, ಚಾಮರಾಜನಗರ ಜಿಲ್ಲೆಯಿಂದ ಸಾವಿರಾರು ಜನ ಬೆಂಗಳೂರು ಪಟ್ಟಣಗಳ ಕಡೆ ವಲಸೆ ಹೋಗುತ್ತಿದ್ದಾರೆ.
ಚಾಮರಾಜನಗರದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಿ ಸ್ಥಳೀಯರಿಗೆ ಉದ್ಯೋಗ ನೀಡಲು ಕ್ರಮಕೈಗೊಳ್ಳಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ ಅವರು, ದೇಶ ಎಷ್ಟೇ ಅಭಿವೃದ್ಧಿ ಹೊಂದಿದರೂ ಸಹ ಅನ್ನವನ್ನು ರೈತನೇ ಬೆಳೆಯಬೇಕು. ರೈತರಿಗೆ ಸರ್ಕಾರ ಏನು ಮಾಡಿಕೊಟ್ಟಿದೆ? ಶಾಲಾಮಕ್ಕಳಿಗೆ ಬಸ್ಸಿಲ್ಲ ಗ್ರಾಮೀಣ ಶಾಲೆಗಳಿಗೆ ಕರೆಂಟಿಲ್ಲ ಎಂದು ಪತ್ರಿಕೆಗಳಲ್ಲಿ ಬಂದಿದೆ. ರಾಜ್ಯದಲ್ಲಿ ಪೊಲೀಸರ ಕೊರತೆ ಇದೆ ಸೆಂಟ್ರಿ ಡೂಟಿಗೆ ಪೊಲೀಸ್ ಬರ್‍ತಾಇಲ್ಲ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಸರ್ಕಾರಿ ಅಧಿಕಾರಿಗಳಿಗೆ ಕಿರುಕುಳವಾಗುತ್ತಿದೆ. ಖಾಲಿ ಇರುವ ಸರ್ಕಾರಿ ಕೆಲಸವನ್ನು ಭರ್ತಿಮಾಡಬೇಕು. ಸರ್ಕಾರ ೭ನೇ ವೇತನ ಆಯೋಗ ಭರವಸೆಯನ್ನು ಕೊಡುವುದನ್ನು ಬಿಟ್ಟು ಕೂಡಲೇ ಜಾರಿ ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.