ಚನ್ನಪಟ್ಟಣ: ರಾಜಸಭಾ ಚುನಾವಣೆಯಲ್ಲಿ ಗೆದ್ದ ನಾಸೀರ್ ಹುಸೇನ್ ಅವರ ಬೆಂಬಲಿಗರು ಪಾಕಿಸ್ಥಾನಕ್ಕೆ ಜೈಕಾರ ಹಾಕಿರುವುದು ಖಂಡನೀಯವಾಗಿದ್ದು, ಕೂಡಲೇ ಆತನನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕಕಜ ವೇದಿಕೆ ರಾಜ್ಯಾಧ್ಯಕ್ಷ ರಮೇಶ್‌ಗೌಡ ಆಗ್ರಹಿಸಿದರು.
ಪಟ್ಟಣದ ಕಾವೇರಿ ಸರ್ಕಲ್‌ನಲ್ಲಿ ಪ್ರತಿಭಟನೆ ಮಾಡಿ ಮಾತನಾಡಿದ ಅವರು, ಈ ನಾಡಿನ ಗಾಳಿ, ನೀರು, ಎಲ್ಲವನ್ನು ಪಡೆದು ಜೀವನ ಕಟ್ಟಿಕೊಂಡಿರುವ ವ್ಯಕ್ತಿ ನಮ್ಮದೇಶದ ವಿರುದ್ಧ ಬಯೋತ್ಪಾದನಾ ಚಟುವಟಿಕೆ ಮಾಡಿವ ಪಾಕಿಸ್ಥಾನದ ಪರ ಜೈಕಾರ ಹಾಕುವ ದೇಶದ್ರೋಹಿಗಳಿಗೆ ಕಠಿಣ ಶಿಕ್ಷೆ ಆಗಬೇಕು, ಅಭಿಮಾನದ ಹೆಸರಲ್ಲಿ ಪಾಕಿಸ್ಥಾನದ ಪರ ಜೈಕಾರ ಹಾಕುವಂತರನ್ನು ಜೊತೆಯಲ್ಲಿಟ್ಟುಕೊಂಡಿರುವವರನ್ನು ರಾಜ್ಯಸಭೆಗೆ ಆಯ್ಕೆ ಮಾಡಿಕಳಿಸಿರುವ ಬಗ್ಗೆ ನಮ್ಮ ಜನಪ್ರತಿನಿಧಿಗಳು ಚಿಂತನೆ ಮಾಡಬೇಕು ಎಂದು ಕುಟುಕಿದರು.
ಪಾಕಿಸ್ಥಾನದ ಪರ ಜೈಕಾರ ಹಾಕಿದ ಕಾರ್ಯಕರ್ತನಿಗೆ ಕಪಾಳ ಮೋಕ್ಷ ಮಾಡುವ ಬದಲು ಇದನ್ನು ಪ್ರಶ್ನೆ ಮಾಡಲು ಮುಂದಾದ ಮಾಧ್‌ಯಮಗಳ ಮೇಲೆ ದಬ್ಬಾಳಿಕೆ ಮಾಡಿರುವ ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್‌ರ ಕ್ರಮ ಖಂಡನೀಯವಾಗಿದ್ದು ಇವರು ಮಾಧ್ಯಮಗಳೊಗೆ ಬಹಿರಂಗ ಕ್ಷಮೆ ಕೇಳಬೇಕು. ಅಲ್ಲಿಯವರೆಗೆ ಯಾವ ಮಾಧ್ಯಮಗಳು ಇವರ ಬಗ್ಗೆ ವರದಿ ಮಾಡಬಾರದು ಎಂದು ಆಗ್ರಹಿಸಿದರು.
ಸಂದರ್ಭದಲ್ಲಿ ವೇದಿಕೆಯ ಜಿಲ್ಲಾಧ್ಯಕ್ಷ ಬೇವೂರು ಯೋಗೀಶ್ ಗೌಡ ಬೆಳಕು ಶ್ರೀಧರ್, ವೆಂಕಟೇಶ್, ಮೆಣಸಿಗನಹಳ್ಳಿ ರಾಮಕೃಷ್ಣಪ್ಪ, ಹನುಮಂತನಗರ ವೆಂಕಟರಮಣ, ವೇದಿಕೆ ಗೌರವಾಧ್ಯಕ್ಷ ಚಿಕ್ಕಣ್ಣಪ್ಪ, ನಿವೃತ್ತ ಶಿಕ್ಷಕ ಪುಟ್ಟಪ್ಪಾಜಿ, ಸಾಹಿತಿ ಕೂರಣಗೆರೆ ಕೃಷ್ಣಪ್ಪ, ಆರ್.ಶಂಕರ್, ಡ್ರೈವರ್ ಶಿವಣ್ಣ, ಸಯ್ಯದ್ ಮುಜಾಹಿದ್ ಇತರರು ಇದ್ದರು.