Sunday, April 20, 2025
Google search engine

Homeರಾಜ್ಯಹೇಮಾವತಿ ಜಲಾಶಯದ ನೀರಿನ ಮಟ್ಟ ನಾಲ್ಕು ದಶಕಗಳಲ್ಲೇ ಕನಿಷ್ಠ ಮಟ್ಟಕ್ಕೆ ಕುಸಿತ

ಹೇಮಾವತಿ ಜಲಾಶಯದ ನೀರಿನ ಮಟ್ಟ ನಾಲ್ಕು ದಶಕಗಳಲ್ಲೇ ಕನಿಷ್ಠ ಮಟ್ಟಕ್ಕೆ ಕುಸಿತ

ಹಾಸನ: ಹೇಮಾವತಿ ಜಲಾಶದ ನೀರಿನ ಮಟ್ಟ ನಾಲ್ಕು ದಶಕಗಳಲ್ಲೇ ಮೊದಲ ಬಾರಿಗೆ ಮಾರ್ಚ್ ವೇಳೆಗೆ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಇದು ಗರಿಷ್ಠ 2922 ಅಡಿ 37 ಟಿಎಂಸಿ ಸಾಮರ್ಥ್ಯದ ಜಲಾಶಯವಾಗಿದ್ದು, ಶುಕ್ರವಾರ (ಮಾರ್ಚ್ 1) ಜಲಾಶಯದಲ್ಲಿ 2888 ಅಡಿ ಮಾತ್ರ ನೀರಿದೆ.

ಕಳೆದ ವರ್ಷ ಇದೆ ದಿನ ಜಲಾಶಯದಲ್ಲಿ 21 ಟಿಎಂಸಿ ನೀರು ಸಂಗ್ರವಿತ್ತು. ಇಂದು 13 ಟಿಎಂಸಿ ನೀರು ಮಾತ್ರ ಬಾಕಿ ಇದೆ. ಕಳೆದ ವರ್ಷ 17 ಟಿಎಂಸಿ ಬಳಕೆಗೆ ಲಭ್ಯವಿದ್ದ ನೀರು, ಈಬಾರಿ ಕೇವಲ 9 ಟಿಎಂಸಿ ಮಾತ್ರ ಲಭ್ಯವಿದೆ. ಇದರಿಂದಾಗಿ ಜಲಾಶಯದ ನೀರನ್ನೇ ನಂಬಿರುವ ಜಿಲ್ಲೆಯ ಬಹುತೇಕ ಜನರು ಸಂಕಷ್ಟಕ್ಕೀಡಾಗಿದ್ದಾರೆ.

ನಿತ್ಯ ಜಿಲ್ಲಾ‌ ಕೇಂದ್ರ ಹಾಸನಕ್ಕೆ ನಿತ್ಯ 30 ಎಂಎಲ್​​​ಡಿ ನೀರು ಅವಶ್ಯಕತೆ ಇದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಕುಡಿಯುವ ನೀರಿಗೆ ದೊಡ್ಡ ಸಮಸ್ಯೆ ಎದುರಾಗು ಸಾಧ್ಯತೆ ಇದೆ.

ಕಾವೇರಿ ಜಲಾನಯನ ಪ್ರದೇಶದ ಅಣೆಕಟ್ಟೆಗಳಾದ ಕಬಿನಿ, ಕೆ.ಆರ್​​ಎಸ್ ​ಗಳಲ್ಲಿಯೂ ಈ ಬಾರಿ ನೀರಿನ ಸಂಗ್ರಹ ಕಡಿಮೆ ಇದೆ. ಉತ್ತರ ಕರ್ನಾಟಕದ ಕೃಷ್ಣಾ, ತುಂಗಭದ್ರಾ ನದಿಗಳಲ್ಲಿಯೂ ನೀರು ಬತ್ತಿ ಹೋಗಿದೆ. ಪರಿಣಾಮವಾಗಿ ಬಹುತೇಕ ಜಲಾಶಯಗಳು ತುಂಬಾ ಕಡಿಮೆ ನೀರಿನ ಸಂಗ್ರಹ ಹೊಂದಿವೆ.

ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವು ಕಡೆಗಳಲ್ಲಿ ಈಗಾಗಲೇ ಜನ ನೀರಿನ ಕೊರತೆ ಎದುರಿಸುತ್ತಿದ್ದಾರೆ.  

ಕೋಲಾರ, ಚಿಕ್ಕಮಗಳೂರು ಸೇರಿ ಹಲವು ಜಿಲ್ಲೆಗಳಲ್ಲಿ ಜಲಮೂಲಗಳು ಬತ್ತಿಹೋಗಿವೆ. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಬೇಸಿಗೆ ಆರಂಭಕ್ಕೂ ಮುನ್ನವೇ ಚಿಕ್ಕಮಗಳೂರಿನಲ್ಲಿ ಕುಡಿಯುವ ನೀರಿಗೆ ತತ್ವಾರ ಉಂಟಾಗಿದೆ.

RELATED ARTICLES
- Advertisment -
Google search engine

Most Popular