Saturday, April 19, 2025
Google search engine

Homeರಾಜ್ಯಶಕ್ತಿ ಯೋಜನೆಗೆ 6,100 ಹೊಸ ಬಸ್‌ ಸೇರ್ಪಡೆ: ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ

ಶಕ್ತಿ ಯೋಜನೆಗೆ 6,100 ಹೊಸ ಬಸ್‌ ಸೇರ್ಪಡೆ: ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರ ಶಕ್ತಿ ಯೋಜನೆ ಜಾರಿ ಮಾಡಿರುವುದರಿಂದ ಪ್ರಯಾಣಿಕರ ಸಂಖ್ಯೆ ಹೆಚ್ಚಿದೆ, ಹೀಗಾಗಿ ಮುಂದಿನ 12 ತಿಂಗಳುಗಳಲ್ಲಿ ಸುಮಾರು 6,100 ಹೊಸ ಬಸ್‌ ಗಳನ್ನು ಸೇವೆಗೆ ಸೇರಿಸಲು ಗುರುವಾರ ಸಂಜೆ ನಡೆದ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.

260 ಬಸ್‌ಗಳನ್ನು ಖರೀದಿಸಲು ಮಂಜೂರಾತಿ ನೀಡಲಾಗಿದ್ದು, ಅದರಲ್ಲಿ 100 ಪಲ್ಲಕ್ಕಿ ನಾನ್‌ ಎಸಿ ಬಸ್‌ ಗಳು, 120 ನಾನ್‌ಎಸಿ ಬಸ್‌ ಗಳು ಮತ್ತು ಉತ್ತರ ಕರ್ನಾಟಕಕ್ಕಾಗಿ 40 ಎಸಿ ಬಸ್‌ ಗಳಿಗೆ ಅನುಮೋದನೆ ನೀಡಲಾಗಿದೆ. 50 ಕೋಟಿ ವೆಚ್ಚದಲ್ಲಿ ಸ್ಟಾರ್ಟ್‌ ಅಪ್‌ ಗಳನ್ನು ಪ್ರೋತ್ಸಾಹಿಸುವ ಯೋಜನೆಗಳ ಜೊತೆಗೆ ರಾಜ್ಯಾದ್ಯಂತ ಕೈಗಾರಿಕಾ ಶ್ರೇಷ್ಠತೆಯ ಕೇಂದ್ರಗಳನ್ನು ಸರ್ಕಾರ ಸ್ಥಾಪಿಸಲಿದೆ.

ಹೊಸ ಅಧ್ಯಕ್ಷ ಶರತ್ ಬಚ್ಚೇಗೌಡ ಅಧಿಕಾರ ವಹಿಸಿಕೊಂಡ ಕೆಲವೇ ದಿನಗಳಲ್ಲಿ 2019 ಮತ್ತು 2023 ರ ನಡುವೆ ಕಿಯೋನಿಕ್ಸ್‌ನಲ್ಲಿ 200-300 ಕೋಟಿ ರೂಪಾಯಿ ಹಗರಣದ ಬಗ್ಗೆ ಚರ್ಚಿಸಲಾಯಿತು. ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ ಮತ್ತು ಸಂಬಳ ನೀಡಿಲ್ಲ ಎಂಬುದು ಸರ್ಕಾರದ ಗಮನಕ್ಕೆ ಬಂದಿದೆ. ಪ್ರಾಮಾಣಿಕವಾಗಿ ಕೆಲಸ ಮಾಡದವರ ಸಂಬಳ ತಡೆಹಿಡಿಯಲಾಗುವುದು ಮತ್ತು ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಸಂಪುಟ ಹೇಳಿದೆ.

RELATED ARTICLES
- Advertisment -
Google search engine

Most Popular