Saturday, April 19, 2025
Google search engine

HomeUncategorizedರಾಷ್ಟ್ರೀಯಲೋಕಸಭೆ ಚುನಾವಣೆ: ಪಕ್ಷದ ನಿರ್ಧಾರಕ್ಕೆ ಬದ್ಧ- ಕೆ ಅಣ್ಣಾಮಲೈ

ಲೋಕಸಭೆ ಚುನಾವಣೆ: ಪಕ್ಷದ ನಿರ್ಧಾರಕ್ಕೆ ಬದ್ಧ- ಕೆ ಅಣ್ಣಾಮಲೈ

ಚೆನ್ನೈ: ನಮ್ಮ ಪಕ್ಷದ ಹಿರಿಯರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಅದಕ್ಕೆ ನಾನು ಬದ್ಧ ಎಂದು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ ಅಣ್ಣಾಮಲೈ ಪ್ರತಿಕ್ರಿಯಿಸಿದ್ದಾರೆ.

ವೈಯಕ್ತಿಕ ಪೂರ್ವಾಗ್ರಹ ಅಥವಾ ಬಿಜೆಪಿಯಲ್ಲಿ ನನಗೆ ಆ ಸ್ಥಾನ ಬೇಕು ಈ ಸ್ಥಾನಬೇಕು ಎಂಬ ಬೇಡಿಕೆಯನ್ನು ನಾನು ಇಟ್ಟಿಲ್ಲ. ಅದು ನನಗೆ ಇಷ್ಟನೂ ಇಲ್ಲ ಎಂದು ಹೇಳಿದ್ದಾರೆ.

ಪಕ್ಷ ಏನು ಹೇಳಿದರೂ ನಾನು ಅದನ್ನು ಪಾಲಿಸಬೇಕು, ಅದು ಪಕ್ಷದ ಸ್ವಭಾವವಾಗಿದೆ. ಇಂದು ಪಕ್ಷವು ರಾಜ್ಯ ಮಟ್ಟದ ಯಾತ್ರೆಯನ್ನು ಪೂರ್ಣಗೊಂಡಿದೆ ಎಂದು ಹೇಳಿದ್ದಾರೆ. ರಾಜ್ಯದಲ್ಲಿ ಪಕ್ಷದ ಬೆಳವಣಿಗೆಯನ್ನು ಖಚಿತಪಡಿಸಿಕೊಳ್ಳಲು ಬಿಜೆಪಿ ನನಗೆ ಕೆಲವು ಜವಾಬ್ದಾರಿಯನ್ನು ನೀಡಿದೆ. ಅದನ್ನು ನಾನು ಈಗಾಗಲೇ ಪ್ರಾರಂಭಿಸಿದ್ದೇನೆ ಎಂದು ಹೇಳಿದ್ದಾರೆ.

ಮುಂಬರುವ ಲೋಕಸಭೆ ಸ್ಪರ್ಧೆಯ ಬಗ್ಗೆ ತಿಳಿಸಿದ ಅವರು, ನಾಳೆ ಬೆಳಿಗ್ಗೆ ಪಕ್ಷ ಅದನ್ನು ಮಾಡು ಎಂದು ಹೇಳಿದರೆ ನಾನು ಅದನ್ನು ಮಾಡುತ್ತೇನೆ. ನಾನು ಊಹಾಪೋಹಗಳಿಗೆ ಪ್ರತಿಕ್ರಿಯಿಸಲು ಹೋಗುವುದಿಲ್ಲ, ನಮ್ಮ ಹಿರಿಯ ರಾಷ್ಟ್ರೀಯ ನಾಯಕತ್ವವು ಯಾವುದೇ ನಿರ್ಧಾರವನ್ನು ತೆಗೆದುಕೊಂಡರೂ, ಅದನ್ನು ಪಾಲಿಸುವುದು ಮತ್ತು ಅದನ್ನು ತಮಿಳುನಾಡಿನಲ್ಲಿ ಕಾರ್ಯಗತಗೊಳಿಸುವುದು ನನ್ನ ಕರ್ತವ್ಯ ಎಂದು ಅಣ್ಣಾಮಲೈ ಹೇಳಿದ್ದಾರೆ.

ಬಿಜೆಪಿಯ ವಿರುದ್ಧ ಉದಯನಿಧಿ ಅವರ ಕಟು ಟೀಕೆಗಳ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅಣ್ಣಾಮಲೈ ಅವರ ಮಾತು ಚುನಾವಣೆಯಲ್ಲಿ ಯಾವುದೇ ಪರಿಣಾಮ ಬೀರುವುದಿಲ್ಲ. ಇನ್ನು ಅವರಲ್ಲಿ ಡಿಎಂಕೆ ನಾಯಕರ ಸಿನಿಮಾದ ಬಗ್ಗೆ ಕೇಳಿದಾಗ ಅದು ರಾಜ್ಯ ಸಚಿವರ “ವಿಫಲ ನಟ” ಎಂದು ಹೇಳಿದರು.

RELATED ARTICLES
- Advertisment -
Google search engine

Most Popular