Saturday, April 19, 2025
Google search engine

Homeಅಪರಾಧಕೋಟ: ವಿವಿಧೆಡೆ ಕಡೆ ಸರಣಿ ಕಳ್ಳತನ

ಕೋಟ: ವಿವಿಧೆಡೆ ಕಡೆ ಸರಣಿ ಕಳ್ಳತನ

ಕೋಟ: ಕೋಟ ಠಾಣೆಯ ಹಳ್ಳಾಡಿ-ಹರ್ಕಾಡಿಯ ಖಾಸಗಿ ಬಾರ್‌ ಸೇರಿದಂತೆ ವಿವಿಧ ಕಡೆಗಳಲ್ಲಿ ಸರಣಿ ಕಳ್ಳತನ ನಡೆದ ಘಟನೆ ಫೆ. 29ರಂದು ರಾತ್ರಿ ಸಂಭವಿಸಿದೆ.

ಬಾರ್‌ ನ ಬೀಗ ಒಡೆದ ಕಳ್ಳರು ಸುಮಾರು 50 ಸಾವಿರ ರೂ ಹಣ ಹಾಗೂ 4 ಸಾವಿರ ಮೌಲ್ಯದ ಮದ್ಯದ ಬಾಟಲಿಗಳನ್ನು ಕಳವು ಮಾಡಿದ್ದಾರೆ. ಈ ಕುರಿತು ಕೋಟ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನಾ ಸ್ಥಳಕ್ಕೆ ಉಡುಪಿ ಡಿವೈಎಸ್‌ಪಿ ಪ್ರಭು ಡಿ.ಟಿ., ಬ್ರಹ್ಮಾವರ ವೃತ್ತನಿರೀಕ್ಷಕ ದಿವಾಕರ ಪಿ.ಎಂ., ಕೋಟ ಪೊಲೀಸ್‌ ಠಾಣೆ ಉಪನಿರೀಕ್ಷಕ ತೇಜಸ್ವಿ, ಕ್ರೈಂ ವಿಭಾಗದ ಉಪನಿರೀಕ್ಷಕಿ ಸುಧಾ ಪ್ರಭು, ಹಾಗೂ ಸಿಬಂದಿಗಳಾದ ರಾಘು, ಪ್ರಸನ್ನ, ವಿಜಯ್‌ ಮೊದಲಾದವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಕೋಟ ಮೂಕೈಯಿಂದ ಸ್ಯಾಬ್ರಕಟ್ಟೆ ರಸ್ತೆಯಲ್ಲಿ ಹಾರ್ಡ್‌ ವೇರ್‌, ಗ್ರಾಮ ಒನ್‌ ಕೇಂದ್ರ, ಬಾರ್‌ ಸಮೀಪದ ಬೀಡ ಅಂಗಡಿ, ಎರಡು ಕಿರಾಣಿ ಅಂಗಡಿಗಳಿಗೆ ನುಗ್ಗಿದ ಕಳ್ಳರು ಬೀಗ ಮುರಿದು ಒಳನುಗ್ಗಿದ್ದಾರೆ. ಆದರೆ ಕೆಲವು ಕಡೆ ಹೆಚ್ಚಿನ ಮೊತ್ತ ಸಿಕ್ಕಿಲ್ಲ. ನಗದು ಸಿಗದ ಕಡೆಗಳಲ್ಲಿ ದೇವರ ಡಬ್ಬಿಯನ್ನು ಬಿಡದೆ ಕದ್ದೊಯ್ದಿದ್ದಾರೆ ಎನ್ನಲಾಗಿದೆ.

ಹಳ್ಳಾಡಿ-ಹರ್ಕಾಡಿ ಎರಡು ಕಡೆ, ಸ್ಯಾಬ್ರಕಟ್ಟೆ ಒಂದು ಅಂಗಡಿ ಸೇರಿದಂತೆ ಮೂರು ಪ್ರಕರಣಗಳು ಮಾತ್ರ ದಾಖಲಾಗಿದ್ದು, ಹೆಚ್ಚಿನ ಮೊತ್ತ ಕಳವಾಗಿಲ್ಲ ಎನ್ನುವ ಕಾರಣಕ್ಕೆ ಕೆಲವು ಅಂಗಡಿ ಮಾಲೀಕರು ದೂರು ನೀಡಿಲ್ಲ.

RELATED ARTICLES
- Advertisment -
Google search engine

Most Popular