Saturday, April 19, 2025
Google search engine

Homeರಾಜ್ಯಮಕ್ಕಳ ಶಿಕ್ಷಣದ ನೈಜ ಸಾಮರ್ಥ್ಯ ಅಳೆಯಲು ಅವರನ್ನು ಓದಿನ ಸ್ಪರ್ಧೆಗೆ ಇಳಿಸಬೇಕು: ಕೆ.ಬಿ.ಪ್ರಕಾಶ್

ಮಕ್ಕಳ ಶಿಕ್ಷಣದ ನೈಜ ಸಾಮರ್ಥ್ಯ ಅಳೆಯಲು ಅವರನ್ನು ಓದಿನ ಸ್ಪರ್ಧೆಗೆ ಇಳಿಸಬೇಕು: ಕೆ.ಬಿ.ಪ್ರಕಾಶ್

ವರದಿ: ವಿನಯ್ ದೊಡ್ಡಕೊಪ್ಪಲು 

ಕೆ.ಆರ್.ನಗರ:  ಮಕ್ಕಳ ಶಿಕ್ಷಣದ ನೈಜ ಸಾಮರ್ಥ್ಯವನ್ನು ಅಳೆಯಬೇಕಾದರೇ ಅವರಿಗೆ ಓದಿನ ಸ್ಪರ್ಧೆಗೆ ಇಳಿಸಬೇಕು ಎಂದು ಹೊಸೂರು ಹಾರಂಗಿ ಉಪವಿಭಾಗದ ನಿವೃತ್ತ ಎಇಇ ಕೆ.ಬಿ.ಪ್ರಕಾಶ್ ಹೇಳಿದರು.

  ಕೆ.ಆರ್.ನಗರ ತಾಲೂಕಿನ ಕಂಚಗಾರಕೊಪ್ಪಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಮಕ್ಕಳ ಭೌದ್ದಿಕಾ ಕಲಿಕಾ ಕಾರ್ಯಕ್ರಮದಲ್ಲಿ‌ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.

 ಪ್ರಶಸ್ತಿಗಳು ಮಕ್ಕಳ ಉತ್ತಮ ನಡುವಳಿಕೆಯನ್ನು ಪ್ರೋತ್ಸಾಹಿಸಲು ಮತ್ತು ಅವರಲ್ಲಿ ಇರುವ ಸ್ಪರ್ಧಾತ್ಮಕ ಮನೋಭಾವನ್ನು ಬೆಳೆಸಲು ಸಹಕಾರಿಯಾಗಿದ್ದು ಭೌದ್ದಿಕ ಕಲಿಕಾ ಕಾರ್ಯಕ್ರಮದಲ್ಲಿ ಮಕ್ಕಳ ಶಿಕ್ಷಣಕ್ಕೆ ಸಂಬಂಧಿಸಿದ ವಿವಿಧ ವಿಷಯಗಳಲ್ಲಿ‌ ಸ್ಪರ್ದೆಗಳನ್ನು ಏರ್ಪಡಿಸಿ ಅವರ ಜ್ಞಾನವನ್ನು ಹೊರಗೆ ಹಚ್ಚುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಕಾರ್ಯಕ್ರಮದಲ್ಲಿ ವಿಜೇತರಾದ ಮಕ್ಕಳಿಗೆ‌ ಬೈಂಡ್ ಮತ್ತು ಲೇಖನ ಸಾಮಾಗ್ರಿಗಳು ವಿತರಿಸಲಾಯಿತು.ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕ ವಿಷ್ಣುಶೆಟ್ಟಿ, ಶಿಕ್ಷಕರಾದ ಮಾರುತಿ,ಮಹೇಶ್, ಗ್ರಾಮದ ಯಜಮಾನರಾದ ಬಲರಾಮೇಗೌಡ ಸೇರಿದಂತೆ ಇನ್ನಿತರರು ಹಾಜರಿದ್ದರು.

RELATED ARTICLES
- Advertisment -
Google search engine

Most Popular