ಮೈಸೂರು: ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ನಗರದ ಬ್ರಹ್ಮೀಭೂತ ವಾಸುದೇವ ಮಹಾರಾಜ್ ಫೌಂಡೇಷನ್ ವತಿಯಿಂದ ಐವರು ಗಣ್ಯರಿಗೆ ವಿಶ್ವಮಾನ್ಯ ಯೋಗರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಜಿಲ್ಲಾ ಪತ್ರಕರ್ತರ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಯೋಗ ಕ್ಷೇತ್ರದಲ್ಲಿನ ಸಾಧನೆಗಾಗಿ ಬಿ.ಎನ್.ಎಸ್.ಅಯ್ಯಂಗಾರ್, ಡಾ.ಟಿ.ಎನ್.ಶಶಿಕುಮಾರ್, ಡಾ.ಸಿ.ರಮೇಶ್‌ಶೆಟ್ಟಿ, ಸಂತೋಷ್‌ಕುಮಾರ್, ಎಂ.ಮೋಹನ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಈ ವೇಳೆ ಸಮಾಜ ಸೇವಕ ರಘುರಾಂ ವಾಜಪೇಯಿ ಮಾತನಾಡಿ, ಉತ್ತಮ ಆರೋಗ್ಯ ಇದ್ದರೆ ಮಾತ್ರ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ. ಹೀಗಾಗಿ ಯೋಗಾಭ್ಯಾಸ ಇದಕ್ಕೆ ಅನುಕೂಲರವಾಗಿದೆ. ಮೈಸೂರು ಯೋಗ ನಗರಿ ಎಂದು ಖ್ಯಾತಿಗಳಿಸಲು ಮಹಾರಾಜರು ಸೇರಿದಂತೆ ಹಲವರು ಕಾರಣರಾಗಿದ್ದಾರೆ. ಇನ್ನು, ಈಗ ಪ್ರಶಸ್ತಿ ಸ್ವೀಕರಿಸಿದವರೆಲ್ಲರೂ ಯೋಗ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದವರಾಗಿದ್ದಾರೆಂದರು.
ಗೋಷ್ಠಿಯಲ್ಲಿ ಜಿಲ್ಲಾ ಕಸಾಪ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್, ನಾಗೇಂದ್ರ ಬಾಬು, ಅನಂತು, ಇನ್ನಿತರರು ಹಾಜರಿದ್ದರು.
ಯೋಗರತ್ನ ಪ್ರಶಸ್ತಿ ಪ್ರದಾನ
RELATED ARTICLES