ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಸತತ ಒಂದು ತಿಂಗಳ ಕಾಲ ನಡೆಯುವ ಇತಿಹಾಸಪ್ರಸಿದ್ದ ಕಪ್ಪಡಿ ಜಾತ್ರೆಗೆ ಬರುವ ಭಕ್ತಾಧಿಗಳಿಗೆ, ಯಾತ್ರಾರ್ಥಿಗಳಿಗೆ ಯಾವುದೆ ಕೊರತೆ ಆಗದಂತೆ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಸಂಬoಧಪಟ್ಟ ಅಧಿಕಾರಿಗಳು ಕೈಗೊಳ್ಳುವಂತೆ ಶಾಸಕ ಡಿ.ರವಿಶಂಕರ್ ಹೇಳಿದರು.
ತಾಲೂಕಿನ ಕಪ್ಪಡಿಕ್ಷೇತ್ರದಲ್ಲಿ ಜಾತ್ರಾ ಸಂಬoಧ ಕರೆಯಲಾಗಿದ್ದ ಪೂರ್ವಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಅಧಿಕಾರಿಗಳು ಮತ್ತು ಮುಖಂಡರು ಭಕ್ತಾಧಿಗಳಿಂದ ಕೇಳಿಬಂದ ಅನಿಸಿಕೆಗಳನ್ನು ಆಲಿಸಿ ನಂತರ ಮಾತನಾಡಿದರು. ನಿರಂತರ ವಿದ್ಯುತ್ ಪೂರೈಕೆ ಮಾಡುವಂತೆ ಸೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದ ಶಾಸಕರು, ಹೆಬ್ಬಾಳು ಗ್ರಾಮ ಪಂಚಾಯಿತಿ ವತಿಯಿಂದ ಸ್ವಚ್ಚತೆ ಹಾಗೂ ದ್ವಿಚಕ್ರ ವಾಹನನಿಲ್ದಾಣ, ಭಾರಿ ವಾಹನನಿಲ್ದಾಣ ಇನ್ನಿತರ ಕೆಲಸಗಳನ್ನು ನಿರ್ವಹಿಸುವಂತೆ ಹೇಳಿದರು.
ಸಮಗ್ರ ಶುದ್ದ ಕುಡಿಯುವ ನೀರು ಪೂರೈಸುವ ದೃಷ್ಟಿಯಿಂದ ಸೂಕ್ತ ಸ್ಥಳದಲ್ಲಿ ಎರಡು ಬೋರ್‌ವೆಲ್ ಕೊರೆಸಿ ಸಂಪರ್ಕ ಕಲ್ಪಿಸುವಂತೆ ಕುಡಿಯುವ ನೀರು ಇಲಾಖೆ ಎಇಇ ರಾಜಾರಾಂವೈಲಾಯರಿಗೆ ಸೂಚಿಸಿದ ಶಾಸಕರು, ಮೈಸೂರು ರಸ್ತೆಯ ದೊಡ್ಡೆಕೊಪ್ಪಲು ಗ್ರಾಮದ ಬಳಿಯಿಂದ ಹಾಸನ-ಮೈಸೂರು ಮುಖ್ಯರಸ್ತೆ ಹಾಗೂ ಕಪ್ಪಡಿಗೆ ಬರುವ ಮುಖ್ಯರಸ್ತೆಗಳಲ್ಲಿ ಬರುವ ರಸ್ತೆ ಡುಬ್ಬಗಳಿಗೆ ಈ ಕೂಡಲೆ ರೇಡಿಯಂ ಬಣ್ಣ ಹಾಕಿ ಅಪಘಾತ ತಪ್ಪಿಸುವಂತೆ ಲೋಕೋಪಯೋಗಿ ಇಲಾಖೆ ಎಇಇ ಸುಮಿತರಿಗೆ ಹೇಳಿದರು.
ಸಮರ್ಪಕ ಸಾರಿಗೆ ವ್ಯವಸ್ಥೆ ಕಲ್ಪಿಸುವಂತೆ ಸಾರಿಗೆ ಘಟಕ ವ್ಯವಸ್ಥಾಪಕ ಮಹೇಶ್‌ರಿಗೆ ಹೇಳಿದ ಅವರು, ಎಲ್ಲೆಡೆ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಬಿಗಿಪೋಲೀಸ್ ಬಂದೋಬಸ್ತ್ ಏರ್ಪಡಿಸಿ, ಮದ್ಯ ಮಾರಾಟ ತಡೆಯುವಂತೆ ಹಾಗೂ ಕಪ್ಪಡಿ ಸಿಬ್ಬಂದಿ, ಪತ್ರಕರ್ತರು ಹಾಗೂ ಪ್ರಮುಖರಿಗೆ ಪಾಸ್ ವ್ಯವಸ್ಥೆ ಕಲ್ಪಿಸುವಂತೆ ಸಬ್‌ಇನ್ಸ್ಪೆಕ್ಟರ್ ಯತೀಶ್‌ರಿಗೆ ಸೂಚಿಸಿದರು.
ಕ್ಷೇತ್ರದಲ್ಲಿ ಅಂಬ್ಯುಲೆನ್ಸ್ ನೀಡುವುದಲ್ಲದೆ ತಾತ್ಕಾಲಿಕ ಆಸ್ಪತ್ರೆಯೊಂದಿಗೆ ಹಾವು, ನಾಯಿ ಕಡಿತದ ಔಷಧಿಯನ್ನು ಸದಾ ಇಡುವಂತೆ ೨೪*೭ ಸಿಬ್ಬಂದಿ ನೇಮಕ ಮಾಡಿ ಯಾತ್ರಾರ್ಥಿಗಳ ಆರೋಗ್ಯದ ಬಗ್ಗೆ ಹೆಚ್ಚು ಗಮನಹರಿಸುವಂತೆ ತಾಲೂಕು ಆರೋಗ್ಯಾಧಿಕಾರಿ ಡಾ.ಡಿ.ನಟರಾಜ್‌ರಿಗೆ ಹೇಳಿದರು.
ಮಹಿಳೆಯರಿಗಾಗಿ ಸ್ನಾನದ ಮನೆ, ಬಟ್ಟೆ ಬದಲಿಸಲು ತಾತ್ಕಾಲಿಕ ಕೊಠಡಿಗಳ ನಿರ್ಮಾಣ, ಶೌಚಾಲಯ ನಿರ್ಮಾಣದೊಂದಿಗೆ ಸ್ವಚ್ಚತೆಗೆ ಆದ್ಯತೆ ನೀಡುವಂತೆ ಕಪ್ಪಡಿಕ್ಷೇತ್ರದ ಲಿಂಗರಾಜ್‌ರಿಗೆ ಸೂಚಿಸಿದರು.
ತಾಲೂಕಿನ ನಡೆಯುವ ಯಾವುದೆ ಪೂರ್ವಭಾವಿ ಸಭೆ ಹಾಗೂ ಅಧಿಕೃತ ಸರಕಾರಿ ಸಭೆ ಸಮಾರಂಭಗಳಿಗೆ ಬಾರದ ಅಬಕಾರಿ ಇನ್ಸ್ಪೆಕ್ಟರ್ ವಿರುದ್ದ ಗರಂಆದ ಶಾಸಕರು ಅಬಕಾರಿ ಇಲಾಖೆ ಅಧಿಕಾರಿ ವಿರುದ್ದ ನೋಟೀಸ್ ಜಾರಿಮಾಡಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ತಹಸೀಲ್ದಾರ್‌ರಿಗೆ ಸೂಚಿಸಿದರು.
ಸಭೆಯಲ್ಲಿ ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾ, ತಾ.ಪಂ.ಇಒ ಜಿ.ಕೆ.ಹರೀಶ್, ಬಿಇಒ ಆರ್.ಕೃಷ್ಣಪ್ಪ, ತಾ.ಆರೋಗ್ಯಾಧಿಕಾರಿ ಡಾ.ಡಿ.ನಟರಾಜ್, ಗ್ರಾಮೀಣ ಕುಡಿಯುವನೀರು ಇಲಾಖೆ ಎಇಇ ರಾಜಾರಾಂವೈಲಾಯ, ಜಿ.ಪಂ.ಎಇಇ ವಿನುತ್, ಪಿಡಬ್ಲೂಡಿ ಎಇಇ ಸುಮಿತ, ಸಾರಿಗೆ ಘಟಕ ವ್ಯವಸ್ಥಾಪಕ ಮಹೇಶ್, ಸೆಸ್ಕಾಂನ ಜೆಇ ಕಾಶೀನಾಥ್, ಆರೋಗ್ಯ ಇಲಾಖೆ ಕೆ.ವಿ.ರಮೇಶ್ ಹೆಬ್ಬಾಳು ಗ್ರಾ.ಪಂ.ಅಧ್ಯಕ್ಷೆ ಆಶಾ ಕಾಂಗ್ರೇಸ್ ಮುಖಂಡ ಹೆಬ್ಬಾಳುನಾಗೇoದ್ರ, ಅಪ್ಪಿ ಪ್ರಶನ್ನ, ರಾಜಶೇಖರ್, ಮಧು, ಸೋಮು, ಮಂಜುನಾಥ್, ಕಪ್ಪಡಿ ಕ್ಷೇತ್ರದ ಲಿಂಗರಾಜ್, ಭರತ್, ಮತ್ತಿತರರು ಹಾಜರಿದ್ದರು.