Sunday, April 20, 2025
Google search engine

HomeUncategorizedರಾಷ್ಟ್ರೀಯದೇಶದ ಮೊದಲ ನೀರಿನಾಳದ ಮೆಟ್ರೋ ಮಾರ್ಗಕ್ಕೆ ಇಂದು ಪ್ರಧಾನಿ ಚಾಲನೆ

ದೇಶದ ಮೊದಲ ನೀರಿನಾಳದ ಮೆಟ್ರೋ ಮಾರ್ಗಕ್ಕೆ ಇಂದು ಪ್ರಧಾನಿ ಚಾಲನೆ

ಕೋಲ್ಕತಾ: ದೇಶದ ಸಾರಿಗೆ ಇತಿಹಾಸದಲ್ಲಿ ಮಾ. 6 ಮಹತ್ವದ ದಿನವಾಗಲಿದೆ. ಪಶ್ಚಿಮ ಬಂಗಾಲದ ಹೌರಾ ಮೈದಾನ- ಎಸ್‌ ಪ್ಲಾಂಡೆ ಮಧ್ಯೆ ಹೂಗ್ಲಿ ನದಿ (ಗಂಗಾ)ಯ ಕೆಳಗೆ ನೀರಿನಾಳದಲ್ಲಿ ನಿಮಿಸಿರುವ ಮೆಟ್ರೋ ಮಾರ್ಗಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ.

ಇದು ದೇಶದ ಮೊದಲ ನೀರಿನಾಳದ ಮೆಟ್ರೋ ಮಾರ್ಗ ಎಂಬ ಖ್ಯಾತಿಗೆ ಪಾತ್ರವಾಗಿದೆ. ಕೋಲ್ಕತಾ ಮೆಟ್ರೋದ 16.6 ಕಿಲೋಮೀಟರ್‌ ಉದ್ದದ ಪೂರ್ವ-ಪಶ್ಚಿಮ ಮೆಟ್ರೋ ಮಾರ್ಗ­ದಲ್ಲಿ 10.8 ಕಿ.ಮೀ. ಮಾರ್ಗ ಸುರಂಗದಲ್ಲಿದ್ದರೆ, 5.75 ಕಿ.ಮೀ. ಎತ್ತರಿಸಿದ ಮಾರ್ಗದಲ್ಲಿದೆ. ಈ ಪೈಕಿ 4.8 ಕಿ.ಮೀ.ಹೌರಾ ಮೈದಾನ- ಎಸ್‌ಪ್ಲಾಂಡೆ ಮಧ್ಯೆ ಇದೆ. ಈ ಮಾರ್ಗ 6 ನಿಲ್ದಾಣಗಳನ್ನು ಹೊಂದಿದ್ದು ಈ ಪೈಕಿ ಮೂರು ಸುರಂಗದಲ್ಲಿ ಬರುತ್ತವೆ. ಹೂಗ್ಲಿ ನದಿಯ ಕೆಳಭಾಗದಲ್ಲಿ 520 ಮೀಟರ್‌ ಕ್ರಮಿಸಲು ಕೇವಲ 45 ಸೆಕೆಂಡ್‌ಗಳು ಸಾಕು. ಹೂಗ್ಲಿ ನಿಲ್ದಾಣ ದೇಶದ ಅತೀ ಆಳದ ನಿಲ್ದಾಣ ಎಂಬ ಖ್ಯಾತಿಗೆ ಪಾತ್ರವಾಗಿದೆ.

ಕಳೆದ ವರ್ಷದ ಎಪ್ರಿಲ್‌ ನಲ್ಲೇ ಕೋಲ್ಕತಾ ಮೆಟ್ರೋ ಸುರಂಗ ಮಾರ್ಗದ ಹೂಗ್ಲಿ ನದಿಯ ಕೆಳಗೆ ನೀರಿನಾಳದಲ್ಲಿ ಮೆಟ್ರೋ ರೈಲು ಓಡಿಸುವಲ್ಲಿ ಯಶಸ್ವಿಯಾಗಿತ್ತು. ಇದರಿಂದ ಹೌರಾ- ಕೋಲ್ಕತಾ ಅವಳಿ ಸಿಟಿ ಸಂಪರ್ಕ ಸುಗಮವಾಗಲಿದೆ.

RELATED ARTICLES
- Advertisment -
Google search engine

Most Popular