Tuesday, April 22, 2025
Google search engine

Homeಅಪರಾಧನಿಂತಿದ್ದ ಟ್ರಕ್ ​ಗೆ ಕಾರು ಡಿಕ್ಕಿ: ಒಂದೇ ಕುಟುಂಬದ ನಾಲ್ವರು ಸಾವು

ನಿಂತಿದ್ದ ಟ್ರಕ್ ​ಗೆ ಕಾರು ಡಿಕ್ಕಿ: ಒಂದೇ ಕುಟುಂಬದ ನಾಲ್ವರು ಸಾವು

ಆಂಧ್ರಪ್ರದೇಶ: ನಿಂತಿದ್ದ ಟ್ರಕ್ ​ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ನವವಿವಾಹಿತರು ಸೇರಿ ಒಂದೇ ಕುಟುಂಬದ ನಾಲ್ಕು ಮಂದಿ ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದ ಅಲ್ಲಗಡ್ಡ ಮಂಡಲದ ನಲ್ಲಗಟ್ಲ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ಬೆಳಗ್ಗೆ ಸಂಭವಿಸಿದೆ.

ನಂದ್ಯಾಲ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಕೆ ರಘುವೀರಾ ರೆಡ್ಡಿ ಮಾತನಾಡಿ, ಕುಟುಂಬವು ತಿರುಪತಿಯ ದೇವಸ್ಥಾನಕ್ಕೆ ಭೇಟಿ ನೀಡಿ ಹಿಂತಿರುಗುತ್ತಿತ್ತು ಮತ್ತು ಬುಧವಾರ ಮುಂಜಾನೆ 5.15 ರ ಸುಮಾರಿಗೆ ನಲ್ಲಗಟ್ಲ ಗ್ರಾಮದಲ್ಲಿ ಅಪಘಾತ ಸಂಭವಿಸಿದೆ ಎಂದು ಹೇಳಿದ್ದಾರೆ.

ಟ್ರಕ್​ ಚಾಲಕ ಗಾಡಿಯನ್ನು ರಸ್ತೆಯ ಬದಿಗೆ ನಿಲ್ಲಿಸಿದ್ದರು, ಅದೇ ಸಮಯದಲ್ಲಿ ಕಾರೊಂದು ಬಂದು ಟ್ರಕ್ ​ಗೆ ಡಿಕ್ಕಿ ಹೊಡೆದಿದೆ. ಐದು ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಫೆಬ್ರವರಿ 29ರಂದು ವಿವಾಹವಾಗಿದ್ದರು, ಕುಟುಂಬವು ಸಿಕಂದರಾಬಾದ್‌ ನ ಅಲ್ವಾಲ್ ಪ್ರದೇಶದಕ್ಕೆ ಸೇರಿದೆ. ವಾರದ ಹಿಂದೆ ವಿವಾಹವಾಗಿದ್ದ ಬಾಲಕಿರಣ್ ಮತ್ತು ಕಾವ್ಯ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಬಾಲಕಿರಣ್‌ ನ ತಾಯಿ ಮಂತ್ರಿ ಲಕ್ಷ್ಮಿ ಮತ್ತು ತಂದೆ ಮಂತ್ರಿ ರವೀಂದರ್ ಮತ್ತು ಕಿರಿಯ ಸಹೋದರ ಉದಯ್ ಕೂಡ ಸಾವನ್ನಪ್ಪಿದ್ದಾರೆ.

ಮುಂಜಾನೆ 5.15ರ ಸುಮಾರಿಗೆ ರಸ್ತೆಬದಿಯಲ್ಲಿ ನಿಂತಿದ್ದ ಟ್ರಕ್ ಅನ್ನು ಕಾರು ಚಲಾಯಿಸುತ್ತಿದ್ದ ವ್ಯಕ್ತಿ ಗಮನಿಸದೇ ಇದ್ದುದರಿಂದ ಈ ಅವಘಡ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಪಘಾತದ ನಂತರ, ಪೊಲೀಸರು ಸಂತ್ರಸ್ತರೊಬ್ಬರ ಮೊಬೈಲ್ ಫೋನ್‌ ನಿಂದ ಅವರ ಸಂಬಂಧಿಕರಿಗೆ ಕರೆ ಮಾಡಿ, ಮೃತದೇಹಗಳನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಿದ್ದಾರೆ.

ಕಾರಿನಲ್ಲಿದ್ದ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಹೈದರಾಬಾದ್ ಮೂಲದ ಕುಟುಂಬ ತಿರುಪತಿಯಿಂದ ತಿರುಮಲ ದೇವಸ್ಥಾನದಲ್ಲಿ ದರ್ಶನ ಮುಗಿಸಿ ಮನೆಗೆ ಮರಳುತ್ತಿತ್ತು.

RELATED ARTICLES
- Advertisment -
Google search engine

Most Popular