ಮೈಸೂರು: ವರುಣಾ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆಗೆ ೨೨೪ ಕೋಟಿ ರೂಗಳನ್ನು ಬಿಡುಗಡೆ ಮಾಡಿರುವುದಾಗಿ ವರುಣಾ ಕ್ಷೇತ್ರದ ಮಾಜಿ ಶಾಸಕ ಆಶ್ರಯಸಮಿತಿ ಅಧ್ಯಕ್ಷ ಡಾ. ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.
ವರುಣಾಕ್ಷೇತ್ರದ ವರುಣಾದಲ್ಲಿ ಗುರುವಾರ ನಡೆದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆಯನ್ನು ನೆರವೇರಿಸಿ ಮಾತನಾಡಿದ ಅವರು ವರುಣಾಕ್ಷೇತ್ರವನ್ನು ಮಾದರಿ ಕ್ಷೇತ್ರವಾಗಿ ಮಾಡುವ ನಿಟ್ಟಿನಲ್ಲಿ ವರುಣಾಕ್ಷೇತ್ರದ ದೇವಸ್ಥಾನಗಳ ಅಭಿವೃದ್ಧಿಗೆ ೩ ಕೋಟಿ ೩೨ ಲಕ್ಷ, ಚರ್ಚ್‌ಗಳ ಅಭಿವೃದ್ಧಿಗೆ ೧ ಕೋಟಿ, ಗ್ರಾಮ ಪರಿಮಿತಿ ರಸ್ತೆ ಹಾಗೂ ನಾಲಾ ಅಭಿವೃದ್ಧಿಗೆ ೧೧೬ ಕೋಟಿ, ಜಿಲ್ಲಾ ಮುಖ್ಯರಸ್ತೆ ಹಾಗೂ ಸೇತುವೆ ಅಭಿವೃದ್ಧಿಗೆ ೫೦ ಕೋಟಿ, ಅಲ್ಪ ಸಂಖ್ಯಾತರ ಕಾಲೋನಿಗಳ ಅಭಿವೃದ್ಧಿಗೆ ೧೦ ಕೋಟಿ, ಗರ್ಗೇಶ್ವರಿ ಗ್ರಾಮದಲ್ಲಿ ಬಂಡಿ ಬಚ್ಚಲು ಕಾಮಗಾರಿಗೆ ೧ ಕೋಟಿ ೨೫ ಲಕ್ಷ ಪ್ರಾಚ್ಯ ವಸ್ತು ಇಲಾಖೆಯಿಂದ ೧ ಕೋಟಿ ೭೧ ಲಕ್ಷ, ಶಾಲಾ ಕೊಠಡಿ ನಿರ್ಮಾಣ ಹಾಗೂ ದುರಸ್ತಿಗೆ ೫ ಕೋಟಿ ೮೭ ಲಕ್ಷ, ಸಮುದಾಯ ಭವನ ಹಾಗೂ ಬಸ್ ನಿಲ್ದಾಣ ಕಾಮಗಾರಿಗೆ ೩೦ ಕೋಟಿ ಮಂಜೂರಾಗಿದ್ದು. ಈ ಎಲ್ಲಾ ಕಾಮಗಾರಿಗಳ ಶಂಕುಸ್ಥಾಪನೆಯನ್ನು ಮಾಡಿದ್ದೇವೆ. ಇದಲ್ಲದೆ ಸರ್ಕಾರಕ್ಕೆ ೬೨೦ ಕೋಟಿ ಕಾಮಗಾರಿಯ ಮಂಜೂರಾತಿಗೆ ಕಳಿಸಲಾಗಿದೆ ಶಾಸಕರ ನಿಧಿಯಿಂದ ೨ ಕೋಟಿ ಬಿಡುಗಡೆ ಮಾಡಲಾಗಿದೆ. ೧೫ ಜನ ಅಂಗವಿಕಲರಿಗೆ ಬ್ಯಾಟರಿ ಚಾಲಿತ ಸ್ಕೂಟರ್‌ಗಳನ್ನು ವಿತರಿಸಲಾಗಿದೆ.
ಕಾರ್ಮಿಕ ಇಲಾಖೆಯಿಂದ ೫೦ ಜನ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಿಸಿದ್ದೇವೆ ಎಂದ ಅವರು ಕಾಂಗ್ರೆಸ್ ಪಕ್ಷ ನುಡಿದಂತೆ ನಡೆದ ಪಕ್ಷವಾಗಿದೆ. ಎಲ್ಲಾ ಕ್ಷೇತ್ರಗಳ ಅಭಿವೃದ್ಧಿಗೂ ಹಣ ಬಿಡುಗಡೆ ಮಾಡುತ್ತಿದೆ. ಕೇವಲ ೯ ತಿಂಗಳಲ್ಲಿಯೇ ಎಲ್ಲಾ ಗ್ಯಾರಂಟಿಗಳನ್ನು ಈಡೇರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ಉತ್ತಮ ಬಜೆಟ್ ಅನ್ನು ನೀಡಿದ್ದಾರೆ. ಇದು ಸರ್ಕಾರದ ಸಾಧನೆಯಾಗಿದೆ. ಸಿದ್ದರಾಮಯ್ಯ ರವರು ಬುದ್ದ, ಬಸವಣ್ಣ, ಅಂಬೇಡ್ಕರ್ ತತ್ವ ಸಿದ್ದಾಂತದ ಮೇಲೆ ಅಧಿಕಾರ ನಡೆಸುತ್ತಿದ್ದು, ನಿಮ್ಮ ಪರ ಬಡವರ ಪರ ಯಾರಿದ್ದಾರೆ ಎಂಬುದನ್ನು ಅರಿತು ಮುಂದಿನ ಚುನಾವಣೆಯಲ್ಲಿ ಮತ ಚಲಾಯಿಸಿ ಬಿಟ್ಟಿ ಭಾಗ್ಯಗಳೆಂದು ಹಿಯಾಳಿಸುವವರಿಗೆ ತಕ್ಕ ಪಾಠ ಕಲಿಸಿ. ನಿಮ್ಮ ಹಣ ನಿಮಗೆ ಕೊಡುತಿದ್ದೇವೆ. ವರುಣಾಕ್ಷೇತ್ರದ ಸಂಪೂರ್ಣ ಅಭಿವೃದ್ಧಿ ಮುಖ್ಯಮಂತ್ರಿಗಳು ಬದ್ದರಾರಿದ್ದಾರೆ ಎಂದರು.
ಸಮಾರಂಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಗಸ್ವಾಮಿ, ವರುಣಾ ಮಹೇಶ್, ಮಂಜುಳಾ ಮಂಜುನಾಥ್, ಎಂ.ಟಿ. ರವಿಕುಮಾರ್. ಮಹೇಂದ್ರ, ಕೃಷ್ಣಮೂರ್ತಿ, ಮುದ್ದುರಾಮೇಗೌಡ, ಚಿಕ್ಕದೇವಯ್ಯ, ದೇವರಾಜ್, ಅಭಿ, ವೆಂಕಟೇಶ್, ಬಿಇಒ ವಿವೇಕಾನಂದ, ರಾಜೇಶ್ ಜಾದವ್, ಮುಖ್ಯಮಂತ್ರಿಗಳ ಆಪ್ತ ಸಹಾಯಕರಾದ ಶಿವಸ್ವಾಮಿ, ಪ್ರದೀಪ್‌ಕುಮಾರ್,ನಾಗರಾಜ್ ಹಾಜರಿದ್ದರು.