ಬೆಂಗಳೂರು: ಮಾರ್ಚ್ 1 ರಂದು ಸ್ಫೋಟ ಸಂಭವಿಸಿದ ನಂತರ ಬಂದ್ ಆಗಿದ್ದ ಬೆಂಗಳೂರಿನ ರಾಮೇಶ್ವರಂ ಕೆಫೆ ಶನಿವಾರ ಮತ್ತೆ ಆರಂಭವಾಗುತ್ತಿದೆ.
ಹೋಟೆಲ್ ನಲ್ಲಿ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ರಾಮೇಶ್ವರಂ ಕೆಫೆಯ ಮಾಲೀಕ ರಾಘವೇಂದ್ರ ರಾವ್ ಅವರು ಶುಕ್ರವಾರ ತಿಳಿಸಿದ್ದಾರೆ.
“ನಾವು ನಾಳೆ ಕೆಫೆಯನ್ನು ಪುನಃ ತೆರೆಯುತ್ತಿದ್ದೇವೆ. ರಾಷ್ಟ್ರಗೀತೆಯೊಂದಿಗೆ ಕೆಫೆಯನ್ನು ಪ್ರಾರಂಭಿಸುತ್ತೇವೆ. ಇದು ನಮ್ಮ ಮಂತ್ರ. ನಾವು ಎಲ್ಲಾ ಸಿಸಿಟಿವಿ ದೃಶ್ಯಾವಳಿ ಮತ್ತು ಮಾಹಿತಿಯನ್ನು ನೀಡಿದ್ದೇವೆ. ನಾವು ಪೊಲೀಸರೊಂದಿಗೆ ತನಿಖಿಗೆ ಸಹಕರಿಸುತ್ತಿದ್ದೇವೆ. ನಮಗೆ ಪುನಃ ಕೆಫೆ ತೆರೆಯಲು ಸಹಾಯ ಮಾಡಿದ್ದಕ್ಕಾಗಿ ಸರ್ಕಾರಕ್ಕೆ ತುಂಬಾ ಕೃತಜ್ಞರಾಗಿರುತ್ತೇವೆ ಎಂದು ರಾವ್ ಹೇಳಿದ್ದಾರೆ.
ಎನ್‌ಐಎ ಶೀಘ್ರದಲ್ಲೇ ಅಪರಾಧಿಯನ್ನು ಬಂಧಿಸುವ ವಿಶ್ವಾಸ ವ್ಯಕ್ತಪಡಿಸಿದ ರಾವ್, ಹೆಚ್ಚಿನ ಸಿಸಿಟಿವಿಗಳನ್ನು ಎಲ್ಲಿ ಅಳವಡಿಸಬೇಕು ಎಂಬುದರ ಕುರಿತು ಸರ್ಕಾರ ಮತ್ತು ಪೊಲೀಸರು ನಮಗೆ ಮಾರ್ಗದರ್ಶನ ನೀಡಿದ್ದಾರೆ. ನಾವು ಆವರಣದಲ್ಲಿ ನಿಗಾ ಇಡಲು ಒಬ್ಬ ವ್ಯಕ್ತಿಯನ್ನು ನೇಮಿಸುತ್ತೇವೆ” ಎಂದು ಅವರು ತಿಳಿಸಿದರು.
ಈ ಘಟನೆ ಭಾರತೀಯರ ಆತ್ಮಸ್ಥೈರ್ಯವನ್ನು ಕುಗ್ಗಿಸಿಲ್ಲ. ನಿಮ್ಮೆಲ್ಲರ ಸಹಕಾರದಿಂದ ಇಂದು ರಾಮೇಶ್ವರಂ ಕೆಫೆ ಪುನರ್ ಆರಂಭವಾಗುತ್ತಿರುವುದು ಇದಕ್ಕೆ ಸಾಕ್ಷಿ. ಇದು ನಿಜವಾದ ಭಾರತೀಯರ ಶಕ್ತಿ ಎಂದು ಹೇಳಿದ್ದಾರೆ.